Home / ಜಿಲ್ಲೆ / ಧಾರವಾಡ / ಧಾರವಾಡದಲ್ಲಿ ದ್ವಿಶತಕ ಬಾರಿಸಿದ ಕೊರೊನಾ ಸಂಖ್ಯೆ…………..

ಧಾರವಾಡದಲ್ಲಿ ದ್ವಿಶತಕ ಬಾರಿಸಿದ ಕೊರೊನಾ ಸಂಖ್ಯೆ…………..

Spread the love

ಧಾರವಾಡ: ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರಿಗೆ ಕೊರೊನಾ ಧೃಡಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 200ಕ್ಕೆ ತಲುಪಿದೆ.

ನವಲಗುಂದ ತಾಲೂಕಿನ ಮೊರಬ ಗ್ರಾಮದ ಮೂವರಿಗೆ ಸೋಂಕು ತಗುಲಿದ್ದು, ಇದೇ ಗ್ರಾಮದಲ್ಲಿ ಈಗಾಗಲೇ 31 ಜನರಿಗೆ ಸೋಂಕು ತಗುಲಿದೆ. ಕಳೆದ ಜೂನ್ 14 ರಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾದ ದಿನವೇ ಮೃತಪಟ್ಟಿದ್ದ 65 ವರ್ಷದ ವೃದ್ಧ ರೋಗಿ ನಂ.7060 ಯಿಂದ ಇಂದು ಮೂವರಿಗೆ ಕೊರೊನಾ ಧೃಡಪಟ್ಟದೆ.

ರೋಗಿ ನಂ.9158, 72 ವರ್ಷದ ಮಹಿಳೆ, 43 ವರ್ಷದ ಪುರುಷ ರೋಗಿ ನಂ.9159, 30 ವರ್ಷದ ಪುರುಷ ರೋಗಿ ನಂ.9160 ಇವರಿಗೆ ಮೃತ ವೃದ್ಧನಿಂದ ಸೋಂಕು ತಗುಲಿದೆ. ಅಲ್ಲದೆ ಧಾರವಾಡ ವಿಜಯನಗರದ ಮಹಿಳೆಗೆ ಐಎಲ್‍ಐದಿಂದ ರೋಗಿ ನಂ.9161 ಸೋಂಕು ಇದೆ ಎಂದು ತಿಳಿದು ಬಂದಿದ್ದು, ಸೋಂಕಿತೆಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಮೃತ ವೃದ್ಧನಿಂದ ಸೋಂಕು ತಗುಲಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.


Spread the love

About Laxminews 24x7

Check Also

ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ನಾಟಕವನ್ನು ಪ್ರದರ್ಶಿಸುವ ಬೃಹತ್ ಯೋಜನೆಯಲ್ಲಿ ರಂಗಾಯಣ ತಂಡ ಕೆಲಸ ಮಾಡುತ್ತಿದೆ.

Spread the loveಧಾರವಾಡ, ಆಗಸ್ಟ್‌, 12: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಹಿನ್ನಡೆ ಅನುಭವಿಸಿದ ಧಾರವಾಡ ರಂಗಾಯಣ ಮತ್ತೆ ಕಾರ್ಯಪ್ರವೃತ್ತವಾಗಿದೆ. 18ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ