Breaking News

ಹುಬ್ಬಳ್ಳಿ-ಬೆಂಗಳೂರು ರೈಲು ಸೇವೆ ಬದಲಾವಣೆ

Spread the love

ಹುಬ್ಬಳ್ಳಿ: ಯಶವಂತಪುರ ಯಾರ್ಡ್‌ನಲ್ಲಿ ಜ. 21ರಂದು ಎಂಜಿನಿಯರಿಂಗ್‌ ಕೆಲಸಕ್ಕೆ ಸಂಬಂಧಿತ (ಥಿಕ್‌ ವೆಬ್‌ ಸ್ವಿಚ್‌ಗಳ) ಕಾಮಗಾರಿ ಸಲುವಾಗಿ ಲೈನ್‌ ಬ್ಲಾಕ್‌ ಇರುವ ನಿಮಿತ್ತ ರೈಲುಗಳ ಸೇವೆಯಲ್ಲಿ ಬದಲಾವಣೆ ಆಗಲಿದೆ. ಜ. 20ರಂದು ಹುಬ್ಬಳ್ಳಿ-ಬೆಂಗಳೂರು ನಿತ್ಯ ಸೇವೆಯ ಎಕ್ಸ್‌ಪ್ರೆಸ್‌ (17392) ರೈಲನ್ನು ಚಿಕ್ಕಬಾಣಾವರ ನಿಲ್ದಾಣದಲ್ಲಿ 40 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

 

ಜ. 21ರಂದು ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಹೊರಡುವ ಬೆಂಗಳೂರು-ಹೊಸಪೇಟೆ ಪ್ರತಿನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್‌ (06243) ರೈಲಿನ ಸಮಯವನ್ನು 30 ನಿಮಿಷಗಳ ಮರುಹೊಂದಾಣಿಕೆ ಮಾಡಲಾಗುವುದು. ಬೆಂಗಳೂರು ರೈಲ್ವೆ ಯಾರ್ಡ್‌ನಲ್ಲಿ ಜ. 19 ಹಾಗೂ 26ರಂದು ಎಂಜಿನಿಯರಿಂಗ್‌ ಕೆಲಸಕ್ಕೆ ಸಂಬಂಧಿತ ಲೈನ್‌ಬ್ಲಾಕ್‌ ಇರುವ ನಿಮಿತ್ತ ಜ. 18 ಮತ್ತು 25ರಂದು ಮೈಸೂರು ನಿಲ್ದಾಣದಿಂದ ಪ್ರಾರಂಭವಾಗುವ ಮೈಸೂರು-ಬೆಂಗಳೂರು ವಿಶೇಷ ಮೆಮು (06560) ರೈಲಿನ ಸೇವೆಯು ಕೆಂಗೇರಿ ಹಾಗೂ ಕೆಎಸ್‌ಆರ್‌ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗುವುದು. ಈ ದಿನಗಳಂದು ಮೈಸೂರು ನಿಲ್ದಾಣದಿಂದ ಹೊರಡುವ ರೈಲು ಕೆಂಗೇರಿ ನಿಲ್ದಾಣದಲ್ಲಿ ಕೊನೆಗೊಳ್ಳುವುದು.

ಮಲುಗೂರು ರೈಲ್ವೆ ನಿಲ್ದಾಣದ ಗೇಟ್‌ ಸಂಖ್ಯೆ64ರಲ್ಲಿ ಜ.17, 18 ಮತ್ತು20,21ರಂದು ರಸ್ತೆಕೆಳಸೇತುವೆಗಾಗಿ ಸೆಗಂಟಲ್‌ ೆ¾ ಬಾಕ್ಸ್‌ಗಳ ಅಳವಡಿಕೆ ಕಾಮಗಾರಿಯ ಸಲುವಾಗಿ ಲೈನ್‌ ಬ್ಲಾಕ್‌ ಇರುವ ನಿಮಿತ್ತ ಕೆಲ ರೈಲುಗಳ ಸೇವೆಯಲ್ಲಿ ಬದಲಾವಣೆ ಆಗಲಿದೆ. ರೈಲುಗಳ ಸೇವೆ ರದ್ದು: ಜ. 17, 18, 20 ಮತ್ತು 21ರಂದು ಬೆಂಗಳೂರು ಕಂಟೋನ್ಮೆಂಟ್‌ ನಿಂದ ಪ್ರಾರಂಭವಾಗುವ ಬೆಂಗಳೂರು ಕಂಟೋನ್ಮೆಂಟ್‌-ಧರ್ಮಾವರಂ ಮೆಮು ವಿಶೇಷ ಪ್ಯಾಸೆಂಜರ್‌ (06595) ಹಾಗೂ ಧರ್ಮಾವರಂನಿಂದ ಆರಂಭವಾಗುವ ಧರ್ಮಾವರಂ- ಬೆಂಗಳೂರು ಕಂಟೋನ್ಮೆಂಟ್‌ ಮೆಮು ವಿಶೇಷ ಪ್ಯಾಸೆಂಜರ್‌ (06596) ರೈಲುಗಳ ಸೇವೆ ರದ್ದಾಗಲಿವೆ.

ಜ.16ರಂದು ರಾಜಕೋಟ-ಕೊಯಮತ್ತೂರು ಎಕ್ಸ್‌ ಪ್ರಸ್‌(16613) ರೈಲು ಗುಂತಕಲ್‌, ರೇಣಿಗುಂಟಾ, ಜೋಲಾರಪೇಟೆ, ತಿರುಪತ್ತೂರು ನಿಲ್ದಾಣಗಳ ಮಾರ್ಗವಾಗಿ ಬದಲಾದ ಮಾರ್ಗದಲ್ಲಿ ಸಂಚರಿಸುವುದು. ಗುತ್ತಿ, ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ, ಕೃÐರಾಜಪ ‌¡ ುರಂ, ಬಂಗಾರಪೇಟೆ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ. 16ರಂದು ಟುಟಿಕೊರಿನ್‌-ಓಖಾ ಎಕ್ಸ್‌ಪ್ರೆಸ್‌ (19567) ರೈಲು ಸೇಲಂ, ಜೋಲಾರಪೇಟೆ, ರೇಣಿಗುಂಟಾ, ಗುಂತಕಲ್‌ ನಿಲ್ದಾಣಗಳ ಮಾರ್ಗ ವಾಗಿ ಬದಲಾದ ಮಾರ್ಗದಲ್ಲಿ ಸಂಚರಿಸುವುದು. ಬಂಗಾರಪೇಟೆ, ಕೃಷ್ಣರಾಜಪುರಂ, ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ