Breaking News
Home / ಅಂತರಾಷ್ಟ್ರೀಯ / ರಾಹುಲ್‍ಗೆ ಪಾಂಡಿತ್ಯದ ಕೊರತೆ ಎಂದ ಒಬಾಮಾ……….

ರಾಹುಲ್‍ಗೆ ಪಾಂಡಿತ್ಯದ ಕೊರತೆ ಎಂದ ಒಬಾಮಾ……….

Spread the love

ನ್ಯೂಯಾರ್ಕ್, ನ.11- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹಿಂಜರಿಕೆ ಕಾಡುತ್ತಿದೆ. ಜೊತೆಗೆ ಪಾಂಡಿತ್ಯದ ಕೊರತೆ ಇದೆ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳುವ ಮೂಲಕ ಚರ್ಚೆ ಹುಟ್ಟು ಹಾಕಿದ್ದಾರೆ. ತಮ್ಮ ರಾಜಕೀಯ ಜೀವನದ ಆತ್ಮಚರಿತ್ರೆ ಕುರಿತು ಬರೆದಿರುವ ಎ ಪ್ರಾಮಿಸ್‍ಡ್ ಲ್ಯಾಂಡ್ ಎಂಬ ಪುಸ್ತಕವೂ ಈಗ ಬಾರಿ ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಪುಸ್ತಕದಲ್ಲಿ ಕೆಲವು ಅಂಶಗಳಿದ್ದು, ರಾಹುಲ್ ಅವರಲ್ಲಿ ನಾಯಕತ್ವದ ಗುಣ ಇತ್ತು.

ಆದರೆ ಅವರಲ್ಲಿ ನಡುಕ ಸ್ವಭಾವವೂ ಮನೆ ಮಾಡಿತ್ತು. ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಪ್ರಭಾವ ಬೀರುವ ಉತ್ಸಾಹ ತೋರುತ್ತಿದ್ದರಾದರೂ ಅದು ಪೂರ್ಣ ವಿಫಲವಾಗುತ್ತಿತ್ತು ಎಂದು ತಮ್ಮ ಪುಸಕ್ತದಲ್ಲಿ ನವೀರು ಹಾಸ್ಯ ಪ್ರಜ್ಞೆಯೊಂದಿಗೆ ವಿಶ್ಲೇಷಿಸಿದ್ದಾರೆ.

ಪುಸ್ತಕದಲ್ಲಿ ಪ್ರಮುಖವಾಗಿ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟೀನ್, ಆಗ ಉಪಾಧ್ಯಕ್ಷರಾಗಿದ್ದ ಜೋ ಬಿಡೇನ್ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಡಾ ಸಿಂಗ್ ವಿಶ್ವದ ಅಗ್ರ ಮಾನ್ಯ ಆರ್ಥಿಕ ತಜ್ಞರು ಮತ್ತು ದೂರ ದೃಷ್ಠಿಯುಳ್ಳ ನಾಯಕರು. ಅವರು ಭಾರತದ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲೇ ನಾನು ಅಮೆರಿಕಾದ ಅಧ್ಯಕ್ಷನಾಗಿದ್ದೆ ಎಂದು ಸ್ಮರಿಸಿಕೊಂಡಿದ್ದಾರೆ.

ಬರಾಕ್ ಒಬಾಮಾ 2017ರ ಡಿಸೆಂಬರ್‍ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿ, ಮಹಾಶಕ್ತಿ ಶಾಲಿ ಮುಖಂಡರುನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದರು. ಇವರಿಬ್ಬರ ಭೇಟಿಯ ಫೋಟೋವನ್ನು ನ್ಯೂಯಾರ್ಕ್ ಟೈಮ್ಸ್‍ನಲ್ಲಿ ರಾಹುಲ್ ಹೇಳಿಕೆಯನ್ನು ವಿಶೇಷವಾಗಿ ಉಲ್ಲೇಖಿಸಿ ವರದಿ ಮಾಡಲಾಗಿದೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ