Breaking News
Home / ರಾಜಕೀಯ / ಮೆಟ್ರೋ ಕಾಮಗಾರಿ ವೇಳೆ ಅರ್ಧಕ್ಕೆ ತುಂಡಾಗಿ ಬಿದ್ದ ಬೃಹತ್ ಕ್ರೇನ್​​.. ತಪ್ಪಿದ ಭಾರೀ ದುರಂತ

ಮೆಟ್ರೋ ಕಾಮಗಾರಿ ವೇಳೆ ಅರ್ಧಕ್ಕೆ ತುಂಡಾಗಿ ಬಿದ್ದ ಬೃಹತ್ ಕ್ರೇನ್​​.. ತಪ್ಪಿದ ಭಾರೀ ದುರಂತ

Spread the love

ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಾಂತರ ನಡೆದಿದ್ದು, ಮೆಟ್ರೋ ಫೇಸ್ -2 ಕಾಮಗಾರಿ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಬಹು ದೊಡ್ಡ ಕ್ರೇನ್​​ ನಲವತ್ತು ಅಡಿ ಎತ್ತರದಿಂದ ಕೆಳಗೆ ಬಿದ್ದ ಘಟನೆ ಸಿಲ್ಕ್ ಬೋರ್ಡ್ ಬಳಿ ನಡೆದಿದೆ.

ಸಿಲ್ಕ್ ಬೋರ್ಡ್ ಟು ಕೆ ಆರ್ ಪುರಂ ಮಾರ್ಗವಾಗಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಮೆಟ್ರೋ ಸೆಗ್ಮೆಂಟ್ಸ್ ಜೋಡಿಸುವ ಕಾರ್ಯ ನಡೆಯುತ್ತಿದ್ದು, ಈ ವೇಳೆ ಮೆಷಿನ್ ಅರ್ಧಕ್ಕೆ ಕಟ್ ಆದ ಪರಿಣಾಮ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇಂದು ಬೆಳಗ್ಗೆ 6:30ರ ವೇಳೆಗೆ ಘಟನೆ ನಡೆದಿದ್ದು, ನೂರಾರು ಮೆಟ್ರೋ ಕಾರ್ಮಿಕರು ಭಾರೀ ಅನಾಹುದಿಂದ ಅದೃಷ್ಟವಶಾತ್​ ಪಾರಾಗಿದ್ದಾರೆ.

 

ಸದ್ಯ ಕೆಳಕ್ಕೆ ಬಿದ್ದಿರುವ ಲಾಂಚಿಂಗ್ ಗಾರ್ಡ್ ಎಂಬ ಬೃಹತ್ ಮೆಷಿನ್ ಮೇಲೆತ್ತಲು ಕಾರ್ಮಿಕರು ಹರಸಾಹಸ ಪಡುತ್ತಿದ್ದು, ಅಪಘಡ ಸಂಭವಿಸಿದರು ಸ್ಥಳಕ್ಕೆ ಮೆಟ್ರೋದ ಉನ್ನತ ಅಧಿಕಾರಿಗಳು ಆಗಮಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಘಟನೆ ನಡೆದು ಆರು ಗಂಟೆ ಕಳೆದ್ರು ಬಿಎಂಆರ್​​ಸಿಎಲ್​​ನ ಅಧಿಕಾರಿಗಳು ಬಂದಿಲ್ಲ ಎನ್ನಲಾಗಿದೆ.


Spread the love

About Laxminews 24x7

Check Also

ಇಂದು, ನಾಳೆ ಬೆಂಗಳೂರಿನಲ್ಲಿ ಅಮಿತ್‌ ಶಾ, ಯೋಗಿ ರೋಡ್‌ ಶೋ

Spread the loveಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ