Breaking News

GPL T-20 ಕ್ರಿಕೆಟ್ ಪಂದ್ಯಾವಳಿಗೆ ಯುವ ನಾಯಕರಾದ ರಾಹುಲ್ ಜಾರಕಿಹೊಳಿ ಹಾಗೂ ಸರ್ವೋತ್ತಮ ಜಾರಕಿಹೊಳಿ ಚಾಲನೆ!

Spread the love

 

 

ಗೋಕಾಕ: ಗೋಕಾಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಹಾಗೂ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರ ಪ್ರಾಯೋಜಕತ್ವದಲ್ಲಿ ಗೋಕಾಕ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಗೋಕಾಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಲೇದರ್ ಬಾಲ್ ಪಂದ್ಯಾವಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಹಾಗೂ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಚಾಲನೆ ನೀಡಿದರು.ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂಟು ಕ್ರಿಕೆಟ್ ತಂಡಗಳು ಭಾಗವಹಿಸಿವೆ.

ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಮಾತನಾಡಿ ಗೋಕಾಕ ನಗರದಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಕುರಿತು ಬಹಳ ದಿನಗಳಿಂದ ಕ್ರಿಕೆಟ್ ಆಟಗಾರರ ಕನಸಾಗಿತ್ತು, ಈ ಪಂದ್ಯಾವಳಿ ಮೂಲಕ ಆಟಗಾರರಿಗೆ ಒಳ್ಳೆ ಒಳ್ಳೆಯ ಅವಕಾಶ ದೊರೆಯುತ್ತದೆ, ಗ್ರಾಮೀಣ ಕ್ರೀಡಾಪಟುಗಳಿ ತಮ್ಮ ಪ್ರತಿಭೆ ತೋರಿಸಲು ಒಂದು ಅದ್ಭುತ ವೇದಿಕೆಯಾಗಿದೆ. ತಂದೆ ಸತೀಶ್ ಜಾರಕಿಹೊಳಿ ಅವರು ಕೂಡ ಮೊದಲಿನಿಂದಲೂ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ನಾವು ಸಹಿತ ನಿಮ್ಮ ಜೊತೆಗೆ ಸದಾ ಇರುತ್ತೇವೆ ಎಂದು ಹೇಳಿದರು.

 

ನಂತರ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಪಂದ್ಯಾವಳಿಗೆ ರಾಹುಲ್ ಜಾರಕಿಹೊಳಿ ಅವರು ಸಹಕಾರ ನೀಡಿ ಯುವಕರಿಗೆ ಪ್ರೋತ್ಸಾಹ ನೀಡಿದ್ದಾರೆ. ಈ ಪ್ರೋತ್ಸಾಹವನ್ನು ಯುವಕರು ಸದುಪಯೋಗ ಪಡಿಸಿಕೊಳ್ಳಬೇಕು.ಗೋಕಾಕದಲ್ಲಿ ಸಾಕಷ್ಟು ಹಿರಿಯ ಆಟಗಾರರ ಹಾಗೂ ಮಾರ್ಗದರ್ಶಕರ ಸಲಹೆಗಳನ್ನು ಪಡೆದು ಗೋಕಾಕದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಮತ್ತಷ್ಟು ಒಳ್ಳೆಯ ಮಟ್ಟದಲ್ಲಿ ಬೇಳೆಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭೀಮರಾವ ಜೋಶಿ, ಪ್ರನಯ ಶೆಟ್ಟಿ, ರಮೇಶ್ ಪಟಗುಂದಿ, ಹಾಗೂ ಅನೇಕ ಹಿರಿಯ ಆಟಗಾರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಭ್ರಷ್ಟಾಚಾರದಲ್ಲಿ ರಾಜ್ಯ ನಂ.1, ಗ್ಯಾರಂಟಿಗಳಲ್ಲಿ ಕಾಲಹರಣ ಕಾಂಗ್ರೆಸ್ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

Spread the love ಭ್ರಷ್ಟಾಚಾರದಲ್ಲಿ ರಾಜ್ಯ ನಂ.1, ಗ್ಯಾರಂಟಿಗಳಲ್ಲಿ ಕಾಲಹರಣ ಕಾಂಗ್ರೆಸ್ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಗ್ಯಾರಂಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ