Breaking News
Home / new delhi / ಕ್ಷುದ್ರಗ್ರಹ ಕಂಡುಹಿಡಿದಿದ್ದಾರೆ 10ನೇ ಕ್ಲಾಸ್‌ ವಿದ್ಯಾರ್ಥಿನಿಯರು!

ಕ್ಷುದ್ರಗ್ರಹ ಕಂಡುಹಿಡಿದಿದ್ದಾರೆ 10ನೇ ಕ್ಲಾಸ್‌ ವಿದ್ಯಾರ್ಥಿನಿಯರು!

Spread the love

ನವದೆಹಲಿ: ವಿಜ್ಞಾನ ವಿಷಯದಲ್ಲಿ ಅತೀವ ಆಸಕ್ತಿ ಹೊಂದಿರುವ ಗುಜರಾತ್‌ನ ಸೂರತ್‌ನ ಇಬ್ಬರು ವಿದ್ಯಾರ್ಥಿನಿಯರು ಕ್ಷುದ್ರ ಗ್ರಹವೊಂದನ್ನು ಕಂಡುಹಿಡಿಯುವ ಮೂಲಕ ಇದೀಗ ಭಾರಿ ಶ್ಲಾಘನೆಗೆ ಒಳಗಾಗಿದ್ದಾರೆ.

ಈ ಕ್ಷುದ್ರ ಗ್ರಹವು ಇನ್ನು ಕೆಲವೇ ದಿನಗಳಲ್ಲಿ ಭೂಮಿಯ ಸಮೀಪದಿಂದ ಹಾದು ಹೋಗಲಿದೆ. ಅದನ್ನು ಈ ಬಾಲಕಿಯರು ಪತ್ತೆ ಹಚ್ಚಿದ್ದಾರೆ. ವೈದೇಹಿ ವೆಕರಿಯ ಸಂಜಯ್‌ಭಾಯಿ ಹಾಗೂ ರಾಧಿಕಾ ಲಖನಿ ಪ್ರಫ‌ುಲ್ಲಭಾಯಿ ಎಂಬ ಬಾಲಕಿಯರು ಈ ಸಾಧನೆ ಮಾಡಿದ್ದಾರೆ.

ಈ ರೀತಿಯ ಯಾವುದೇ ಸಂಶೋಧನೆ ಮಾಡಿದರೆ ಅದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಪ್ರಮಾಣೀಕರಿಸುವುದು ಅತಿ ಮುಖ್ಯ. ಆದರೆ ಈ ವಿದ್ಯಾರ್ಥಿನಿಯರು ಮಾಡಿರುವ ಸಂಶೋಧನೆಗೆ ನಾಸಾದಿಂದ ಕೂಡ ಮಾನ್ಯತೆ ಸಿಕ್ಕಿದೆ.

ಫ್ರಾನ್ಸ್‌ನಿಂದ ರಫೇಲ್‌ ವಿಮಾನದಲ್ಲಿ ಬರಲಿದ್ದಾರೆ ಕರುನಾಡ ವಿದ್ಯಾರ್ಥಿ

ತಮ್ಮ ಆಕಸ್ಮಿಕ ಸಂಶೋಧನೆಯಿಂದ ವಿಶ್ವಮಾನ್ಯತೆ ಸಿಕ್ಕಿರುವುದು ಖುದ್ದು ಈ ಬಾಲಕಿಯರಿಗೇ ನಂಬಲು ಆಗುತ್ತಿಲ್ಲವಂತೆ.

ಅಷ್ಟಕ್ಕೂ ಈ ವಿದ್ಯಾರ್ಥಿನಿಯರಿಗೆ ವಿಜ್ಞಾನ ಅದರಲ್ಲಿಯೂ ಬಾಹ್ಯಾಕಾಶದ ಬಗ್ಗೆ ಇಷ್ಟೊಂದು ಕುತೂಹಲ ಮೂಡಲು ಕಾರಣವಾದದ್ದು, ಶಾಲಾ ವಿದ್ಯಾರ್ಥಿಗಳಿಗಾಗಿ ಕೆಲ ತಿಂಗಳ ಹಿಂದೆ ಆಯೋಜಿಸಲಾಗಿದ್ದ ವಿಜ್ಞಾನ ಕಾರ್ಯಕ್ರಮ. ಈ ಎರಡು ತಿಂಗಳ ಕಾರ್ಯದಲ್ಲಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಭಾರತದ ‘ಸ್ಪೇಸ್‌ ಇಂಡಿಯಾ’, ಟೆಕ್ಸಾಸ್‌ನ ಹಾರ್ಡಿನ್‌ ಸೈಮನ್ಸ್‌ ವಿಶ್ವವಿದ್ಯಾಲಯ, ಅಂತಾರಾಷ್ಟ್ರೀಯ ಆಯಸ್ಟ್ರೋನಾಮಿಕಲ್‌ ರೀಸರ್ಚ್‌ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಆಸಕ್ತಿ ಕೆರಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹವಾಯ್‌ನಲ್ಲಿರುವ ಪ್ಯಾನ್‌ಸ್ಟಾರ್ಸ್‌ ಎಂಬ ಅತ್ಯಾಧುನಿಕ ಟೆಲಿಸ್ಕೋಪ್‌ ಬಳಸುವುದನ್ನು ಇಲ್ಲಿ ಕಲಿಸಿಕೊಡಲಾಗಿತ್ತು. ಈ ಬಗ್ಗೆ ಸಾಕಷ್ಟು ಕುತೂಹಲ ಹೊಂದಿದ್ದ ವಿದ್ಯಾರ್ಥಿನಿಯರು ಗ್ರಹವೊಂದು ಚಲಿಸುತ್ತಿರುವುದನ್ನು ಪತ್ತೆ ಹಚ್ಚುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ರೈಲು ಪ್ರಯಾಣಿಕನಿಗೆ ಮರುಜೀವ ನೀಡಿದ ಭದ್ರತಾ ಸಿಬ್ಬಂದಿ! ಸಿಸಿಟಿವಿಯಲ್ಲಿ ಸೆರೆ

ರೈಲು ಪ್ರಯಾಣಿಕನಿಗೆ ಮರುಜೀವ ನೀಡಿದ ಭದ್ರತಾ ಸಿಬ್ಬಂದಿ! ಸಿಸಿಟಿವಿಯಲ್ಲಿ ಸೆರೆ


Spread the love

About Laxminews 24x7

Check Also

ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳುವುದೂ ಅಪರಾಧವಾಗಿತ್ತು:ಮೋದಿ

Spread the love ಜೈಪುರ(ಮಾ.23): ಲೋಕಸಭೆ ಚುನಾವಣೆಗೂ ಮುನ್ನ ನಾಯಕರು ದೇಶಾದ್ಯಂತ ನಿರಂತರವಾಗಿ ಪ್ರವಾಸ ಮಾಡುತ್ತಿದ್ದರೆ, ಪ್ರಧಾನಿ ಮೋದಿ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ