Breaking News
Home / ಸಿನೆಮಾ / ಕ್ರಿಶ್ಚಿಯನ್​ ಹೆಸರುಗಳ ಹಿಂದೆ ಬಿದ್ದಿರುವುದೇಕೆ ಸ್ಯಾಂಡಲ್​ವುಡ್​? ಗಾಂಧಿನಗರದಲ್ಲಿ ಇದು ಹೊಸ ಟ್ರೆಂಡ್​​

ಕ್ರಿಶ್ಚಿಯನ್​ ಹೆಸರುಗಳ ಹಿಂದೆ ಬಿದ್ದಿರುವುದೇಕೆ ಸ್ಯಾಂಡಲ್​ವುಡ್​? ಗಾಂಧಿನಗರದಲ್ಲಿ ಇದು ಹೊಸ ಟ್ರೆಂಡ್​​

Spread the love

ಸದ್ಯದ ಪರಿಸ್ಥಿತಿ ಗಮನಿಸಿದರೆ ಗಾಂಧಿನಗರದಲ್ಲಿ ಕ್ರಿಶ್ಚಿಯನ್​ ಹೆಸರುಗಳನ್ನು ಸಿನಿಮಾಗೆ ಶೀರ್ಷಿಕೆಯನ್ನಾಗಿರುವ ಟ್ರೆಂಡ್​ ಚಾಲ್ತಿಗೆ ಬಂದಿದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ಈ ರೀತಿಯ ಹೆಸರುಗಳನ್ನು ಇಟ್ಟುಕೊಳ್ಳುತ್ತಿವೆ.

ಒಂದು ಸಿನಿಮಾದ ಶೀರ್ಷಿಕೆ ಆಕರ್ಷಕವಾಗಿದ್ದರೆ ಆ ಸಿನಿಮಾ ಅರ್ಧ ಗೆದ್ದಂತೆಯೇ ಸರಿ. ಹಾಗಾಗಿ ತಮ್ಮ ಚಿತ್ರಕ್ಕೆ ಟೈಟಲ್​ ಇಡುವಾಗ ನಿರ್ದೇಶಕರು ಸಖತ್​ ಎಚ್ಚರಿಕೆ ವಹಿಸುತ್ತಾರೆ. ಇನ್ನೂ ಕೆಲವೊಮ್ಮೆ ಫ್ಯಾನ್ಸಿ ಟೈಟಲ್​ಗಳ ಮೊರೆ ಹೋಗಲಾಗುತ್ತದೆ. ಆಯಾ ಕಾಲಕ್ಕೆ ತಕ್ಕಂತೆ ಸಿನಿಮಾ ಹೆಸರುಗಳ ಟ್ರೆಂಡ್​ ಬದಲಾಗುತ್ತವೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಗಾಂಧಿನಗರದಲ್ಲಿ ಕ್ರಿಶ್ಚಿಯನ್​ ಹೆಸರುಗಳನ್ನು ಸಿನಿಮಾಗೆ ಶೀರ್ಷಿಕೆಯನ್ನಾಗಿರುವ ಟ್ರೆಂಡ್​ ಚಾಲ್ತಿಗೆ ಬಂದಿದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ಈ ರೀತಿಯ ಹೆಸರುಗಳನ್ನು ಇಟ್ಟುಕೊಳ್ಳುತ್ತಿವೆ. ಎಲ್ಲ ಭಾಷೆಯಲ್ಲಿ, ಅಂದರೆ ಪ್ಯಾನ್​ ಇಂಡಿಯಾ ಮಾರುಕಟ್ಟೆಗೆ ಸೂಕ್ತ ಆಗಬೇಕು ಎಂಬ ಕಾರಣಕ್ಕೆ ಇಂಥ ಟೈಟಲ್​ಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿವೆ ಎಂಬ ಮಾತು ಕೇಳಿಬರುತ್ತಿದೆ.

ದರ್ಶನ್​ ನಟನೆಯ ‘ರಾಬರ್ಟ್’, ಪುನೀತ್​ ರಾಜ್​ಕುಮಾರ್​ ಅಭಿನಯಿಸುತ್ತಿರುವ ‘ಜೇಮ್ಸ್​’, ರಕ್ಷಿತ್​ ಶೆಟ್ಟಿ ನಟನೆಯ ‘ರಿಚರ್ಡ್​ ಆಯಂಟೊನಿ’ ಮತ್ತು ‘777 ಚಾರ್ಲಿ’ ಸಿನಿಮಾಗಳು ಈ ಟ್ರೆಂಡ್​ ಫಾಲೋ ಮಾಡಿವೆ. ಅಷ್ಟೇ ಅಲ್ಲ, ಧ್ರುವ ಸರ್ಜಾ ಮತ್ತು ಎ.ಪಿ. ಅರ್ಜುನ್​ ಕಾಂಬಿನೇಷನ್​ನ ಹೊಸ ಚಿತ್ರಕ್ಕೆ ‘ಮಾರ್ಟಿನ್​’ ಎಂದು ಹೆಸರು ಇಡಲಾಗಿದೆ.


Spread the love

About Laxminews 24x7

Check Also

ಪುನೀತ್​ ರಾಜ್​ಕುಮಾರ್ ಅವರು​ ಇಹಲೋಕ ತ್ಯಜಿಸಿ ಇಂದಿಗೆ 2 ವರ್ಷ

Spread the love ಕನ್ನಡದ ಹೆಸರಾಂತ ನಟ ಪುನೀತ್​ ರಾಜ್​ಕುಮಾರ್ ಅವರು​ ಇಹಲೋಕ ತ್ಯಜಿಸಿ ಇಂದಿಗೆ 2 ವರ್ಷವಾಗುತ್ತಿದೆ. ಪುಣ್ಯಸ್ಮರಣೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ