Home / ಜಿಲ್ಲೆ / ಕಲಬುರ್ಗಿ / ರಾಜ್ಯದ ಎಲ್ಲಾ ‘ವಾಣಿಜ್ಯ ಅಂಗಡಿ-ಮುಂಗಟ್ಟು’ಗಳ ಮೇಲೆ ‘ಕನ್ನಡ ನಾಮಫಲಕ’ ಕಡ್ಡಾಯ : ರಾಜ್ಯ ಸರ್ಕಾರ ಆದೇಶ

ರಾಜ್ಯದ ಎಲ್ಲಾ ‘ವಾಣಿಜ್ಯ ಅಂಗಡಿ-ಮುಂಗಟ್ಟು’ಗಳ ಮೇಲೆ ‘ಕನ್ನಡ ನಾಮಫಲಕ’ ಕಡ್ಡಾಯ : ರಾಜ್ಯ ಸರ್ಕಾರ ಆದೇಶ

Spread the love

ಕಲಬುರ್ಗಿ: ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿರುವಾಗ, ರಾಜ್ಯದ ಎಲ್ಲಾ ವಾಣಿಜ್ಯ ಅಂಗಡಿ-ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಕಡ್ಡಾಯಗೊಳಿಸಿ, ಸರ್ಕಾರ ಆದೇಶಿಸಿದೆ. ಒಂದು ವೇಳೆ ಈ ನಿಯಮ ತಪ್ಪಿದಲ್ಲಿ ಅಂಗಡಿಯ ಪರವಾನಗಿಯನ್ನೇ ರದ್ದುಗೊಳಿಸೋದಾಗಿ ಎಚ್ಚರಿಕೆ ನೀಡಿದೆ.

 

ಈ ಸಂಬಂಧ ಕಲಬುರ್ಗಿ ಪಾಲಿಕೆಯ ಆರೋಗ್ಯಾಧಿಕಾರಿ ಆದೇಶ ಹೊರಡಿಸಿದ್ದು, ಕಲಬುರ್ಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿನಂತೆ ಕರ್ನಾಟಕದಲ್ಲಿ ಕನ್ನಡ ಭಾಷೆಯು ಆಡಳಿತ ಭಾಷೆಯಾಗಿದ್ದು, ರಾಜ್ಯದಲ್ಲಿನ ನಾಮಫಲಕಗಳಲ್ಲಿ ಕನ್ನಡ ಬಳಸುವುದು ಕಡ್ಡಾಯವಾಗಿರುತ್ತದೆ ಎಂದಿದ್ದಾರೆ.

ಕನ್ನಡ ನಾಮಫಲಕಗಳನ್ನು ಅಳವಡಿಸೋ ಸಂಬಂಧ ಸಮರ್ಪಕ ಅನುಷ್ಠಾನಕ್ಕಾಗಿ ಅಂಗಡಿ-ಮುಂಗಟ್ಟುಗಳ, ಉದ್ದಿಮೆಗಳಿಗೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಕನ್ನಡ ಭಾಷೆಯ ನಾಮಫಲಕಗಳಲ್ಲಿ ಕನ್ನಡವನ್ನು ಅಗ್ರಸ್ಥಾನದಲ್ಲಿ ಬಳಸದೇ ಇದ್ದಲ್ಲಿ, ಉದ್ದಿಮೆ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ ಎಂಬ ನಿಬಂಧನೆ ವಿಧಿಸಲು ಸರ್ಕಾರ ಆದೇಶಿಸಿರುತ್ತದೆ ಎಂದು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಕಲಬುರ್ಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಖಾಸಗಿ ಉದ್ದಿಮೆ, ಮಳಿಗೆಗಳ ಉದ್ದಿಮೆದಾರರು ನಾಮಫಲಕಗಳನ್ನು ಪ್ರಧಾನವಾಗಿ ಕನ್ನಡದಲ್ಲಿ ಹಾಕುವುದು. ಅನ್ಯಭಾಷೆಯ ನಾಮಫಲಕಗಳಿಗಿಂತ ಕನ್ನಡ ಭಾಷೆಯನ್ನು ದಪ್ಪ, ದೊಡ್ಡ ಅಕ್ಷರಗಳಲ್ಲಿ ಇರುವಂತೆ ಹಾಕುವುದು. ಈ ನಿಯಮ ತಪ್ಪಿದಲ್ಲಿ ಅಂತಹ ಉದ್ದಿಮೆ, ವಾಣಿಜ್ಯ ಅಂಗಡಿ-ಮುಂಗಟ್ಟುಗಳ ಪರವಾನಗಿಯನ್ನು ರದ್ದು ಪಡಿಸಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ; ಬಿಗಿ ಪೊಲೀಸ್ ಬಂದೋಬಸ್ತ್

Spread the loveಒಂದೆಡೆ ಕಲಬುರಗಿಯಲ್ಲಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯಕ್ಕಾಗಿ ಆಗ್ರಹಿಸಲಾಗುತ್ತಿದ್ದು, ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್‌ನಿಂದ ಕರಾಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ