Breaking News

ಬೆಂಗಳೂರಲ್ಲಿ ಎಸಿಪಿ-ಇನ್ಸ್‌ಪೆಕ್ಟರ್‌ ಹೆಗಲೇರಿದೆ ಕೊರೋನಾ………..

Spread the love

ಬೆಂಗಳೂರು,ಜು.1- ನಗರದ ಪಶ್ಚಿಮ ವಿಭಾಗದ ಒಬ್ಬರು ಎಸಿಪಿ ಮತ್ತು ಇನ್‍ಸ್ಪೆಕ್ಟರ್ ಒಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.  ಎಸಿಪಿ ಮತ್ತು ಇನ್‍ಸ್ಪೆಕ್ಟರ್ ಅವರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್.ಬಿ ಈ ಸಂಜೆಗೆ ತಿಳಿಸಿದ್ದಾರೆ.

ಇದುವರೆಗೂ ಪಶ್ಚಿಮ ವಿಭಾಗದಲ್ಲಿ 43 ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವರಲ್ಲಿ ಕೆಲವರು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ.ಈಗಾಗಲೇ ಕಾನ್‍ಸ್ಟೆಬಲ್, ಹೆಡ್‍ಕಾನ್‍ಸ್ಟೆಬಲ್, ಎಎಸ್‍ಐಗಳಲ್ಲಿ ಕಾಣಿಸಿಕೊಂಡಿದ್ದ ಮಹಾಮಾರಿ ಕೊರೊನಾ ಇದೀಗ ಅಧಿಕಾರಿಗಳಲ್ಲೂ ಕಂಡುಬಂದಿದೆ. ನಿನ್ನೆ ಇದೇ ವಿಭಾಗದಲ್ಲಿ ಸಬ್‍ಇನ್‍ಸ್ಪೆಕ್ಟರ್ ಒಬ್ಬರಿಗೂ ಕೊರೊನಾ ಪಾಸಿಟಿವ್ ಕಂಡುಬಂದಿತ್ತು.


Spread the love

About Laxminews 24x7

Check Also

ಮಾನವೀಯತೆಯನ್ನ ಮಾರಿಕೊಂಡ ವಿಕ್ಟೋರಿಯಾ ಆಸ್ಪತ್ರೆ..!?

Spread the loveಫೆವಿಕಲ್ ಕುಡಿದು 2 ವರ್ಷದ ಮಗು ಮೃತಪಟ್ಟಿತ್ತು. ಪೋಸ್ಟ್ ಮಾರ್ಟಂ ಗೆ ವಿಕ್ಟೋರಿಯಾ ಆಸ್ಪತ್ರೆಗೆ ಶವ ತೆಗೆದುಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ