ನವದೆಹಲಿ: ಕೇಂದ್ರ ಸರ್ಕಾರ ಅನ್‍ಲಾಕ್ 4.Oರ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಸೆಪ್ಟೆಂಬರ್ 7ರಿಂದ ಮೆಟ್ರೋ ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಸೆಪ್ಟೆಂಬರ 30ರವರೆಗೆ ಲಾಕ್‍ಡೌನ್ ಮುಂದುವರಿಯಲಿದೆ./
ಸಾಮಾಜಿಕ/ರಾಜಕೀಯ/ಕ್ರೀಡೆ/ಮನೋರಂಜನೆ/ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ಕಾರ್ಯಕ್ರಮದಲ್ಲಿ 100 ಜನರು ಮಾತ್ರ ಪಾಲ್ಗೊಳ್ಳುವದರ ಜೊತೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಆದೇಶ ಸೆಪ್ಟೆಂಬರ್ 21ರಿಂದ ಅನ್ವಯವಾಗಲಿದೆ.
ಹವಾನಿಯಂತ್ರಣ ರಹಿತ ಚಿತ್ರಮಂದಿರಗಳನ್ನು ಸೆಪ್ಟೆಂಬರ್ 21ರಿಂದ ತೆರೆಯಲು ಸರ್ಕಾರ ಅನುಮತಿ ನೀಡಿದೆ
ಸೆಪ್ಟೆಂಬರ್ 30ರವರೆಗೆ ಶಾಲೆ ಕಾಲೇಜು ಮತ್ತು ತರಬೇತಿ ಕೇಂದ್ರಗಳು ಬಂದ್ ಆಗಲಿವೆ. ಆನ್‍ಲೈನ್ ಕ್ಲಾಸ್‍ಗಳು ಮುಂದುವರಿಯಲಿದೆ. ಶಾಲೆಗಳು ಶಿಕ್ಷಕ ಮತ್ತು ಇನ್ನಿತರ ಸಿಬ್ಬಂದಿ ಶೇ.50 ಹಾಜರಾತಿ ಇರುವಂತೆ ನೋಡಿಕೊಳ್ಳುವುದು. ಆನ್‍ಲೈನ್ ಕ್ಲಾಸ್ ಅಥವಾ ಟೆಲಿ ಕೌನ್ಸಿಲಿಂಗ್ ಇನ್ನಿತರ ಕಾರ್ಯಗಳಿಗೆ ಶೇ.50 ರಷ್ಟು ಸಿಬ್ಬಂದಿಯನ್ನು ಶಾಲೆಗಳು ಬಳಸಿಕೊಳ್ಳುವುದು.
9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಪೋಷಕರ ಲಿಖಿತ ಅನುಮತಿ ಪಡೆದು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಳ್ಳಬಹುದು. (ಕಂಟೈನ್‍ಮೆಂಟ್ ಝೋನ್ ವಿದ್ಯಾರ್ಥಿಗಳು ಹೊರತುಪಡಿಸಿ). ಉನ್ನತ ಶಿಕ್ಷಣ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಅಥವಾ ಪ್ರಾಯೋಗಿಕ ತರಬೇತಿಗೆ ಅನುಮತಿ.