Breaking News
Home / ಜಿಲ್ಲೆ / ಜಾತ್ರೆ: ವಸ್ತುಪ್ರದರ್ಶನಕ್ಕೆ ಚಾಲನೆ

ಜಾತ್ರೆ: ವಸ್ತುಪ್ರದರ್ಶನಕ್ಕೆ ಚಾಲನೆ

Spread the love

ರಾಮದುರ್ಗ: ‘ಜಾತ್ರೆಗಳಲ್ಲಿ ಆಯೋಜಿಸುವ ವಸ್ತುಪ್ರದರ್ಶನ ರೈತರಿಗೆ ಮತ್ತು ಯಾತ್ರಿಕರಿಗೆ ಉಪಯುಕ್ತವಾಗುವಂತೆ ಅಧಿಕಾರಿಗಳು ವ್ಯವಸ್ಥೆ ಮಾಡಬೇಕು. ಕಾಟಾಚಾರದ ವಸ್ತುಪ್ರದರ್ಶನ ಮಾಡಬಾರದು’ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

 

ತಾಲ್ಲೂಕಿನ ಗೊಡಚಿ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಗುರುವಾರ ಗ್ರಾಮ ಪಂಚಾಯ್ತಿ ಏರ್ಪಡಿಸಿದ್ದ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿ, ‘ಕೃಷಿಗೆ ಉತ್ತೇಜನ ನೀಡುವಂಥ ಮಳಿಗೆಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಕೃಷಿ , ತೋಟಗಾರಿಕೆ, ಅರಣ್ಯ ಇಲಾಖೆಗಳು ರೈತರಿಗೆ ನೂತನ ತಾಂತ್ರಿಕತೆಯ ಪರಿಚಯ ಮಾಡಿಕೊಡಬೇಕು’ ಎಂದರು.

ತಹಶೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿದರು.

ತೊರಗಲ್‍ಮಠದ ಚನ್ನಮಲ್ಲಶಿವಾಚಾರ್ಯ ಸ್ವಾಮೀಜಿ, ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಈರಣ್ಣ ಗೊರವ, ತಾ.ಪಂ ಇಒ ಪ್ರವೀಣಕುಮಾರ ಸಾಲಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ರೇಣವ್ವ ಭಜಂತ್ರಿ, ವೀರಭದ್ರೇಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀಮಂತ ಸಂಗ್ರಾಮಸಿಂಹ ಶಿಂಧೆ, ಕಾರ್ತಿಕ ಶಿಂಧೆ, ವೈಶಾಲಿ ಅಕ್ಕನವರು, ಈರಯ್ಯಸ್ವಾಮಿ, ಪಿಡಿಒ ಚನ್ನಮ್ಮ ಕೊಪ್ಪದ ಇದ್ದರು


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ