Breaking News

ಹೆಣ ಕಂಡ್ರೆ ಓಡೋಡಿ ಬರೋ ಶೋಭಾ ಕರಂದ್ಲಾಜೆ ಸಮಸ್ಯೆಗಳಿಗೆ ಬಾಯಿ ಬಿಡಲ್ಲ ಯಾಕೆ?

Spread the love

ಬೆಂಗಳೂರು: ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ವಿರುದ್ಧ ಕಾಂಗ್ರೆಸ್​ ಟ್ವೀಟ್​ ಮಾಡಿ ಕಿಡಿಕಾರಿದ್ದಾರೆ. ರೈತ ವಿರೋಧಿ ಬಿಜೆಪಿ ಸರ್ಕಾರ ರೈತರಿಗೆ ಮೇಲಿಂದ ಮೇಲೆ ಅನ್ಯಾಯವೆಸಗುತ್ತಿದೆ ಎಂದು ಕಾಂಗ್ರೆಸ್ (Congress) ಆಕ್ರೋಶ ವ್ಯಕ್ತಪಡಿಸಿದೆ.

ಪತ್ರಿಕೆಯೊಂದರ ‘ರೈತರಿಗೂ ಬಡ್ಡಿ ಬರೆ’ ಎಂಬ ವರದಿಯ ತುಣುಕೊಂದನ್ನು ಟ್ವೀಟ್ (Tweet) ಮಾಡಿರುವ ಕಾಂಗ್ರೆಸ್, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಹೆಣ ಕಂಡರೆ ಓಡೋಡಿ ಬರ್ತಾರೆ, ಸಮಸ್ಯೆ ಕೇಳಲ್ಲ ಯಾಕೆ?

‘ರೈತ ವಿರೋಧಿ ಬಿಜೆಪಿ ಸರ್ಕಾರ ರೈತರಿಗೆ ಮೇಲಿಂದ ಮೇಲೆ ಅನ್ಯಾಯವೆಸಗುತ್ತಿದೆ. ನೆರೆ ಪರಿಹಾರವಿಲ್ಲ, ಗೊಬ್ಬರವೂ ಸಿಗುತ್ತಿಲ್ಲ, ಬೆಳೆ ಸಾಲಕ್ಕೂ ಪರದಾಟ, ಸಾಲದ ಮೇಲಿನ ಬಡ್ಡಿಯೂ ದುಬಾರಿ. ಬಿಜೆಪಿಗೆ ರೈತರ ಮೇಲಿರುವುದು ದ್ವೇಷವೇ, ತಾತ್ಸಾರವೇ? ಹೆಣ ಕಂಡರೆ ಓಡೋಡಿ ಬರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ?’ ಎಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ಉಲ್ಲೇಖಿಸಿ ಆಕ್ರೋಶ ಹೊರಹಾಕಿದೆ.


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ