Home / Uncategorized / ಪಿಎಸ್‍ಐ ಪರೀಕ್ಷೆ ಹಗರಣವನ್ನು ಇಡಿಗೆ ವರ್ಗಾವಣೆ ಮಾಡುವ ಅವಶ್ಯಕತೆಯಿಲ್ಲ: ಗೃಹ ಸಚಿವ

ಪಿಎಸ್‍ಐ ಪರೀಕ್ಷೆ ಹಗರಣವನ್ನು ಇಡಿಗೆ ವರ್ಗಾವಣೆ ಮಾಡುವ ಅವಶ್ಯಕತೆಯಿಲ್ಲ: ಗೃಹ ಸಚಿವ

Spread the love

ಅಕ್ರಮ ಪಿಎಸ್‍ಐ ಪರೀಕ್ಷೆ ಹಗರಣವನ್ನು ಇಡಿಗೆ ವರ್ಗಾವಣೆ ಮಾಡುವ ಅವಶ್ಯಕತೆಯಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಮಹತ್ವದ ಹೇಳಿಕೆ ನೀಡಿದ್ದಾರೆ.

ಗೃಹ ಸಚಿವ ಅರಗ ಜ್ಞಾನೇಂದ್ರರವರು ನಿಪ್ಪಾಣಿ ನಗರ ಮತ್ತು ಗ್ರಾಮೀಣ ಪೆÇಲೀಸ್ ಠಾಣೆಗಳ ನೂತನ ಕಟ್ಟಡಗಳ ಉದ್ಘಾಟನೆ ಸಮಾರಂಭ ನೆರವೇರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಗೃಹ ಸಚಿವರ ಆರಗ ಜ್ಞಾನೇಂದ್ರ ಅಕ್ರಮ ಪಿಎಸ್‍ಐ ಪರೀಕ್ಷೆ ಹಗರಣವನ್ನು ಇಡಿಗೆ ವರ್ಗಾವಣೆ ಮಾಡುವ ಅವಶ್ಯಕತೆಯಿಲ್ಲ. ಈಗಾಗಲೇ ನಮ್ಮ ಸಿಐಡಿ ಅಧಿಕಾರಿಗಳು ಯಶಸ್ವಿಯಾಗಿ ಮುಲಾಜಿಲ್ಲದೇ ಕೆಲಸ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಇನ್ನು ಪಿಎಸ್‍ಐ ಹಗರಣದಲ್ಲಿ ವಿಜಯೇಂದ್ರ ಹೆಸರು ತಳಕು ವಿಚಾರ ಅನವಶ್ಯಕವಾಗಿದ್ದು ರಾಜಕೀಯ ಲಾಭ ಪಡೆಯುವ ಕೆಲಸವನ್ನು ಕಾಂಗ್ರೆಸ್‍ನವರು ಮಾಡುತ್ತಿದ್ದಾರೆ. ಯಾರದೋ ತೇಜೋವಧೆ ಮಾಡಿ ರಾಜಕೀಯ ಲಾಭ ಪಡೆಯಬಾರದು. ಸಂಬಂಧ ಪಟ್ಟ ಸಾಕ್ಷಾಧಾರ ಕೊಡದೇ ಬೆನ್ನು ತೋರಿ ಓಡಿ ಹೋಗುತ್ತಿದ್ದಾರೆ ಎಂದು ಇದೇ ವೇಳೆ ಕೈ ನಾಯಕರ ವಿರುದ್ಧ ಆರಗ ಜ್ಞಾನೇಂದ್ರ ಕಿಡಿಕಾರಿದರು.

ಇನ್ನೂ ಶಾಸಕರ ಆಸ್ತಿ ಪ್ರಮಾಣ ಪತ್ರ ವಿಚಾರಕ್ಕೆ ನನ್ನ ಬಿಡುವಿಲ್ಲದ ಕೆಲಸ ಕಾರ್ಯಗಳ ಮಧ್ಯ ನಾನು ಆಸ್ತಿ ಘೋಷಣೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಆಸ್ತಿ ಪ್ರಮಾಣ ಪತ್ರ ಕೊಡುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

ನಿನ್ನೆ ಬಾಗಲಕೋಟೆ ಜಿಲ್ಲೆಯ ಕೆರೂರು ಪಟ್ಟಣದಲ್ಲಿ ಕೋಮು ಗಲಭೆ ವಿಚಾರಕ್ಕೆ ಈಗಾಗಲೇ 9 ಜನರನ್ನು ವಶಕ್ಕೆ ಪಡೆಯಲಾಗಿದೆ. ಐಜಿಪಿ ಸ್ಥಳದಲ್ಲೆ ಇದ್ದು ಶಾಂತಿ ಸುವ್ಯವಸ್ಥೆ ಕೆಡದಂತೆ ಕ್ರಮ ಕೈಗೊಂಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು. ಇನ್ನು ಬಿಟ್ ಕಾಯಿನ್ ಹಗರಣದ ಬಗ್ಗೆ ಮಾಹಿತಿ ಕೊಟ್ಟರೇ ಹೆಚ್ಚಿನ ತನಿಖೆ ಮಾಡುತ್ತೇವೆ ಎಂದ ಇದೇ ವೇಳೆ ಉತ್ತರಿಸಿದರು.


Spread the love

About Laxminews 24x7

Check Also

ಯುವ ಮತದಾರರ ಚುನಾವಣೆ ಉತ್ಸಾಹ

Spread the loveಯುವ ಮತದಾರರ ಚುನಾವಣೆ ಉತ್ಸಾಹ ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಯುವ ಮತದಾರರ ಪಾತ್ರವೂ ಮಹತ್ವದ್ದಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ