Breaking News

ಮತ ಕೇಳಲು ಬಂದ್ರೆ ಗ್ರಹಚಾರ ಬಿಡಿಸ್ತೀವಿ :ಮಸ್ಕಿ ವಿಧಾನಸಭಾ ಕ್ಷೇತ್ರಜನ

Spread the love

ರಾಯಚೂರು: ಇಲ್ಲಿನ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಇನ್ನೂ ಉಪಚುನಾವಣೆಯೇ ಘೋಷಣೆಯಾಗಿಲ್ಲ. ಅದಾಗಲೇ ಈ ಗ್ರಾಮದ ಜನ ಶಾಲೆಗಾಗಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಕಳೆದ ಬಾರಿ ಬಹಿಷ್ಕಾರಕ್ಕೆ ಮುಂದಾದಾಗ ಭರವಸೆ ಕೊಟ್ಟು ಸುಮ್ಮನಾಗಿಸಿದ್ರು. ಹೀಗಾಗಿ ರೊಚ್ಚಿಗೆದ್ದಿರೋ ಜನ ಮತ ಕೇಳಲು ಬಂದ್ರೆ ಗ್ರಹಚಾರ ಬಿಡಿಸ್ತೀವಿ ಅಂತ ಎಚ್ಚರಿಸಿದ್ದಾರೆ.

ಹೌದು. ರಾಯಚೂರಿನ ಮಸ್ಕಿ ತಾ. ಬುದ್ದಿನ್ನಿಯಲ್ಲಿ ಸುಂದರ ಪರಿಸರದಲ್ಲಿ ಭವ್ಯ ಶಾಲಾ ಕಟ್ಟಡ ನಿರ್ಮಾಣವಾಗಿದೆ. ಆದರೆ ಈ ಕಟ್ಟಡ ಯಾವ ಶಾಲೆಗೆ ಎಂಬುದೇ ಗೊತ್ತಿಲ್ಲ. ಕಾರಣ ಈ ಗ್ರಾಮಕ್ಕೆ ಇದುವರೆಗೂ ಶಾಲೆಯೇ ಮಂಜೂರಾಗಿಲ್ಲ. ಕಟ್ಟಡ ಮಾತ್ರ ಪೂರ್ಣಗೊಂಡಿದೆ.

ಗ್ರಾಮದ ಮಕ್ಕಳು ಗ್ರಾಮದಲ್ಲೇ ಶಿಕ್ಷಣ ಮುಂದುವರೆಸಲು ಪ್ರೌಢಶಾಲೆಗೆ ಅನುಮತಿ ಸಿಗಬೇಕಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ತಲೆಕೆಡಿಸಿಕೊಳ್ತಿಲ್ಲ. ಈಗ ಸಿಟ್ಟಿಗೆದ್ದಿರುವ ಮುಂಬರುವ ಮಸ್ಕಿ ಉಪಚುನಾವಣೆ ಮತದಾನ ಬಹಿಷ್ಕರಿಸುವ ತೀರ್ಮಾನಿಸಿದ್ದಾರೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ