Breaking News

ಉಳ್ಳಾಲಕ್ಕೆ ಹೋದರೆ ಪಾಕಿಸ್ತಾನವನ್ನು ನೋಡಿದ ಹಾಗೆ ಆಗುತ್ತೆ.: ಕಲ್ಲಡ್ಕ ಡಾ.ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ

Spread the love

ಮಂಗಳೂರು: ಉಳ್ಳಾಲಕ್ಕೆ ಹೋದರೆ ಪಾಕಿಸ್ತಾನವನ್ನು ನೋಡಿದ ಹಾಗೆ ಆಗುತ್ತೆ. ಮಂಗಳೂರಿನ ಉಳ್ಳಾಲ ಅಂದ್ರೆ ಅದು ಪಾಕಿಸ್ತಾನವೇ ಅಲ್ವಾ? ಅದು ಬೇರೆ ಆಗೋಕೆ ಸಾಧ್ಯ ಇದೆಯಾ? ಇದೇ ರೀತಿ ಅನೇಕ ಕಡೆ ಪಾಕಿಸ್ತಾನ ನಿರ್ಮಾಣ ಆಗಿದೆ ಎಂದು ಆರ್‍ಎಸ್‍ಎಸ್ ಹಿರಿಯ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರಿನ ಉಳ್ಳಾಲ ಸಮೀಪದ ಕಿನ್ಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಒಂದೇ ಮಗುವಿದ್ದಾಗ ಆ ಮಗುವಿಗೆ ಅಣ್ಣ, ತಮ್ಮ, ಅಕ್ಕ, ತಂಗಿ ಯಾರೂ ಇರಲ್ಲ. ಆ ಮಗು ಸ್ವಾರ್ಥಿಯಾಗುತ್ತದೆ. ಮನೆಯಲ್ಲಿ ಮಕ್ಕಳು ಹೆಚ್ಚಿದಷ್ಟು ಆನಂದ, ಖುಷಿ ಹೆಚ್ಚಾಗಿರುತ್ತದೆ. ಇದೀಗ ಹಿಂದೂ ಸಮಾಜದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇದೆ ಎಂದರು.

ನಮ್ಮ ಕಿನ್ಯಾ ಪ್ರದೇಶದ ಸುತ್ತಲೂ ಯಾರಿದ್ದಾರೆ ಎಂದು ನೋಡಿ. ಅಲ್ಲದೆ ಉಳ್ಳಾಲದ ಬಗ್ಗೆ ನಾನೇನು ಹೇಳಬೇಕಾಗಿಲ್ಲ. ಆಗ ನಮ್ಮ ದೇವಸ್ಥಾನವನ್ನು, ದೈವಸ್ಥಾನವನ್ನು ಉಳಿಸುವವರು ಯಾರು, ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸುವವರು ಯಾರು, ಪಾಕಿಸ್ತಾನ ಯಾಕೆ ಆಯಿತು? ನಮ್ಮವರ ಸಂಖ್ಯೆ ಕಡಿಮೆ ಇತ್ತು ಅವರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಪಾಕಿಸ್ತಾನ, ಬಾಂಗ್ಲಾದೇಶ ನಿರ್ಮಾಣವಾಯಿತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ