Home / ಜಿಲ್ಲೆ / ಕಲಬುರ್ಗಿ / ಹಣ ನೀಡಿದರೆ ಫೇಲ್ ಆದವರಿಗೂ ಸಿಗುತ್ತಿದೆ ಪಾಸಾದ (Gulbarga University)ಅಕ್ರಮ

ಹಣ ನೀಡಿದರೆ ಫೇಲ್ ಆದವರಿಗೂ ಸಿಗುತ್ತಿದೆ ಪಾಸಾದ (Gulbarga University)ಅಕ್ರಮ

Spread the love

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ (Gulbarga University)ಅಕ್ರಮಬಯಲಾಗಿದ್ದು, ಫೇಲ್ ಆದ ವಿದ್ಯಾರ್ಥಿಗಳಿಗೆ ಪಾಸ್ ಆಗಿರುವ ಅಂಕಪಟ್ಟಿ (Marks Card) ನೀಡಿರುವುದು ಬೆಳಕಿಗೆ ಬಂದಿದೆ.

ಹಣ ನೀಡಿದರೆ ಸಾಕು ಫೇಲ್ ಆದವರಿಗೂ ವಿವಿ ಸಿಬ್ಬಂದಿ ಮಾರ್ಕ್ಸ್ ಕಾರ್ಡ್ ನೀಡುತ್ತಿದೆ. ನಾಗರಾಜ್ ಎಂಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಈತ ಫೇಲ್ ಆಗಿದ್ದರೂ ವಿವಿ ಸಿಬ್ಬಂದಿ 30 ಸಾವಿರ ರೂಪಾಯಿ ಹಣ ಪಡೆದು ನಕಲಿ ಅಂಕಪಟ್ಟಿ ನೀಡಿದೆ. ಈ ಬಗ್ಗೆ ವಿದ್ಯಾರ್ಥಿ ತನಗೆ ವಿವಿಯಿಂದ ಅನ್ಯಾಯವಾಗಿದೆ ಎಂದು ಕುಲಪತಿಗೆ ದೂರು ನೀಡಿದ್ದಾನೆ.

ವಿವಿ ಮೌಲ್ಯಮಾಪನ ವಿಭಾಗದ ಸಿಬ್ಬಂದಿಯಿಂದಲೇ ಈ ಅಕ್ರಮ ನಡೆದಿದೆ ಎಂದು ತಿಳಿದುಬಂದಿದೆ. ನಾಗರಾಜ್ ಕಲಬುರಗಿ ಎಕೆಎಸ್​ಜಿವಿ ಕಾಲೇಜಿನ ವಿದ್ಯಾರ್ಥಿ. 2019ರಲ್ಲಿ ಫೇಲ್ ಆಗಿದ್ದ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೆ
ಅರ್ಜಿಯನ್ನ ಹಾಕಿದ್ದ. ಈ ವೇಳೆ ವಿವಿ ಮೌಲ್ಯಮಾಪನ ವಿಭಾಗದ ಸಿಬ್ಬಂದಿ ಸಂಜೀವ್ ಎಂಬಾತ ಹಣ ಪಡೆದು ಪಾಸ್ ಆಗಿರುವ ನಕಲಿ ಅಂಕಪಟ್ಟಿ ನೀಡಿದ್ದಾನೆ.

 

ಮರು ಮೌಲ್ಯಮಾಪನದಲ್ಲಿ ತಾನು ಪಾಸಾಗಿದ್ದೇನೆ ಅಂತ ವಿದ್ಯಾರ್ಥಿ ಸಂತಸ ಪಟ್ಟಿದ್ದ. ಮುಂದೆ ವಿದ್ಯಾರ್ಥಿ ಎಮ್ಎಸ್ಡಬ್ಲೂ ಪದವಿ ಕೂಡ ಪಡೆದಿದ್ದಾನೆ. ಆದರೆ ವಿವಿಯ ಮೌಲ್ಯಮಾಪನ ವಿಭಾಗದಲ್ಲಿ 5, 6ನೇ ಸೆಮಿಸ್ಟರ್ನ ಅಂಕಪಟ್ಟಿ ನೀಡಲು ಕೇಳಿದಾಗ ಅಕ್ರಮ ಬಯಲಿಗೆ ಬಂದಿದೆ. ವಿದ್ಯಾರ್ಥಿಗೆ ಪಾಸ್ ಅಗಿರುವ ಅಂಕಪಟ್ಟಿ ನೀಡಿದ್ದರು, ದಾಖಲಾತಿಯಲ್ಲಿ ಪೇಲ್ ಅಂತ ದಾಖಲಾಗಿದೆ.

 


Spread the love

About Laxminews 24x7

Check Also

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ; ಬಿಗಿ ಪೊಲೀಸ್ ಬಂದೋಬಸ್ತ್

Spread the loveಒಂದೆಡೆ ಕಲಬುರಗಿಯಲ್ಲಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯಕ್ಕಾಗಿ ಆಗ್ರಹಿಸಲಾಗುತ್ತಿದ್ದು, ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್‌ನಿಂದ ಕರಾಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ