Home / ಜಿಲ್ಲೆ / ಬೆಂಗಳೂರು / ‘ಮಾದಕ’ ನಟಿಯರಿಗೆ ಮತ್ತೆ ಸಂಕಷ್ಟ , ಡ್ರಗ್ಸ್ ಸೇವನೆ ದೃಢ

‘ಮಾದಕ’ ನಟಿಯರಿಗೆ ಮತ್ತೆ ಸಂಕಷ್ಟ , ಡ್ರಗ್ಸ್ ಸೇವನೆ ದೃಢ

Spread the love

ಬೆಂಗಳೂರು, ಆ.24- ಸ್ಯಾಂಡಲ್‍ವುಡ್ ನಟಿಯರಾದ ಸಂಜನಾ ಮತ್ತು ರಾಗಿಣಿ ಅವರುಗಳು ಡ್ರಗ್ಸ್ ಸೇವನೆ ಮಾಡಿರುವುದು ಎಫ್‍ಎಸ್‍ಎಲ್ ವರದಿಯಿಂದ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಈ ಇಬ್ಬರು ನಟಿಯರು ಡ್ರಗ್ಸ್ ಸೇವಿಸಿದ್ದಾರೆಯೇ ಎಂಬ ಬಗ್ಗೆ ತಿಳಿಯಲು ಇವರಿಬ್ಬರ ತಲೆ ಕೂದಲನ್ನು ಹೈದರಾಬಾದ್‍ನ ಎಫ್‍ಎಸ್‍ಎಲ್‍ಗೆ ಸಿಸಿಬಿ ಪೊಲೀಸರು ಕಳುಹಿಸಿದ್ದರು.

ಇದೀಗ ಅದರ ವರದಿ ಸಿಸಿಬಿ ಕೈ ಸೇರಿದ್ದು, ವರದಿಯಲ್ಲಿ ಈ ಇಬ್ಬರು ನಟಿಯರಲ್ಲದೆ ಇನ್ನೂ ಹಲವರು ಡ್ರಗ್ಸ್ ಸೇವನೆ ಮಾಡಿರುವುದು ಉಲ್ಲೇಖಿಸಲಾಗಿದೆ ಎಂದು ಗೊತ್ತಾಗಿದೆ. ನಟಿಯರು, ಪಾರ್ಟಿ ಆಯೋಜಕರು, ಡ್ರಗ್ಸ್ ಪೆಡ್ಲರ್ ಡ್ರಗ್ಸ್ ಸೇವಿಸಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಡ್ರಗ್ಸ್ ಪ್ರಕರಣಗಳಲ್ಲಿ ಇದೇ ಮೊದಲ ಬಾರಿಗೆ ಆರೋಪಿಗಳ ತಲೆಗೂದಲು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿಯಲ್ಲಿ ಆರೋಪಿಗಳು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಪೊಲೀಸ್ ಅಧಿಕಾರಿಗಳು ಸಾಮಾನ್ಯವಾಗಿ ಎನ್‍ಡಿಪಿಎಸ್ ಪ್ರಕರಣಗಳ ತನಿಖೆಯಲ್ಲಿ ಬಂಧಿಸುವ ಆರೋಪಿಗಳ ರಕ್ತ ಮತ್ತು ಮೂತ್ರಗಳನ್ನು ಸಂಗ್ರಹಿಸಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಡ್ರಗ್ಸ್ ಬಳಸಿರುವುದನ್ನು ದೃಢಪಡಿಸಿಕೊಳ್ಳುವ ಪದ್ದತಿ ಅನುಸರಿಸುತ್ತಾರೆ. ಆದರೆ ಈ ಪದ್ದತಿಯಿಂದ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿರುವ ಒಂದೆರಡು ದಿನಗಳಲ್ಲಿ ಮಾತ್ರ ರಕ್ತ ಅಥವಾ ಮೂತ್ರದಲ್ಲಿ ಡ್ರಗ್ಸ್ ಅಂಶಗಳು ಪತ್ತೆಯಾಗುತ್ತದೆ.

ಈ ಪ್ರಕರಣದಲ್ಲಿ ತಲೆಮರೆಸಿಕೊಳ್ಳುವ ಆರೋಪಿಗಳನ್ನು ಬಹಳ ದಿನಗಳ ನಂತರ ಬಂಧಿಸಿದ ಸಂದರ್ಭದಲ್ಲಿ ಈ ಪದ್ದತಿಯಿಂದ ಆರೋಪಿಗಳು ಡ್ರಗ್ಸ್ ಉಪಯೋಗಿಸಿರುವುದು ಪತ್ತೆಯಾಗುವ ಸಾಧ್ಯತೆ ಕ್ಷೀಣಿಸುವುದರಿಂದ ತನಿಖೆಯಲ್ಲಿ ಹಿನ್ನಡೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಕಳೆದ ಸಾಲಿನ ಡ್ರಗ್ಸ್ ಪ್ರಕರಣಗಳಲ್ಲಿ ಬೇರೆ ಬೇರೆ ಸಾಕ್ಷ್ಯಾಧಾರಗಳಿಂದ ಆರೋಪಿಗಳು ಡ್ರಗ್ಸ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ.

ಬಂಧಿತರಾಗುವ ಪೂರ್ವದಲ್ಲಿ ಬಹಳ ದಿನಗಳು ಆರೋಪಿಗಳು ತಲೆಮರೆಸಿಕೊಂಡಿದ್ದರಿಂದ, ಹೊಸ ಪದ್ದತಿಯಿಂದಾಗಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಆರೋಪಿಗಳ ತಲೆ ಕೂದಲುಗಳನ್ನು ಸಂಗ್ರಹಿಸಿ ಹೈದಾರಾಬಾದ್‍ನ ಸಿಎಫ್‍ಎಸ್‍ಎಲ್ ಸಂಸ್ಥೆಗೆ ಕಳುಹಿಸಿ ಪರೀಕ್ಷಾ ವರದಿಯನ್ನು ಪಡೆದಿದ್ದಾರೆ ಎಂದು ಗೊತ್ತಾಗಿದೆ.

ಈ ಪದ್ದತಿಯಿಂದ ಆರೋಪಿಗಳು ಡ್ರಗ್ಸ್ ಉಪಯೋಗಿಸಿದ್ದಲ್ಲಿ ಅವರ ತಲೆಕೂದಲಿನ ಪರೀಕ್ಷೆಯಿಂದ ಒಂದು ವರ್ಷದವರೆಗೆ ಡ್ರಗ್ಸ್ ಅಂಶಗಳನ್ನು ಪತ್ತೆ ಮಾಡಬಹುದಾಗಿರುತ್ತದೆ. ಒಟ್ಟಾರೆ ಈ ಪ್ರಕರಣದಲ್ಲಿ ಆರೋಪಿಗಳ ತಲೆ ಕೂದಲಿನ ಪರೀಕ್ಷೆಯಿಂದ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದು, ಸಕಾರಾತ್ಮಕ ವರದಿ ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಿಸಿಬಿ ಅಧಿಕಾರಿಗಳ ಈ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ