Breaking News

ಗಂಡನ ಕಡತ ತುಡಿತ! ಗದಗ ನಗರಸಭೆಯಲ್ಲಿ ಅಧ್ಯಕ್ಷೆಯ ಗಂಡನದ್ದೇ ದರ್ಬಾರ್; ಪತಿ ನೋಡಿದ ಬಳಿಕವಷ್ಟೇ ಫೈಲ್ ಗೆ ಸಹಿ ಹಾಕ್ತಾರೆ ಮೇಡಂ

Spread the love

ಗದಗ: ಮಹಿಳೆಯರಿಗೆ ಸಮಾನತೆ ಸಿಗಲಿ ಅಂತ ಸರ್ಕಾರ ಮಹಿಳಾ ಮೀಸಲಾತಿ ಜಾರಿ ಮಾಡಿದೆ. ಅದರಂತೆ ಈ ನಗರಸಭೆಗೆ ಮಹಿಳಾ ಅಧ್ಯಕ್ಷೆ ಆಗಿದ್ದಾರೆ. ಆದ್ರೆ, ಇಲ್ಲಿ ದರ್ಬಾರ್ ಮಾಡೋದು ಮಾತ್ರ ಅಧ್ಯಕ್ಷೆ ಗಂಡ. ಅಧ್ಯಕ್ಷೆ ಚೇಂಬರ್ಗೆ ಬಂದು ಅಧ್ಯಕ್ಷೆಯ ಪಕ್ಕದ ಖುರ್ಚಿಯಲ್ಲಿ ಕುಳಿತು ದರ್ಬಾರ್ ಮಾಡ್ತಾರೆ. ಫೈಲ್ ಪರಿಶೀಲನೆ ಮಾಡ್ತಾರೆ. ನಗರಸಭೆ ಸದಸ್ಯರ ಸಭೆಯಲ್ಲೂ ಅಧ್ಯಕ್ಷೆ ಪತಿ ಅಂದಾ ದರ್ಬಾರ್ ನಡೆಸಿದ್ದಾರಂತೆ. ಅಧ್ಯಕ್ಷೆ ಗಂಡ ಕೆಲಸ ನಗರಸಭೆಯಲ್ಲೇನಿದೇ ಅಂತ ಸದಸ್ಯರು ಪ್ರಶ್ನೆ ಮಾಡಿದ್ದಾರೆ. ಅಧ್ಯಕ್ಷೆಯ ಗಂಡನ ವರ್ತನೆಗೆ ಸದಸ್ಯರು ಬೇಸತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದರು. ಆದ್ರೆ ಈಗ ಕಳೆದ ನಾಲ್ಕೈದು ತಿಂಗಳಿಂದ ಜನಪ್ರತಿನಿಧಿಗಳು ಆಡಳಿತ ನಡೆಸುತ್ತಿದ್ದಾರೆ. ಅಧ್ಯಕ್ಷ ಸ್ಥಾನ ಎಸ್ಸಿಗೆ ಹಾಗೂ ಮಹಿಳಾ ಮೀಸಲಾತಿ ಇರೋದ್ರಿಂದ ನಗರಸಭೆ ಅಧ್ಯಕ್ಷೆಯಾಗಿ ಉಷಾ ದಾಸರ್ ಆಯ್ಕೆಯಾಗಿದ್ದಾರೆ. ಆದ್ರೆ ಈ ನಗರಸಭೆಯಲ್ಲಿ ಉಷಾ ದಾಸರ್ ಕಿಂತಲೂ ಹೆಚ್ಚಾಗಿ ಅವರ ಗಂಡನೇ ಆಡಳಿತದಲ್ಲಿ ಹಸ್ತಕ್ಷೇಪ ಮಾಡ್ತಾಯಿದ್ದಾರೆ ಎನ್ನುವ ಆರೋಪ ಬಲವಾಗಿ ಕೇಳಿ ಬರ್ತಾಯಿದೆ. ಗದಗ ಬೆಟಗೇರಿ ನಗರಸಭೆ ಕಚೇರಿಯಲ್ಲಿ ಅಧ್ಯಕ್ಷೆಯ ಜೊತೆಗೆ ಆತನ ಗಂಡ ಮಹೇಶ ದಾಸರ್ ಹಾಗೂ ಕುಟುಂಬ ಸದಸ್ಯರು ಕಾಯಂ‌ ಠಿಖಾಣಿ ಹೂಡಿರ್ತಾರೆ. ಇದನ್ನೂ ಓದಿ: Chethana Raj: ನಟಿ ಚೇತನಾ ರಾಜ್​ಗೆ ಕಾಸ್ಮೆಟಿಕ್​ ಸರ್ಜರಿ ನಡೆಸಿದ್ದ ಆಸ್ಪತ್ರೆಗೆ ಬೀಗ; ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ