ಚಿಕ್ಕಮಗಳೂರು: ಚಲಿಸುತ್ತಿದ್ದಾಗಲೇ ಬಸ್ನ ಎರಡೂ ಚಕ್ರಗಳೂ ಕಳಚಿ ಬಿದ್ದಿದ್ದು, ಭಾರಿ ದುರಂತ ತಪ್ಪಿರುವ ಘಟನೆ ಮಾಗಡಿ ಸಮೀಪ ನಡೆದಿದೆ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸರ್ಕಾರಿ ಬಸ್ನ ಹಿಂಬದಿ ಚಕ್ರಗಳು ಈ ರೀತಿ ಉರುಳಿ ಬಿದ್ದಿದ್ದು ಎಂದು ಹೇಳಲಾಗುತ್ತಿದೆ.
ಚಲಿಸುತ್ತಿದ್ದಾಗಲೇ ಬಸ್ನ ವೀಲ್ ಬಾಡಿ ಸಮೇತ ಹಿಂದಿನ 2 ಚಕ್ರಗಳು ಬೇರ್ಪಟ್ಟಿವೆ. ಹಾಸನ ಡಿಪೋಗೆ ಸೇರಿದ ಬಸ್ ಇದಾಗಿದ್ದು ,ಬಸ್ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಂಭವಿಸಬೇಕಾಗಿದ್ದ ಭಾರಿ ದುರಂತವೊಂದು ತಪ್ಪಿದಂತಾಗಿದೆ. ಬಸ್ನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.