Breaking News

ಶಾಲಾ ಮಕ್ಕಳು ನಿರ್ಮಿಸಿರುವ ಶಿವಾಜಿ ಮಹಾರಾಜರ ಕೋಟೆ

Spread the love

ಬೆಳಗಾವಿಯಟಳಕವಾಡಿಯ ಎಸ್‍ಕೆಇ ಸೊಸೈಟಿಯ ಹೈಸ್ಕೂಲ್ ವಿದ್ಯಾರ್ಥಿಗಳು ಅಖಂಡ ಹಿಂದೂ ಸಾಮ್ರಾಟ್ ಶಿವಾಜಿ ಮಹಾರಾಜರ ಜೀವನ ಹಾಗೂ ವೈಭವಯುತ ಆಡಳಿತವನ್ನು ಜನತೆಗೆ ತಿಳಿಸುವ ದೃಷ್ಟಿಯಿಂದ ಈ ಕಿಲ್ಲಾ ಮಾದರಿಗಳನ್ನು ತಮ್ಮದೇ ಆದ ಪರಿಕಲ್ಪನೆಯಲ್ಲಿ ನಿರ್ಮಾಣ ಮಾಡಿದ್ದಾರೆ. ವಿದ್ಯಾರ್ಥಿಗಳ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಕಿಲ್ಲಾ ಮಾದರಿಗಳ ಉದ್ಘಾಟನೆಯನ್ನು ಲೋಕಮಾನ್ಯ ಸೊಸೈಟಿ ಹಾಗೂ ಭಗವೇವಾದಳ್ ಸಂಸ್ಥೆಯ ಪಧಾಧಿಕಾರಿಗಳು ನೆರವೇರಿಸಿ ವಿದ್ಯಾರ್ಥಿಗಳ ಕಾರ್ಯವನ್ನು ಪ್ರಶಂಶಿಸಿದರು.

ಒಬ್ಬರಿಗಿಂತ ಒಬ್ಬರು ಶೂರ ಸೈನಿಕರು, ಒಂದಕ್ಕಿಂದ ಒಂದು ಅಭೇದ್ಯ ಕೋಟೆಗಳು, ಶಿವಾಜಿ ಮಹಾರಾಜರ ಜೀವನ ಹಾಗೂ ವೈಭವಯುತ ಆಡಳಿತವನ್ನು ತಿಳಿಸುವ ಈ ಕಿಲ್ಲಾ ಮಾದರಿಗಳು ಮೂಡಿ ಬಂದಿದ್ದು ಟಳಕವಾಡಿ ಹೈಸ್ಕೂಲ್ ವಿದ್ಯಾರ್ಥಿಗಳ ಈ ರೀತಿಯ ಪರಿಕಲ್ಪನೆಯಲ್ಲಿ.

ಎಸ್‍ಕೆಇ ಸಮಸ್ಥೆಯ ಅಧ್ಯಕ್ಷರಾದ ಕಿರಣ್ ಠಾಕೂರ್, ಉಪಾಧ್ಯಕ್ಷರಾದ ಎಸ್‍ವೈ ಪ್ರಭು, ಪ್ರಾಂಶುಪಾಲರಾದ ಆರ್.ಆರ್ ಕುಡತೂರ್‍ಕರ್, ಸೌರಭ ಕುಂಬಾರವಾಡಿ, ಇವರ ಸಹಾಯದಿಂದ ಶಾಲೆಯ 6ಮತ್ತು 7ನೇ ತರಗತಿ ವಿದ್ಯಾರ್ಥಿಗಳು ಕಿಲ್ಲಾ ಮಾದರಿಗಳನ್ನು ತಯಾರಿ ಮಾಡಿದ್ದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ