Home / ರಾಜ್ಯ / ನೆಲಕಚ್ಚಿದ ವಾಹನ ಉದ್ಯಮ ಲಾಕ್‌ಡೌನ್‌ ತೆರವಾದ ಬಳಿಕ ಭಾರೀ ಪ್ರಮಾಣದಲ್ಲಿ ಚೇತರಿಕೆ

ನೆಲಕಚ್ಚಿದ ವಾಹನ ಉದ್ಯಮ ಲಾಕ್‌ಡೌನ್‌ ತೆರವಾದ ಬಳಿಕ ಭಾರೀ ಪ್ರಮಾಣದಲ್ಲಿ ಚೇತರಿಕೆ

Spread the love

ನವದೆಹಲಿ: ಕೋವಿಡ್‌ 19 ವೇಳೆ ನೆಲಕಚ್ಚಿದ ವಾಹನ ಉದ್ಯಮ ಲಾಕ್‌ಡೌನ್‌ ತೆರವಾದ ಬಳಿಕ ಭಾರೀ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ.

2019 ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ ಶೇ.14.16ರಷ್ಟು ಚೇತರಿಕೆ ಕಂಡಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್ಐಎಎಂ) ಹೇಳಿದೆ.

ಈ ವರ್ಷದ ಆಗಸ್ಟ್‌ನಲ್ಲಿ ಒಟ್ಟು 2,15,916 ಪ್ರಯಾಣಿಕ ವಾಹನಗಳ ಮಾರಾಟ ಆಗಿದ್ದರೆ ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಒಟ್ಟು 1,89,129 ಮಾರಾಟ ಆಗಿತ್ತು. ಈ ಬಾರಿಯ ಆಗಸ್ಟ್‌ಗೂ ಮೊದಲಿನ ಒಂಬತ್ತು ತಿಂಗಳುಗಳ ಕಾಲ ಪ್ರಯಾಣಿಕ ವಾಹನಗಳ ಮಾರಾಟವು ನಿರಂತರವಾಗಿ ಕುಸಿತ ಕಂಡಿತ್ತು. ಆದರೆ ಈಗ ಆಟೋ ಕ್ಷೇತ್ರ ಚೇತರಿಕೆಯಾಗಿದ್ದು ಕೊರೊನಾ ಲಾಕ್‌ಡೌನ್‌ ಬಳಿಕ ಒಂದೊಂದೆ ಕ್ಷೇತ್ರಗಳು ಹಳಿಗೆ ಬರುತ್ತಿದ್ದು ನಿಧಾನವಾಗಿ ಆರ್ಥಿಕ ಪ್ರಗತಿ ಆಗುತ್ತಿದೆ.

ಯಾವುದು ಎಷ್ಟು ಮಾರಾಟ?
ಈ ಬಾರಿಯ ಆಗಸ್ಟ್‌ ತಿಂಗಳಿನಲ್ಲಿ ಪ್ರಯಾಣಿಕ ಕಾರುಗಳ ಮಾರಾಟ ಶೇ. 14.13ರಷ್ಟು ಏರಿಕೆ ಕಂಡಿದೆ. ಈ ಬಾರಿ 1,24,715 ಆಗಿದ್ದರೆ 2019ರ ಆಗಸ್ಟ್‌ನಲ್ಲಿ 1,09,277 ಕಾರುಗಳು ಮಾರಾಟಗೊಂಡಿತ್ತು.

ಬಹು ಉಪಯೋಗಿ ವಾಹನಗಳ ಮಾರಾಟ ಶೇ.15.54ರಷ್ಟು ಏರಿಕೆಯಾಗಿದೆ. ಒಟ್ಟು 81,842 ಬಹು ಉಪಯೋಗಿ ವಾಹನಗಳು ಮಾರಾಟವಾಗಿದ್ದರೆ ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಒಟ್ಟು 70,837 ವಾಹನಗಳು ಮಾರಾಟವಾಗಿತ್ತು.

ವ್ಯಾನ್‌ಗಳ ಮಾರಾಟದಲ್ಲಿ ಶೇ.3.82 ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಒಟ್ಟು 9,015 ವ್ಯಾನ್‌ಗಳ ಮಾರಾಟ ಆಗಿತ್ತು. ಈ ಆಗಸ್ಟ್‌ನಲ್ಲಿ 9,359 ವ್ಯಾನ್‌ಗಳು ಮಾರಾಟವಾಗಿವೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.3ರಷ್ಟು ಹೆಚ್ಚಳ ಕಂಡುಬಂದಿದೆ. ಈ ವರ್ಷದ ಆಗಸ್ಟ್‌ನಲ್ಲಿ 15,59,665 ಮಾರಾಟವಾಗಿದ್ದರೆ ಕಳೆದ ವರ್ಷ 15,14,196 ಮಾರಾಟಗೊಂಡಿತ್ತು.

ದ್ವಿಚಕ್ರ ವಾಹನಗಳ ಪೈಕಿ ಬೈಕ್‌ಗಳ ಮಾರಾಟ ಶೇ.10.13ರಷ್ಟು ಬೆಳವಣಿಗೆಯಾಗಿದೆ. ಈ ಆಗಸ್ಟ್‌ನಲ್ಲಿ 10,32,476ರಷ್ಟು ಮಾರಾಟವಾಗಿದ್ದರೆ ಕಳೆದ ವರ್ಷ 9,37,486ರಷ್ಟು ಮಾರಾಟವಾಗಿತ್ತು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ