Breaking News

ಕೊಡಗು ಜಿಲ್ಲೆಯಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆ……….

Spread the love

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಬಿರುಗಾಳಿಯ ರಭಸಕ್ಕೆ ಮನೆಗಳ ಛಾವಣಿ ಹಾಗೂ ಹೆಂಚುಗಳು ಹಾರಿವೆ.

ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯಾದ್ಯಂತ ಭಾನುವಾರ ಸಂಜೆ ಭಾರೀ ಮಳೆ ಸುರಿದಿದ್ದು, ಬಿರುಗಾಳಿ ಸಹಿತ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ.

ಸಂಜೆ ಗುಡುಗು ಸಹಿತ ಪ್ರಾರಂಭವಾದ ಬಿರುಗಾಳಿ ಮಳೆಗೆ ಶನಿವಾರಸಂತೆ ಸಮೀಪದ ಅಪ್ಪಶೆಟ್ಟಳ್ಳಿ, ದೊಡ್ಡ ಬಿಳಾಹ, ಗಸುಳುಗಳಲೆ ಕಾಲೋನಿ ಹಾಗೂ ಚಿನ್ನಳ್ಳಿ ಗ್ರಾಮಗಳ ಹಲವು ಮನೆಗಳ ಮೇಲ್ಛಾವಣಿ, ಹೆಂಚುಗಳು ಹಾಗೂ ವಿದ್ಯುತ್ ಕಂಬಗಳು ದರೆಗೆ ಉರುಳಿ ಅಪಾರ ನಷ್ಟ ಸಂಭವಿಸಿದೆ. ಮುಂಗಾರು ಪೂರ್ವದ ಮಳೆಯ ಅಬ್ಬರ ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿರೋದು ಬ್ರೋಕರ್‌ಗಳ ಸರ್ಕಾರ – ಹೆಚ್‌ಡಿಕೆ ವಾಗ್ದಾಳಿ

Spread the love ಹಾಸನ: ಈ ರಾಜ್ಯದ ಮುಖ್ಯಮಂತ್ರಿಗಳು ಅಹಿಂದ ಮುಂದಿಟ್ಟು ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದ್ದಾರೆ. ಈ ಸರ್ಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ