Breaking News

ಪೆನ್‌ಡ್ರೈವ್‌ ಹಾಗೂ ಅತ್ಯಾಚಾರ ಪ್ರಕರಣ : ಹಾಸನ- ಹೊಳೆನರಸೀಪುರಕ್ಕೆ ಎಸ್‌‍ಐಟಿ ತಂಡ

Spread the love

ಹಾಸನ, ಮೇ 29- ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ಹಾಗೂ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಎಸ್‌‍ಐಟಿ ತಂಡ ಮತ್ತೊಮೆ ಹಾಸನ ಹಾಗೂ ಹೊಳೆನರಸೀಪುರಕ್ಕೆ ಭೇಟಿ ನೀಡಿ ಮುಂಜಾನೆಯವರೆಗೂ ಪರಿಶೀಲನೆ ನಡೆಸಿದೆ.ಹಾಸನ ನಗರದ ಸಂಸದರ ನಿವಾಸ ಹಾಗೂ ಹೊಳೆನರಸೀಪುರದ ಎಚ್‌.ಡಿ.ರೇವಣ್ಣ ಅವರ ನಿವಾಸಕ್ಕೆ ಎಸ್‌‍ಐಟಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಪೆನ್‌ಡ್ರೈವ್‌ ಹಾಗೂ ಅತ್ಯಾಚಾರ ಪ್ರಕರಣ : ಹಾಸನ- ಹೊಳೆನರಸೀಪುರಕ್ಕೆ ಎಸ್‌‍ಐಟಿ ತಂಡ

ಈ ಹಿಂದೆ ಕೂಡ ಸ್ಥಳ ಮಹಜರು ನಡೆಸಿದ ಎಸ್‌‍ಐಟಿ ಅಧಿಕಾರಿಗಳು ಎಸಿಪಿ ಸತ್ಯನಾರಾಯಣ ನೇತೃತ್ವದಲ್ಲಿ ಎರಡೂ ನಿವಾಸಗಳಲ್ಲೂ ಮತ್ತೆ ಪರಿಶೀಲನೆ ನಡೆಸಿದ್ದಾರೆ.ಕೆಲದಿನಗಳ ಹಿಂದೆ ಹೊಳೆನರಸೀಪುರದ ರೇವಣ್ಣ ಅವರ ನಿವಾಸ ಮತ್ತು ಹಾಸನದ ಸಂಸದರ ನಿವಾಸದಲ್ಲಿ ರಾತ್ರಿಯೆಲ್ಲಾ ಎಸ್‌‍ಐಟಿ ತಂಡ ಪರಿಶೀಲನೆ ನಡೆಸಿತ್ತು. ಈ ವೇಳೆ ಮನೆಯಲ್ಲಿದ್ದ ಹಾಸಿಗೆ, ದಿಂಬು ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.


Spread the love

About Laxminews 24x7

Check Also

ಪರಿಷ್ಕರಣೆ ಹೆಸರಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ: ಸರ್ಕಾರದ ವಿರುದ್ಧ ಶ್ರೀರಾಮುಲು ಕಿಡಿ

Spread the loveಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿಪರಿಷ್ಕಣೆ ಹೆಸರಿನಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ ಮಾಡ್ತಿದೆ ಅಂತ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ