Breaking News
Home / ರಾಜಕೀಯ / 11ನೇ ವಯಸ್ಸಿಗೆ 50ಕೆ.ಜಿ ಭಾರ ಎತ್ತಿದ ಅವಳಿ ಸಹೋದರರು : ಇಬ್ಬರ ಸಾಹಸಕ್ಕೆ ಭಾರಿ ಮೆಚ್ಚುಗೆ

11ನೇ ವಯಸ್ಸಿಗೆ 50ಕೆ.ಜಿ ಭಾರ ಎತ್ತಿದ ಅವಳಿ ಸಹೋದರರು : ಇಬ್ಬರ ಸಾಹಸಕ್ಕೆ ಭಾರಿ ಮೆಚ್ಚುಗೆ

Spread the love

ಕುಷ್ಟಗಿ: ಕುಷ್ಟಗಿಯ ಹನ್ನೊಂದು ವರ್ಷದ ಅವಳಿ ಸಹೋದರರು ಭಾರ ಎತ್ತುವ ಸಾಹಸ ಪ್ರದರ್ಶನದಲ್ಲಿ 50 ಕೆ.ಜಿ. ಚೀಲ ಎತ್ತುವ ಮೂಲಕ ಭವಿಷ್ಯದ ಭರವಸೆ ಮೂಡಿಸಿದ್ದಾರೆ.

ಕುಷ್ಟಗಿ ಪಟ್ಟಣದ ಅನ್ನದಾನೇಶ್ವರ ನಗರದ ನಿವಾಸಿ ಮರಸಣ್ಣಭೀ. ತಾಳದ ಅವರ ಅವಳಿ ಮಕ್ಕಳಾದ ಅಜಯ್- ವಿಜಯ್ ಇಲ್ಲಿನ ಅಜಯ್ ಅಕ್ಷರ್ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾರೆ.

 

ಭಾನುವಾರ ನಡೆದ ರಾಯಚೂರ ಜಿಲ್ಲೆ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಮರಸಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ 50 ಕೆ.ಜಿ. ಧಾನ್ಯ ದ ಚೀಲ ಎತ್ತುವ ಮೂಲಕ ಅಲ್ಲಿದ್ದವರನ್ನು ನಿಬ್ಬೇರಗಾಗಿಸಿದ್ದಾರೆ.

ಹನ್ನೊಂದು ವರ್ಷದ ಅವಳಿ ಸಹೋದರರು ತಮ್ಮ ಸಾಮಾರ್ಥ್ಯ ಮೀರಿ 50 ಕೆಜಿ ಭಾರ ಎತ್ತಿದ್ದಾರೆ. ಯುವಕರನ್ನು ನಾಚಿಸುವಂತೆ 50 ಕೆ.ಜಿ. ಭಾರವನ್ನು ಎತ್ತುವಾಗ ತಿಣಕಾಡುವ ಇಂದಿನ ದಿನಮಾನಗಳಲ್ಲಿ 50 ಕೆ.ಜಿ. ಭಾರವನ್ನು ಈ ಅವಳಿ ಸಹೋದರರು, ಸಲೀಸಾಗಿ ಎತ್ತಿ ಭಾರ ಎತ್ತುವ ಕ್ರೀಡೆಯಲ್ಲಿ ಭವಿಷ್ಯದ ಕ್ರೀಡಾಪಟುಗಳ ಭರವಸೆ ಮೂಡಿಸಿದ್ದಾರೆ.

ಅಜಯ್- ವಿಜಯ್ ಅವಳಿ ಸಹೋದರರು, ಫಿಟ್ನೆಸ್ ಗೆ ಆದ್ಯತೆ ನೀಡಿದ್ದು, ದಿನವೂ ಕಸರತ್ತಿನ ವ್ಯಾಯಾಮದಲ್ಲಿ‌ನಿರತರಾಗಿದ್ದು ಸದಾ ಲವಲವಿಕೆಯಂದಿದ್ದಾರೆ


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ