ಕೋಲಾರ: ಇಡೀ ವಿಶ್ವವನ್ನೇ ಹೆಮ್ಮಾರಿ ಕೊರೊನಾ ವೈರಸ್ ಭಾದಿಸುತ್ತಿದ್ದು, ಎಲ್ಲಿ ಹೋದ್ರೆ ಏನಾಗುತ್ತೊ, ಏನ್ ತಿಂದ್ರೆ ಏನ್ ಬರುತ್ತೊ ಅಂತಾ ಜನ ಭಯಭೀತರಾಗಿದ್ದಾರೆ. ಈ ನಡುವೆ ಕೋಲಾರದ ರೈತ ತಾನು ಬೆಳೆದ ತರಕಾರಿಯನ್ನ ಬೈಕ್ ನಲ್ಲಿ ಇಟ್ಟುಕೊಂಡು ಊರೂರು ಸುತ್ತಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಾ ಮಾರಾಟ ಮಾಡುತ್ತಿದ್ದಾರೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ರಾಜೇನಹಳ್ಳಿಯ ರೈತ ಯಲ್ಲಪ್ಪ ಮೂರ್ನಾಲ್ಕು ಭಾಷೆಗಳಲ್ಲಿ ಜೋರಾಗಿ ಕೂಗುತ್ತಾ ಸೊಪ್ಪು ತರಕಾರಿ ಮಾರುತ್ತಿದ್ದಾರೆ. ಜಾದೂಗಾರನಂತೆ ಮೂರ್ನಾಲ್ಕು ಭಾಷೆಗಳಲ್ಲಿ ಸೊಪ್ಪು, ತರಕಾರಿ ಹೆಸರು ಹೇಳುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಕೊರೊನಾ ಆತಂಕದ ನಡುವೆ ತರಕಾರಿ ವ್ಯಾಪಾರಿ ವಿಭಿನ್ನ ಪ್ರಯತ್ನ, ವಿವಿಧ ಭಾಷೆಯಲ್ಲಿ ಮಾತನಾಡುತ್ತ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕನ್ನಡ, ತೆಲುಗು, ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಾ ತರಕಾರಿ ಮಾರುತ್ತಾರೆ.ಯಲ್ಲಪ್ಪ ತರಕಾರಿ ಮಾರುವ ಶೈಲಿಗೆ ಜನರು ಫಿದಾ ಆಗಿದ್ದಾರೆ. ರೈತ ಯಲ್ಲಪ್ಪ ತರಕಾರಿ ಮಾರುವ ವಿಡಿಯೋಗಳು ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ.