Breaking News
Home / ಜಿಲ್ಲೆ / ಬೆಳಗಾವಿ / ಜಿ.ಪಂ., ತಾ.ಪಂ. ಕ್ಷೇತ್ರಗಳ ನಿಗದಿಗೆ ನಿರ್ಣಯ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಜಿ.ಪಂ., ತಾ.ಪಂ. ಕ್ಷೇತ್ರಗಳ ನಿಗದಿಗೆ ನಿರ್ಣಯ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

Spread the love

ಬೆಳಗಾವಿ: ‘ಜಿಲ್ಲೆಯ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿಗಳ ಸದಸ್ಯರ ಕ್ಷೇತ್ರಗಳ ಸಂಖ್ಯೆಯನ್ನು ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗವು ನಿಗದಿಪಡಿಸಲು ನಿರ್ಣಯಿಸಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

 

‘2011ರ ಜನಗಣತಿಯಂತೆ ಆಯಾ ತಾಲ್ಲೂಕುಗಳ ಗ್ರಾಮೀಣ ಜನಸಂಖ್ಯೆ ಆಧರಿಸಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ ಸದಸ್ಯರ ಕ್ಷೇತ್ರಗಳ ಸಂಖ್ಯೆ ನಿಗದಿಪಡಿಸಲಾಗಿದೆ. ಈ ಪ್ರಕಾರ ಆಯೋಗದಿಂದ ಪ್ರತಿ 40ಸಾವಿರ ಜನಸಂಖ್ಯೆಗೆ ಹಾಗೂ ಅದರ ಭಾಗಕ್ಕೆ ಒಬ್ಬರು ಸದಸ್ಯರಂತೆ ಬೆಳಗಾವಿ ಜಿಲ್ಲೆಯ 15 ತಾಲ್ಲೂಕುಗಳಲ್ಲಿ ಒಟ್ಟಾರೆ 91 ಕ್ಷೇತ್ರಗಳನ್ನು ನಿಗದಿಪಡಿಸಲು ನಿರ್ಣಯಿಸಲಾಗಿದೆ’ ಎಂದರು.

‘ನೂತನ ತಾಲ್ಲೂಕು ಯರಗಟ್ಟಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಒಟ್ಟು 15 ತಾಲ್ಲೂಕುಗಳಲ್ಲಿ ಒಟ್ಟಾರೆ 299 ಕ್ಷೇತ್ರಗಳನ್ನು ನಿಗದಿಪಡಿಸಲು ಆಯೋಗವು ನಿರ್ಣಯಿಸಿದೆ’ ಎಂದು ಹೇಳಿದರು.

ತಾ.ಪಂ‌. ಕ್ಷೇತ್ರ ನಿಗದಿಗೆ ಮಾನದಂಡ:

’50ಸಾವಿರ ಜನಸಂಖ್ಯೆ ಮೀರಿದ ಆದರೆ ಒಂದು ಲಕ್ಷ ಮೀರಿರದ ಗ್ರಾಮೀಣ ಜನಸಂಖ್ಯೆಯನ್ನು ಹೊಂದಿರುವ ತಾಲ್ಲೂಕುಗಳಲ್ಲಿ ಕನಿಷ್ಠ 9 ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ. ಒಂದು ಲಕ್ಷ ಮೀರಿದ ಆದರೆ, 2 ಲಕ್ಷ ಗ್ರಾಮೀಣ ಜನಸಂಖ್ಯೆ ಮೀರಿರದ ತಾಲ್ಲೂಕುಗಳಲ್ಲಿ ಪ್ರತಿ 10 ಸಾವಿರಕ್ಕೆ ಒಬ್ಬ ಚುನಾಯಿತ ಸದಸ್ಯ ಇರತಕ್ಕದ್ದು ಹಾಗೂ ಅಲ್ಲಿ ಕನಿಷ್ಠ 11 ಚುನಾಯಿತ ಸದಸ್ಯರಿರತಕ್ಕದ್ದು ಎಂದು ತಿಳಿಸಲಾಗಿದೆ. ಯಾವುದೇ ತಾಲ್ಲೂಕು ಪಂಚಾಯ್ತಿಯ ಎರಡು ಲಕ್ಷದಿಂದ 2.28 ಲಕ್ಷದೊಳಗಿನ ಜನಸಂಖ್ಯೆಗೆ ಕನಿಷ್ಠ 20 ಸದಸ್ಯರನ್ನು ನಿಗದಿಪಡಿಸಲು ಆಯೋಗವು ನಿರ್ಣಯಿಸಿದೆ. 2 ಲಕ್ಷ ಮೀರಿದ ಗ್ರಾಮೀಣ ಜನಸಂಖ್ಯೆ ಹೊಂದಿರುವ ತಾಲ್ಲೂಕುಗಳಲ್ಲಿ ಪ್ರತಿ 12ಸಾವಿರಕ್ಕೆ ಕಡಿಮೆಯಲ್ಲದ ಜನಸಂಖ್ಯೆಗೆ ಒಬ್ಬ ಚುನಾಯಿತ ಸದಸ್ಯ ಇರತಕ್ಕದ್ದು ಎಂದು ನಿರ್ಣಯಿಸಲಾಗಿದೆ’ ಎಂದು ತಿಳಿಸಿದರು.

‘ತಾಲ್ಲೂಕುವಾರು ಗ್ರಾಮೀಣ ಜನಸಂಖ್ಯೆ ಆಧರಿಸಿ ಜಿಲ್ಲೆಯ 15 ತಾಲ್ಲೂಕುಗಳಲ್ಲಿ ಒಟ್ಟಾರೆ 91 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು ಮತ್ತು 299 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳನ್ನು ನಿಗದಿಪಡಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

‘ಈ ಬಗ್ಗೆ ವಿವರ ಮಾಹಿತಿ ಪರಿಶೀಲಿಸಿ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 7 ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಲಿಖಿತವಾಗಿ ಸಲ್ಲಿಸಬೇಕು’ ಎಂದು ತಿಳಿಸಿದರು.

ತಾಲ್ಲೂಕುವಾರು ಕ್ಷೇತ್ರಗಳ ವಿವರ

ತಾಲ್ಲೂಕು;ಜಿ.‍ಪಂ.;ತಾ.ಪಂ.

ಕಾಗವಾಡ;3;9

ಕಿತ್ತೂರು;3;9

ಮೂಡಲಗಿ;4;14

ನಿಪ್ಪಾಣಿ;5;20

ಬೈಲಹೊಂಗಲ;6;20

ರಾಮದುರ್ಗ;6;20

ಖಾನಾಪುರ;6;20

ಗೋಕಾಕ;7;21

ಚಿಕ್ಕೋಡಿ;7;22

ರಾಯಬಾಗ;7;23

ಸವದತ್ತಿ;6;20

ಅಥಣಿ;9;28

ಹುಕ್ಕೇರಿ;9,;29

ಬೆಳಗಾವಿ;11;35

ಯರಗಟ್ಟಿ;2:9


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ