Breaking News
Home / Uncategorized / ನೈಸ್​ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನಗಳ ಸಂಚಾರ ಸಂಪೂರ್ಣ ಬ್ಯಾನ್!

ನೈಸ್​ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನಗಳ ಸಂಚಾರ ಸಂಪೂರ್ಣ ಬ್ಯಾನ್!

Spread the love

ಬೆಂಗಳೂರು: ಬೆಂಗಳೂರು ಹೊರವಲಯದ ನೈಸ್​ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸವಾರರ ಮೇಲೆ ದಾಳಿಗಳು ಮತ್ತು ದರೋಡೆ ಪ್ರಕರಣಗಳು ಹೆಚ್ಚಳವಾಗುತ್ತಿವೆ.

ಈ ಹಿನ್ನೆಲೆಯಲ್ಲಿ ಜನವರಿ 16ರಿಂದ ಜಾರಿಗೆ ಬರುವಂತೆ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧ ಮಾಡಲಾಗಿದೆ. ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್​ ಆಯುಕ್ತ (Joint Commissioner of Police, Traffic Bengaluru City) ಡಾ. ಬಿ ಆರ್​ ರವಿಕಾಂತೇ ಗೌಡ (Dr. B.R. Ravikanthe Gowda IPS) ಅವರ ಸಲಹೆಯ ಮೇರೆಗೆ ಸುರಕ್ಷತಾ ದೃಷ್ಟಿಯಿಂದ ನೈಸ್​ ಆಡಳಿತ ಮಂಡಳಿಯು (Nandi Economic Corridor Enterprises Limited) ಇನ್ನು ಮುಂದೆ ನೈಸ್ ರಸ್ತೆಯಲ್ಲಿ ದಿಚಕ್ರ ವಾಹನಗಳ ಸಂಚಾರವನ್ನು ರಾತ್ರಿ ವೇಳೆ ಸಂಪೂರ್ಣವಾಗಿ ನಿರ್ಬಂಧಿಸಿದೆ.

ನೈಸ್ ರಸ್ತೆಯಲ್ಲಿ ವಾಹನಗಳ ಅಡ್ಡಗಟ್ಟಿ ಸುಲಿಗೆ: ಕೋಣನಕುಂಟೆ ಪೊಲೀಸರಿಂದ ಮೂವರು ಯುವಕರ ಅರೆಸ್ಟ್

ಬೆಂಗಳೂರು: ನೈಸ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡ್ತಿದ್ದ ಮೂವರು ಯುವಕರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಸುನಿಲ್, ಹರೀಶ್ ಮತ್ತು ನವೀನ್‌ ಬಂಧಿತರು. ಬೆಂಗಳೂರಿನ ಕೋಣನಕುಂಟೆ ಪೊಲೀಸರು ಮೂವರನ್ನೂ ಅರೆಸ್ಟ್ ಮಾಡಿದ್ದಾರೆ.

ಮೂವರೂ ಅರೋಪಿಗಳು ಪ್ಲಾನ್ ಮಾಡಿದ ನಂತರ ರಸ್ತೆ ಮಧ್ಯೆ ವಾಹನ ತಡೆದು ಚಾಕುವಿನಿಂದ ಹಲ್ಲೆ ಮಾಡ್ತಿದ್ದರು. ಚಾಕುವಿನಿಂದ ಹಲ್ಲೆ ಮಾಡಿದ ಬಳಿಕ ಅರೋಪಿಗಳನ್ನು ನಗ, ನಾಣ್ಯ ದೋಚುತಿದ್ದರು. ಕಳೆದ ಶುಕ್ರವಾರ ಇಂತಹುದೇ ಹಲ್ಲೆ ಮತ್ತು ಸುಲಿಗೆ ನಡೆದಿತ್ತು. ನಾಯಂಡಹಳ್ಳಿಯಲ್ಲಿ ಒರ್ವ ಅರೋಪಿ ಕ್ಯಾಂಟರ್ ಹತ್ತಿದ್ದ. ಬಳಿಕ ದಾರಿ ಮಧ್ಯೆ ಮತ್ತೆ ಮೂವರು ಅರೋಪಿಗಳು ಕ್ಯಾಟರ್ ಹತ್ತಿದ್ದರು. ಅದಾದ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಮೊಬೈಲ್ ಹಾಗು ಹಣ ದೋಚಿದ್ದರು.

 


Spread the love

About Laxminews 24x7

Check Also

ನೀರಿಲ್ಲದಿದ್ದರೇನು..? ಬಿಯರ್ ಇದೆಯಲ್ಲ.. : ಬೆಂಗಳೂರಲ್ಲಿ ಬಿಯರ್‌ಗೆ ಫುಲ್ ಡಿಮ್ಯಾಂಡ್!

Spread the loveಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ಹೆಚ್ಚಾಗುತ್ತಿದ್ದು, ಬಿಯರ್‌ಗೂ ಬೇಡಿಕೆ ಹೆಚ್ಚಾಗಿದೆ. ಮದ್ಯಪ್ರಿಯರು ಹಾಟ್​ ಡ್ರಿಂಕ್ಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ