Breaking News

ಅನ್ಯ ರಾಜ್ಯದವರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಿದರೆ ರಾಜ್ಯದ ಜನರಿಗೆ ಅನ್ಯಾಯ: ಬಿಜೆಪಿ

Spread the love

ಬೆಳಗಾವಿ: ಅನ್ಯ ರಾಜ್ಯ, ವಿದೇಶಿಗರಿಗೆ ಕರ್ನಾಟಕ ಸರ್ಕಾರ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್‌ಸಿ) ನೀಡಲು ಹೋರಡಿಸಿರುವ ಅಧಿಸೂಚನೆ ಖಂಡಿಸಿ ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಬಿಜೆಪಿ ಪಕ್ಷ ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದೆ.

ಬಿಜೆಪಿ ಮುಖಂಡ ಎಂ.ಬಿ.ಜಿರಲಿ ಮಾತನಾಡಿ, ಬಾಂಗ್ಲಾದೇಶ ಮಾತ್ರವಲ್ಲದೇ ಪಶ್ಚಿಮ ಬಂಗಾಳದಿಂದ ಲಕ್ಷಾಂತರ ಮಂದಿ ಕರ್ನಾಟಕಕ್ಕೆ ಬಂದಿದ್ದಾರೆಂಬ ಮಾಹಿತಿ ಇದೆ. ರಾಜ್ಯ ಸರ್ಕಾರವು ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್‌ಸಿ) ನೀಡುವುದರಿಂದ  ಕರ್ನಾಟದ ಪ್ರಜೆಗಳಿಗೆ ಇದರಿಂದ ತೊಂದರೆ ಆಗಲಿದೆ. ನೀರು, ಆಹಾರ, ಪಡಿತರಚೀಟಿ ಸವಲತ್ತುಗಳು ಅವರಿಗೆ ಸಿಗಲಿದ್ದು, ರಾಜ್ಯದ ಪೌರರ ಸೌಲಭ್ಯಗಳು ಕಡಿಮೆ ಆಗಲಿದೆ. ಅಪರಾಧ ಪ್ರಮಾಣವೂ ಹೆಚ್ಚಾಗುವ ಭೀತಿ ತಲೆದೋರಿದೆ. ಕಾನೂನು ಸುವ್ಯವಸ್ಥೆಯೂ ನಿಯಂತ್ರಣದಲ್ಲಿ ಇಲ್ಲದ ಪರಿಸ್ಥಿತಿ ಬರಲಿದೆ. ಭಾರತದ ಸಂವಿಧಾನವು ದೇಶಾದ್ಯಂತ ಎಲ್ಲಾ ನಾಗರಿಕರಿಗೆ ಒಂದೇ ಪೌರತ್ವವನ್ನು ಕಲ್ಪಿಸುತ್ತದೆ. ಆದರೆ, ಕರ್ನಾಟಕ ಸರ್ಕಾರವು “ಶಾಶ್ವತ ನಿವಾಸ ಪ್ರಮಾಣಪತ್ರ” ವನ್ನು ನೀಡುವುದು ಈ ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು ಮಾತನಾಡಿ ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ಅಧಿಸೂಚನೆಯು ಅತ್ಯಂತ ಆತಂಕಕಾರಿಯಾಗಿದೆ. ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಅಥವಾ ರಾಜ್ಯದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ವ್ಯಕ್ತಿಗಳು ಸ್ಥಳೀಯ ದಾಖಲೆಗಳನ್ನು ನೀಡುವ ಮೂಲಕ ಅಥವಾ ಮೋಸದ ವಿಧಾನಗಳ ಮೂಲಕ ಶಾಶ್ವತ ನಿವಾಸ ಪ್ರಮಾಣಪತ್ರವನ್ನು ಪಡೆಯಬಹುದು.

ಈ ಪ್ರಮಾಣಪತ್ರವನ್ನು ನೀಡಿದ ನಂತರ, ವಿವಿಧ ರಾಜ್ಯ ಪ್ರಯೋಜನಗಳು, ಸರ್ಕಾರಿ ದಾಖಲೆಗಳು, ಶೈಕ್ಷಣಿಕ ಪ್ರವೇಶಗಳು, ಉದ್ಯೋಗಾವಕಾಶಗಳು ಮತ್ತು ಇತರ ಅರ್ಹತೆಗಳನ್ನು ಪಡೆಯಲು ಇದನ್ನು ಅವಲಂಬಿಸುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಾತನಾಡಿ ಪೌರತ್ವ, ವಿದೇಶಿಯರು, ವಲಸೆ ಮತ್ತು ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳು ಸಂವಿಧಾನದ ಅಡಿಯಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಧಿಕಾರವ್ಯಾಪ್ತಿಯಡಿ ಬರುತ್ತವೆ. ಶಾಶ್ವತ ನಿವಾಸ ಪ್ರಮಾಣಪತ್ರ ವಿತರಣೆಯ ರಾಜ್ಯ ಮಟ್ಟದ ಕಾರ್ಯವಿಧಾನವು ಕೇಂದ್ರದ ಏಕರೂಪದ ಚೌಕಟ್ಟನ್ನು ಅಂತಹ ಪ್ರಮಾಣಪತ್ರ ಸರಿಯಾದ ಪೌರತ್ವ ಪರಿಶೀಲನೆಯಿಲ್ಲದೆ ಅಂತಹ ನೀಡುವುದರಿಂದ ಅಕ್ರಮ ವಲಸಿಗರು ರಾಜ್ಯಗಳಲ್ಲಿ ನೆಲೆಸಿ ಅಕ್ರಮ ಚಟುವಟಿಕೆಗಳಲ್ಲೂ ತೊಡಗುವ ಸಾಧ್ಯತೆ ಇದೆ ಕೂಡಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರು ಮದ್ಯಪ್ರವೇಶ ಮಾಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ  ಬಿಜೆಪಿ ಮಹಾನಗರ  ಜಿಲ್ಲಾ ಅಧ್ಯಕ್ಷರಾದ ಗೀತಾ ಸುತಾರ, ಮುಖಂಡರಾದ ರಾಜೇಂದ್ರ ಹರಕುಣಿ, ರಾಜಶೇಖರ ಡೋಣಿ, ಮುರಗೇಂದ್ರಗೌಡ ಪಾಟೀಲ, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಯಲ್ಲೇಶ ಕೋಲಕಾರ, ಉಜ್ವಲಾ ಬಡವನಾಚೆ, ಕೋಶಾಧ್ಯಕ್ಷ ಸಂತೋಷ ದೇಶನೂರ, ಪ್ರಸಾದ ದೇವರಮನಿ ಸೇರಿದಂತೆ ಪಕ್ಷದ  ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಟೌನ್‌ಶಿಪ್ ಗಲಾಟೆಯಿಂದ ಸರ್ವೆ ಕಾರ್ಯ ಸ್ಥಗಿತ, ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ: ಎಸ್ಪಿ ಶ್ರೀನಿವಾಸ್ ಗೌಡ ಎಚ್ಚರಿಕೆಟೌನ್‌ಶಿಪ್ ಗಲಾಟೆಯಿಂದ ಸರ್ವೆ ಕಾರ್ಯ ಸ್ಥಗಿತ, ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ: ಎಸ್ಪಿ ಶ್ರೀನಿವಾಸ್ ಗೌಡ ಎಚ್ಚರಿಕೆ

Spread the loveರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಗಲಾಟೆ ಬಳಿಕ ಇಂದಿನ ಸರ್ವೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ