Breaking News
Home / ಜಿಲ್ಲೆ / ಹುಬ್ಬಳ್ಳಿ:ಕೊರೊನಾ ಭೀತಿ-ಪೊಲೀಸ್ ಠಾಣೆಯೇ ಶಿಫ್ಟ್

ಹುಬ್ಬಳ್ಳಿ:ಕೊರೊನಾ ಭೀತಿ-ಪೊಲೀಸ್ ಠಾಣೆಯೇ ಶಿಫ್ಟ್

Spread the love

ಹುಬ್ಬಳ್ಳಿ: ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಲಾಗಿದೆ.

ನಗರದ ಮುಲ್ಲಾ ಮತ್ತು ಕರಾಡಿ ಓಣಿಯಲ್ಲಿ ಒಟ್ಟು 6 ಜನರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇದೀಗ ಮುಂಜಾಗ್ರತ ಕ್ರಮವಾಗಿ ಈ ಭಾಗದ ಕಮರಿಪೇಟೆಯ ಪೊಲೀಸ್ ಠಾಣೆಯನ್ನು ಚರ್ಚ್ ವೊಂದರ ಸಭಾಭವನಕ್ಕೆ ಸ್ಥಳಾಂತರಿಸಲಾಗಿದೆ. ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯು ಕಂಟೈನ್‍ಮೆಂಟ್ ಪ್ರದೇಶವಾಗಿದ್ದು, ಸಿಬ್ಬಂದಿ ಹಾಗೂ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಠಾಣೆಯನ್ನ ಶಿಫ್ಟ್ ಮಾಡಲಾಗಿದೆ.

ಮುಲ್ಲಾ ಮತ್ತು ಕರಾಡಿ ಓಣಿಯ ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ರವಾನಿಸುವಾಗ ಕರ್ತವ್ಯದಲ್ಲಿದ್ದ ಐವರು ಪೊಲೀಸರಿಗೆ ಕೊರೊನಾ ಭೀತಿ ಎದುರಾಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಐವರು ಪೊಲೀಸರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಹಾಗಾಗಿ ಜನರು ಕಮರಿಪೇಟೆಯ ಪೊಲೀಸ್ ಠಾಣೆಗೆ ಬರಲು ಸಾರ್ವಜನಿಕರು ಆತಂಕ ಎದುರಾಗಿತ್ತು.


Spread the love

About Laxminews 24x7

Check Also

ಚಾಲಕ ಸಿಬ್ಬಂದಿಗಳಿಗೆ ಸಂಸ್ಥೆಯ ಖಡಕ್ ಎಚ್ಚರಿಕೆ

Spread the loveಹುಬ್ಬಳ್ಳಿ, ಮೇ 24: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಚಾಲಕ ಚಾಲಕ ಕೊಡೆಯನ್ನು ಹಿಡಿದುಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ