Breaking News
Home / new delhi / 130.00 ಲಕ್ಷಗಳಡಿ ಇಂದು ಗೋಕಾಕ ನಗರದಲ್ಲಿ ಪೌರಕಾರ್ಮಿಕರ ವಸತಿ ಸಮುಚ್ಚಯ ಕಟ್ಟಡಗಳ ಉದ್ಘಾಟನೆ.

130.00 ಲಕ್ಷಗಳಡಿ ಇಂದು ಗೋಕಾಕ ನಗರದಲ್ಲಿ ಪೌರಕಾರ್ಮಿಕರ ವಸತಿ ಸಮುಚ್ಚಯ ಕಟ್ಟಡಗಳ ಉದ್ಘಾಟನೆ.

Spread the love

ಗೋಕಾಕ : ಇಲ್ಲಿಯ ನಗರಸಭೆ ಅನುದಾನದಡಿ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆ ಯಡಿಯಲ್ಲಿ ಅಂದಾಜು ರೂ.130.00 ಲಕ್ಷಗಳಡಿ G+2ಮಾದರಿಯಲ್ಲಿ ನಿರ್ಮಿಸಿದ ಪೌರಕಾರ್ಮಿಕರ ವಸತಿ ಸಮುಚ್ಛಯ ಕಟ್ಟಡಗಳನ್ನು ಜುಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಉದ್ಘಾಟಿಸಿದರು.

ರವಿವಾರದಂದು ನಗರದ ಮೆಳವಂಕಿ ರಸ್ತೆ, ಅಡಿಬಟ್ಟಿ ಕಾಲೋನಿಯ ನಾಕಾ ನಂಬರ್ 01ರಲ್ಲಿ ನಿರ್ಮಾಣವಾದ ಪೌರಕಾರ್ಮಿಕರ ವಸತಿ ಸಮುಚ್ಛಯ ಉದ್ಘಾಟಿಸಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪೌರ ಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಶಿವಾನಂದ ಹತ್ತಿ, ಬಸವರಾಜ ಆರೇನ್ನವರ,

ಸಿದ್ದಪ್ಪ ಹುಚ್ಚರಾಯಪ್ಪಗೋಳ, ಜಯಾನಂದ ಹುಣಶ್ಯಾಳ, ಬಿಜೆಪಿ ರಾಜ್ಯ ಮಹಿಳಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ತಾಪಂ ಸದಸ್ಯ ಕಿರಣ ಬೆಣಚಿನಮರಡಿ, ಜ್ಯೋತಿಭಾ ಸುಬಂಜಿ, ಲಕ್ಷ್ಮಣ ಖಡಕಬಾಂವಿ, ಬಸವರಾಜ ಹಿರೇಮಠ, ಶಿವಾನಂದ ಚೌಕಾಶಿ, ಯಲ್ಲಪ್ಪ ಹಳ್ಳೂರ, ಮುತ್ತುರಾಜ ಜಮಖಂಡಿ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಅಧಿಕಾರಿಗಳಾದ ವಿ ಎಮ್ ಸಾಲಿಮಠ, ವಿನೋದ ಪಾಟೀಲ, ಹಳ್ಳೂರ, ಗುತ್ತಿಗೇದಾರ ಬಸವರಾಜ ಗಂಗರೆಡ್ಡಿ ಸೇರಿದಂತೆ ಅನೇಕರು ಇದ್ದರು.


Spread the love

About Laxminews 24x7

Check Also

ರೇವಣ್ಣ ನಡವಳಿಕೆ ಸರಿಯಿಲ್ಲ, ಇಂಗ್ಲೆಂಡ್ ನಲ್ಲೂ ತಗಲಾಕೊಂಡಿದ್ದರು : ಮಾಜಿ ಸಂಸದ ಶಿವರಾಮೇಗೌಡ ಗಂಭೀರ ಆರೋಪ

Spread the loveಮಂಡ್ಯ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ಎಚ್ ಡಿ ರೇವಣ್ಣ ಸಂಕಷ್ಟದಲ್ಲಿದ್ದು ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ