Home / new delhi / ಚೆನ್ನೈ ವಿರುದ್ಧದ ಸೋಲಿನ ಸರಣಿಯನ್ನು ಮುರಿಯುವುದೇ ರಾಯಲ್ಸ್‌ ?

ಚೆನ್ನೈ ವಿರುದ್ಧದ ಸೋಲಿನ ಸರಣಿಯನ್ನು ಮುರಿಯುವುದೇ ರಾಯಲ್ಸ್‌ ?

Spread the love

ಮಣಿಪಾಲ: ಐಪಿಎಲ್‌ನ 13 ನೇ ಋತುವಿನ ನಾಲ್ಕನೇ ಪಂದ್ಯವು ಇಂದು ಶಾರ್ಜಾದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಮತ್ತು ರಾಜಸ್ಥಾನ್‌ ರಾಯಲ್ಸ್‌ (ಆರ್‌ಆರ್‌) ನಡುವೆ ನಡೆಯುತ್ತಿದೆ.

ಐಪಿಎಲ್ 13ನೇ ಆವೃತ್ತಿಯ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.

ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಎರಡನೇ ಪಂದ್ಯವನ್ನು ಆಡುತ್ತಿರುವ ಮಹೇಂದ್ರ ಸಿಂಗ್‌ ಧೋನಿ ಅವರ ಸಿಎಸ್‌ಕೆ ತಂಡವನ್ನು ಗೆಲ್ಲುವ ನೆಚ್ಚಿನ ತಂಡ ಎಂದು ಪರಿಗಣಿಸಲಾಗಿದೆ. ರಾಯಲ್ಸ್ ತಮ್ಮ ವಿರುದ್ಧದ ಕೊನೆಯ 5 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ರಾಜಸ್ಥಾನ ರಾಯಲ್ಸ್‌ ಗೆದ್ದಿದೆ. ಕಳೆದ ಬಾರಿಯ ಪಂದ್ಯದಲ್ಲಿ ಚೆನ್ನೈ ಎರಡೂ ಪಂದ್ಯಗಳಲ್ಲಿ ರಾಯಲ್ಸ್‌ ತಂಡವನ್ನು ಸೋಲಿಸಿತ್ತು.

ಅಂದಹಾಗೆ ಈ ಬಾರಿಯ ಪಂದ್ಯಾವಳಿಯಲ್ಲಿ ರಾಯಲ್ಸ್‌ ಮೊದಲ ಪಂದ್ಯವಾಡುತ್ತಿದೆ. ರಾಯಲ್ಸ್ ಬೆನ್‌ ಸ್ಟೋಕ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ಜೋಸ್‌ ಬಟ್ಲರ್‌ ಅವರ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಕ್ವಾರಂಟೈನಲ್ಲಿರುವ ಕಾರಣ ಬಟ್ಲರ್‌ ಆಡುತ್ತಿಲ್ಲ. ಕ್ಯಾರೆಂಟೈನ್‌ಲ್ಲಿ ಅವರು 6 ದಿನಗಳನ್ನು ಕಳೆಯಬೇಕಾಗಿದೆ. ಸ್ಟೋಕ್ಸ್‌ ಅವರ ತಂದೆಗೆ ಮೆದುಳಿನ ಕ್ಯಾನ್ಸರ್‌ ಇರುವ ಕಾರಣ ಆಸ್ಪತ್ರೆಯಲ್ಲಿ ತಂದೆಯ ಜತೆಗಿದ್ದಾರೆ ಎಂದು ತಿಳಿದು ಬಂದಿದೆ.

ಕ್ಯಾಪ್ಟನ್‌ ಧೋನಿ ಸಿಎಸ್‌ಕೆಯಲ್ಲಿ ಅತ್ಯಂತ ದುಬಾರಿ ಆಟಗಾರ. ತಂಡವು ಧೋನಿಗೆ ಒಂದು ಋತುವಿನಲ್ಲಿ 15 ಕೋಟಿ ರೂ. ನೀಡುತ್ತದೆ. ಕೇದಾರ್‌ ಜಾಧವ್‌ 7.80 ಕೋಟಿ ರೂ., ಸ್ಮಿತ್‌ 12.50 ಕೋಟಿ ರೂ., 8 ಕೋಟಿ ಮೌಲ್ಯದ ಸಂಜು ಸ್ಯಾಮ್ಸನ್‌ ರಾಜಸ್ಥಾನದಲ್ಲಿ ಅತ್ಯಂತ ದುಬಾರಿ.

ಪಿಚ್‌ ಮತ್ತು ಹವಾಮಾನ ವರದಿ
ಶಾರ್ಜಾದಲ್ಲಿ ನಡೆಯುವ ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಇಲ್ಲ. ತಾಪಮಾನವು 28ರಿಂದ 39 ಡಿಗ್ರಿ ಸೆಲ್ಸಿಯಸ್‌ ನಡುವೆ ಇರುವ ಸಾಧ್ಯತೆ ಇದೆ. ಪಿಚ್‌ ಬ್ಯಾಟಿಂಗ್‌ಗೆ ಅನುಕೂಲ ಮಾಡಿಕೊಡಲಿದೆ. ಇಲ್ಲಿ ನಿಧಾನಗತಿಯ ವಿಕೆಟ್‌ ಆಗಿರುವ ಕಾರಣ ಸ್ಪಿನ್ನರ್‌ಗಳಿಗೆ ಸಾಕಷ್ಟು ಸಹಾಯ ಮಾಡಲಿದೆ. ಟಾಸ್‌ ಗೆದ್ದ ತಂಡ ಮೊದಲು ಬ್ಯಾಟಿಂಗ್‌ ಮಾಡಲು ಇಷ್ಟಪಡುತ್ತದೆ. ಕಳೆದ 13 ಟಿ 20ಗಳಲ್ಲಿ ಇಲ್ಲಿ ಮೊದಲ ಬ್ಯಾಟಿಂಗ್‌ ತಂಡ ಶೇ. 69ರಷ್ಟು ಗೆಲುವು ಕಂಡಿತ್ತು.

  • ಈ ಮೈದಾನದಲ್ಲಿ ನಡೆದ ಒಟ್ಟು ಟಿ 20 13
  • ಮೊದಲ ಬ್ಯಾಟಿಂಗ್‌ ತಂಡದ ಗೆಲುವು 9
  • ಮೊದಲ ಬೌಲಿಂಗ್‌ ತಂಡ ಗೆಲುವು 4
  • ಮೊದಲ ಇನ್ನಿಂಗ್ಸ್‌ನಲ್ಲಿ ತಂಡದ ಸರಾಸರಿ ಸ್ಕೋರ್‌ 149
  • ಎರಡನೇ ಇನ್ನಿಂಗ್ಸ್‌ನಲ್ಲಿ ತಂಡದ ಸರಾಸರಿ ಸ್ಕೋರ್‌ 131

ಮೂರು ಬಾರಿ ಚಾಂಪಿಯನ್‌ ಆಗಿರುವ ಸಿಎಸ್‌ಕೆ ಈ ಪಂದ್ಯವನ್ನು ಗೆದ್ದರೆ 3 ತಂಡಗಳ ವಿರುದ್ಧ 15ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದ ಎರಡನೇ ತಂಡವಾಗಲಿದೆ. 2018, 2011, 2010 ಎಲ್ಲಿ ಚಾಂಪಿಯನ್‌ ಆಗಿತ್ತು.ಮುಂಬೈ ಇಂಡಿಯನ್ಸ್‌ ಈ ಹಿಂದೆಯೇ ಈ ಸಾಧನೆ ಮಾಡಿತ್ತು.

ಕೋವಿಡ್‌ ಗೆದ್ದ ರಿತುರಾಜ್‌
ಚೆನ್ನೈನ ರಿತುರಾಜ್‌ ಗೈಕ್ವಾಡ್‌ ಕೋವಿಡ್‌ ಮುಕ್ತರಾಗಿದ್ದಾರೆ.ಅವರ ಮೂರನೇ ವರದಿ ನಕಾರಾತ್ಮಕವಾಗಿದೆ. ಇದರೊಂದಿಗೆ ತರಬೇತಿಗೆ ಇಳಿದಿದ್ದಾರೆ. ಪಂದ್ಯಾವಳಿಯ ಮೊದಲು ರಿತುರಾಜ್‌ ಮತ್ತು ಚೆನ್ನೈನ ದೀಪಕ್‌ ಚಹರ್‌ ಸೇರಿದಂತೆ 13 ಜನರು ಸೋಂಕಿಗೆ ಒಳಗಾಗಿದ್ದರು. ರಿತುರಾಜ್‌ ಹೊರತುಪಡಿಸಿ ಎಲ್ಲರೂ ಈಗಾಗಲೇ ಚೇತರಿಸಿಕೊಂಡಿದ್ದಾರೆ. ದೀಪಕ್‌ ಮೊದಲ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಯಲ್ಸ್‌ ಬಲಾಬಲ
ರಾಯಲ್ಸ್ ತಂಡದಲ್ಲಿ, ಸ್ಮಿತ್‌, ಉತ್ತಪ್ಪ ಮತ್ತು ಆರ್ಚರ್‌ ಕೀ-ಆಟಗಾರರಾಗಿದ್ದಾರೆ. ಕ್ಯಾಪ್ಟನ್‌ ಸ್ಮಿತ್‌, ರಾಬಿನ್‌ ಉತ್ತಪ್ಪ, ಸಂಜು ಸ್ಯಾಮ್ಸನ್‌ ಪ್ರಮುಖ ಬ್ಯಾಟ್ಸ್‌ಮನ್‌ಗಳಿದ್ದಾರೆ. ಆಲ್‌ರಂಡರ್‌ಗಳಲ್ಲಿ ಟಾಮ್‌ ಕರಣ್‌ ಮತ್ತು ಶ್ರೇಯಾಸ್‌ ಗೋಪಾಲ್‌ ಇದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಇಂಗ್ಲೆಂಡ್‌ ವಿಶ್ವಕಪ್‌ ಗೆದ್ದ ಜೋಫ್ರಾ ಆರ್ಚರ್‌ ಅವರಲ್ಲದೆ, ಜಯದೇವ್‌ ಉನಾದ್ಕಟ್‌ ಮತ್ತು ವರುಣ್‌ ಆರನ್‌ ದೊಡ್ಡ ಆಟಗಾರರು ಇದ್ದಾರೆ. ಉಭಯ ತಂಡಗಳು ಈ ವರೆಗೆ ಐಪಿಎಲ್‌ನಲ್ಲಿ 22 ಪಂದ್ಯಗಳನ್ನು ಆಡಿವೆ. ಅವುಗಳಲ್ಲಿ ಚೆನ್ನೈ 14 ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ 8 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ.


Spread the love

About Laxminews 24x7

Check Also

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Spread the love ರಾಮನಗರ: ಇತ್ತೀಚೆಗೆ ಮೈಸೂರಿನಲ್ಲಿ ಆಯೋಜಿಸಿದ್ದ ಒಕ್ಕಲಿಗರ ಸಭೆಯಲ್ಲಿ “ಸಿಎಂ ಬದಲಾವಣೆ’ ಸುಳಿವು ನೀಡಿದ್ದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ