Breaking News
Home / ಅಂತರಾಷ್ಟ್ರೀಯ / ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಕೊರೊನಾ ಲಸಿಕೆ ಲಭ್ಯವಾಗುವಂತೆ ಮಾಡಲು ಈಗಿನಿಂದಲೇಸಿದ್ಧತಾ ಕಾರ್ಯ:W.H.O.

ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಕೊರೊನಾ ಲಸಿಕೆ ಲಭ್ಯವಾಗುವಂತೆ ಮಾಡಲು ಈಗಿನಿಂದಲೇಸಿದ್ಧತಾ ಕಾರ್ಯ:W.H.O.

Spread the love

ವಿಶ್ವಸಂಸ್ಥೆ, ಅ.20- ಕಿಲ್ಲರ್ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಸಹಕಾರ ನೀಡುತ್ತಿರುವ ವಿಶ್ವಸಂಸ್ಥೆಯ ಪ್ರಮುಖ ಅಂಗ ಸಂಸ್ಥೆಗಳಲ್ಲಿ ಒಂದಾದ ಯೂನಿಸೆಫ್ (ಸಂಯುಕ್ತ ರಾಷ್ಟ್ರಗಳ ಮಕ್ಕಳ ನಿಧಿ) ವರ್ಷಾಂತ್ಯದ ವೇಳೆಗೆ ಕೋವಿಡ್-19 ಲಸಿಕೆಗೆ ಪೂರ್ವಭಾವಿಯಾಗಿ 52 ಕೋಟಿ ಸಿರಿಂಜ್‍ಗಳನ್ನು ಸಿದ್ಧವಾಗಿಟ್ಟುಕೊಳ್ಳಲಿದೆ.ಮುಂದಿನ ವರ್ಷದ ಆರಂಭದಲ್ಲಿ ಕೊರೊನಾ ಲಸಿಕೆ ಮತ್ತು ಔಷಧಿಗಳು ಲಭ್ಯವಾಗಲಿದ್ದು, ಇವುಗಳ ಪೂರೈಕೆ ಮತ್ತು ನಿರ್ವಹಣೆಯಲ್ಲಿ ಯಾವುದೇ ರೀತಿಯ ಅಡಚಣೆಯಾಗದಂತೆ ಈ ವರ್ಷದ ಅಂತ್ಯದ ವೇಳೆಗೆ 52 ದಶಲಕ್ಷ ಸಿರಿಂಜ್‍ಗಳನ್ನು ದಾಸ್ತಾನು ಮಾಡುವುದಾಗಿ ಯೂನಿಸೆಫ್ ಹೇಳಿದೆ.ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಕೊರೊನಾ ಲಸಿಕೆ ಲಭ್ಯವಾಗುವಂತೆ ಮಾಡಲು ಈಗಿನಿಂದಲೇ ತಾನೂ ಸಿದ್ಧತಾ ಕಾರ್ಯಗಳನ್ನು ಕೈಗೊಂಡಿದ್ದು, ಕ್ಷಿಪ್ರ, ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಗಾಗಿ ಮೊದಲ ಹಂತವಾಗಿ 52 ಕೋಟಿ ಸಿರಿಂಜ್‍ಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಯೂನಿಸೆಫ್ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. 2021ರ ಮಾರ್ಚ್ ವೇಳೆಗೆ 100 ಕೋಟಿ ಸಿರಿಂಜ್‍ಗಳನ್ನು ಪೂರೈಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

Spread the love ಹೊಸದಿಲ್ಲಿ: ವಿಶ್ವದ ಖ್ಯಾತ ಆಹಾರೋತ್ಪನ್ನ ಕಂಪೆನಿ ನೆಸ್ಲೆ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಭಾರತದಲ್ಲಿ ವಿತರಿಸುವ ಶಿಶು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ