Breaking News

ಮದುವೆಯಾಗಲಿದ್ದ ಯುವಕನಿಗೆ ಕೋವಿಡ್ ಪಾಸಿಟಿವ್………….

Spread the love

ಯಾದಗಿರಿ,ಜು.9- ಇಷ್ಟು ದಿನ ಮಹಾರಾಷ್ಟ್ರದ ಕಂಟಕ ಅನುಭವಿಸುತ್ತಿದ್ದ ಯಾದಗಿರಿಗೆ ಈಗ ಬೆಂಗಳೂರಿನ ಕಂಟಕ ಕೂಡ ಎದುರಾಗಿದೆ. ಬೆಂಗಳೂರಿನಿಂದ ತನ್ನ ಮದುವೆ ಸಲುವಾಗಿ ಜಿಲ್ಲೆಗೆ ಬಂದ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜಿಲ್ಲೆಯ ಶಹಾಪುರ ತಾಲೂಕಿನ ಹಳ್ಳಿಯೊಂದರ ಯುವಕನಿಗೆ ಕೊರೊನಾ ದೃಢಪಟ್ಟಿದೆ.

ಕೊರೊನಾ ಪಾಸಿಟಿವ್ ಬಂದ ಯುವಕನ ಮದುವೆ ಇದೇ ತಿಂಗಳ 13ಕ್ಕೆ ನಿಗದಿಯಾಗಿತ್ತು. ಹೀಗಾಗಿ ಕಳೆದ ತಿಂಗಳ ಜೂನ್ 29 ರಂದು ಬೆಂಗಳೂರಿನಿಂದ ಯಾದಗಿರಿಗೆ ಬಂಧಿದ್ದಾನೆ.ಬೆಂಗಳೂರಿನಿಂದ ಬರುವಾಗಲೇ ಯುವಕನ ಆರೋಗ್ಯ ಹದಗೆಟ್ಟು, ತೀವ್ರ ಶೀತದಿಂದ ಬಳಲುತ್ತಿದ್ದ . ಮುಂಜಾಗ್ರತಾ ಕ್ರಮವಾಗಿ ಯುವಕನಿಗೆ ಕೊರೊನಾ ಪರೀಕ್ಷೆಗೊಳಪಡಿಸಲಾಗಿತ್ತು.ಪರೀಕ್ಷಾ ವರದಿಯಲ್ಲಿ ಯುವಕನಿಗೆ ಸೋಂಕು ತಗುಲಿರುವುದು ಕಂಡುಬಂದಿದ್ದು, ಕೊವೀಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಮುಂದಿನ ಸೋಮವಾರ ನಡೆಯಬೇಕಿದ್ದ ಮದುವೆ ಕೆಲಸಕ್ಕೆ ಯುವಕ ಓಡಾಡಿದ್ದಾನೆ. ಹೀಗಾಗಿ ಮದುವೆ ಮನೆಯಲ್ಲಿ ಹಾಗೂ ಗ್ರಾಮದಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ. ಮದುವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ