Breaking News
Home / Uncategorized / ಗೋಕಾಕ: ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪಪ್ರಾಚಾರ್ಯ ಎಮ್ ಬಿ ಬಳಗಾರ ಮಾತನಾಡುತ್ತಿರುವದು.

ಗೋಕಾಕ: ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪಪ್ರಾಚಾರ್ಯ ಎಮ್ ಬಿ ಬಳಗಾರ ಮಾತನಾಡುತ್ತಿರುವದು.

Spread the love

ಗೋಕಾಕ: ಪ್ರತಿ ಮನೆ ಮನೆಯಲ್ಲಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವೆಲ್ಲ ಕಾರ್ಯಪ್ರವೃತ್ತರಾಗಬೇಕೆಂದು ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಎಮ್ ಬಿ ಬಳಗಾರ ಹೇಳಿದರು.
ಅವರು, ಮಂಗಳವಾರದಂದು ಸಂಜೆ ನಗರದ ಬಸವ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ ತಾಲೂಕ ಘಟಕ ಮತ್ತು ಭಾವಯಾನ ಮಹಿಳಾ ಸಾಹಿತ್ಯ ಮತ್ತು ಸಂಸ್ಕøತಿಕ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತಿಕರಣದ ಬದಲಾವಣೆಯಿಂದ ಕನ್ನಡ ಭಾಷೆಗೆ ಹಿನ್ನಡೆಯಾಗುತ್ತಿದ್ದು, ಇಂದಿನ ದಿನಗಳಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಿಸಬೇಕು. ಇಂದಿನ ಯುವಪೀಳಿಗೆಯಲ್ಲಿ ಮಾತೃ ಭಾಷೆಯ ಅರಿವು ಮೂಢಿಸಿ ಅದನ್ನು ಹೆಚ್ಚು ಬಳಸುವಂತೆ ಪ್ರೇರೆಪಿಸಬೇಕು. ಕನ್ನಡ ಭಾಷೆ ಮೊದಲ ಭಾಷೆಯಾಗಲಿ, ಅನ್ಯ ಭಾಷೆಗಳು ಸಂಪರ್ಕಭಾಷೆಗಳಾಗಲಿ ಎಂದ ಅವರು ಅಖಂಡ ಕರ್ನಾಟಕವನ್ನು ಬಲಿಷ್ಠಗೊಳಿಸಲು ನಾವೆಲ್ಲ ಸಂಕಲ್ಪ ಮಾಡಬೇಕು ಎಂದರು.
ರಾಜ್ಯೋತ್ಸವ ಅಂಗವಾಗಿ ಗೀತ ಗಾಯನ ಕಾರ್ಯಕ್ರಮ ಜರುಗಿತು.
ವೇದಿಕೆಯ ಮೇಲೆ ಕಸಾಪ ಅಧ್ಯಕ್ಷೆ ಭಾರತಿ ಮದಭಾಂವಿ, ಶರಣ ಸಾಹಿತ್ಯ ಪರಿಷತ ಅಧ್ಯಕ್ಷ ಮಹಾಂತೇಶ ತಾಂವಶಿ, ಭಾವಯಾನ ವೇದಿಕೆ ಗೌರವಾಧ್ಯಕ್ಷೆ ಪುಷ್ಪ ಮುರಗೋಡ, ಬಸವ ಸತ್ಸಂಗ ಸಮೀತಿಯ ಈರಣ್ಣ ಪರುಶೆಟ್ಟಿ ಇದ್ದರು.


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ