Home / ಜಿಲ್ಲೆ / ರಾಯಚೂರು / ರಾಯಚೂರು, ಮಂಡ್ಯ ಸೇರಿ 14 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಇಳಿಕೆ

ರಾಯಚೂರು, ಮಂಡ್ಯ ಸೇರಿ 14 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಇಳಿಕೆ

Spread the love

ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ನಿತ್ಯವು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ.

ಹಲವು ದಿನಗಳಿಂದ ಸ್ಥಿರವಾಗಿ ಬೆಲೆ ಕಾಯ್ದುಕೊಂಡು ಬಂದಿದ್ದ ಬೆಂಗಳೂರಿನಲ್ಲಿ (Bengaluru) ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ (Petrol Diesel Price) ಕೆಲ ಪೈಸೆಗಳಷ್ಟು ಏರಿಕೆಯಾಗಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕಚ್ಚಾ ತೈಲದ (Crude Oil) ಬೆಲೆ ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಹಾಗಾಗಿ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇದೆ.

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ ಐದು ಪೈಸೆಗಳಷ್ಟು ಬೆಲೆ ಹೆಚ್ಚಳವಾಗಿದೆ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ – ರೂ. 102.43 (0.13 ಪೈಸೆ ಇಳಿಕೆ)
ಬೆಂಗಳೂರು – ರೂ. 101.94 (0.00)
ಬೆಂಗಳೂರು ಗ್ರಾಮಾಂತರ – ರೂ. 102.00 (0.01 ಪೈಸೆ ಇಳಿಕೆ)
ಬೆಳಗಾವಿ – ರೂ. 102.40 (0.07 ಪೈಸೆ ಇಳಿಕೆ)
ಬಳ್ಳಾರಿ – ರೂ. 103.26 (0.61 ಪೈಸೆ ಇಳಿಕೆ)
ಬೀದರ್ – ರೂ. 102.47 (0.24 ಪೈಸೆ ಏರಿಕೆ)
ವಿಜಯಪುರ – ರೂ. 102.05 (0.06 ಪೈಸೆ ಏರಿಕೆ)
ಚಾಮರಾಜನಗರ – ರೂ. 102.03 (0.01 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – ರೂ. 101.69 (0.25 ಪೈಸೆ ಇಳಿಕೆ)
ಚಿಕ್ಕಮಗಳೂರು – ರೂ. 103.21 (0.41 ಪೈಸೆ ಏರಿಕೆ)
ಚಿತ್ರದುರ್ಗ – ರೂ. 103.22 (0.33 ಪೈಸೆ ಏರಿಕೆ)
ದಕ್ಷಿಣ ಕನ್ನಡ – ರೂ. 101.47 (0.34 ಪೈಸೆ ಏರಿಕೆ)
ದಾವಣಗೆರೆ – ರೂ. 103.80 (0.37 ಪೈಸೆ ಏರಿಕೆ)
ಧಾರವಾಡ – ರೂ. 101.69 (0.27 ಪೈಸೆ ಇಳಿಕೆ)
ಗದಗ – ರೂ. 102.22 (00)
ಕಲಬುರಗಿ – ರೂ. 101.95 (0.29 ಪೈಸೆ ಎರಿಕೆ)
ಹಾಸನ – ರೂ. 101.63 (00)
ಹಾವೇರಿ – ರೂ. 102.38 (0.43 ಪೈಸೆ ಇಳಿಕೆ)
ಕೊಡಗು – ರೂ. 103.35 (0.15 ಪೈಸೆ ಏರಿಕೆ)
ಕೋಲಾರ – ರೂ. 102.00 (0.16 ಪೈಸೆ ಇಳಿಕೆ)
ಕೊಪ್ಪಳ – ರೂ. 102.83 (0.30 ಪೈಸೆ ಇಳಿಕೆ)
ಮಂಡ್ಯ – ರೂ. 101.74 (0.10 ಪೈಸೆ ಇಳಿಕೆ)
ಮೈಸೂರು – ರೂ. 101.87 (0.29 ಪೈಸೆ ಏರಿಕೆ)
ರಾಯಚೂರು – ರೂ. 102.21 (0.33 ಪೈಸೆ ಇಳಿಕೆ)
ರಾಮನಗರ – ರೂ. 102.25 (0.15 ಪೈಸೆ ಇಳಿಕೆ)
ಶಿವಮೊಗ್ಗ – ರೂ. 103.28 (0.01 ಪೈಸೆ ಏರಿಕೆ)
ತುಮಕೂರು – ರೂ. 102.45 (0.00)
ಉಡುಪಿ – ರೂ. 101.44 (0.05 ಪೈಸೆ ಏರಿಕೆ)
ಉತ್ತರ ಕನ್ನಡ – ರೂ. 102.11 (0.83 ಪೈಸೆ ಇಳಿಕೆ)
ಯಾದಗಿರಿ – ರೂ. 102.38 (0.12 ಪೈಸೆ ಏರಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ – ರೂ. 88.36
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 87.95
ಬೆಳಗಾವಿ – ರೂ. 88.33
ಬಳ್ಳಾರಿ – ರೂ. 89.10
ಬೀದರ್ – ರೂ. 88.39
ವಿಜಯಪುರ – ರೂ. 88.01
ಚಾಮರಾಜನಗರ – ರೂ. 87.97
ಚಿಕ್ಕಬಳ್ಳಾಪುರ – ರೂ. 87.67
ಚಿಕ್ಕಮಗಳೂರು – ರೂ. 88.91
ಚಿತ್ರದುರ್ಗ – ರೂ. 88.95
ದಕ್ಷಿಣ ಕನ್ನಡ – ರೂ. 87.43
ದಾವಣಗೆರೆ – ರೂ. 89.47
ಧಾರವಾಡ – ರೂ. 87.68
ಗದಗ – ರೂ. 88.17
ಕಲಬುರಗಿ – ರೂ. 87.92
ಹಾಸನ – ರೂ. 87.52
ಹಾವೇರಿ – ರೂ. 88.31
ಕೊಡಗು – ರೂ. 89.02
ಕೋಲಾರ – ರೂ. 87.95
ಕೊಪ್ಪಳ – ರೂ. 88.72
ಮಂಡ್ಯ – ರೂ. 87.71
ಮೈಸೂರು – ರೂ. 87.83
ರಾಯಚೂರು – ರೂ. 88.17
ರಾಮನಗರ – ರೂ. 88.17
ಶಿವಮೊಗ್ಗ – ರೂ. 89.05
ತುಮಕೂರು – ರೂ. 88.36
ಉಡುಪಿ – ರೂ. 87.41
ಉತ್ತರ ಕನ್ನಡ – ರೂ. 88.07
ಯಾದಗಿರಿ – ರೂ. 88.31


Spread the love

About Laxminews 24x7

Check Also

ಯರಗುಂಟಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ: ಆಸ್ಪತ್ರೆಗೆ ದಾಖಲು

Spread the love ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ 10ಕ್ಕೂ ಜನರು ವಾಂತಿ – ಭೇದಿಯಿಂದ ಅಸ್ವಸ್ಥರಾಗಿದ್ದು, ಪಟ್ಟಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ