Breaking News

ಗೋವಿಗೆ ರಾಷ್ಟ್ರಮಾತೆ ಸ್ಥಾನಮಾನ ನೀಡಲು ಆಗ್ರಹ

Spread the love

ಬೆಳಗಾವಿ: ಗೋವನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸಲು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಲಾಯಿತು.
ಚನ್ನಮ್ಮ ವೃತ್ತದಿಂದ ಗೋವು ಸಮೇತ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಆಗಮಿಸಿ ಗೋಮಾತೆ ಅಭಿಮಾನದ ಪ್ರಯುಕ್ತ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಸಂಗ್ರಹಿಸಿದ ಒಟ್ಟು 1.80 ಲಕ್ಷ ಸಹಿ ಸಂಗ್ರಹದ ಪ್ರತಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.
ಸವದತ್ತಿ ತಾಲೂಕು ಶಿಂದೋಗಿ ನಿತ್ಯಾನಂದ ಆಶ್ರಮದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಈಗಾಗಲೇ ಒಂದು ಹಂತದ ಅಭಿಯಾನ ಪೂರ್ಣಗೊಂಡಿದೆ. ದೇಶವ್ಯಾಪ್ತಿಯಲ್ಲಿ ಎರಡನೇ ಹಂತದ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಗೋ ಮಾತೆ ಅತ್ಯಂತ ಶ್ರೇಷ್ಠ. ಗೋವು ಉಳಿದರೆ ಮಾತ್ರ ಮಾನವಕುಲ ಉಳಿಯುತ್ತದೆ.
ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಹೀಗಾಗಿ, ರಾಷ್ಟ್ರಮಾತೆ ಎಂದು ಘೋಷಿಸಿ, ಸಂರಕ್ಷಿಸಬೇಕು. ಮೂರನೇ ಹಂತವಾಗಿ 2027ರ ಆಗಸ್ಟ್‌ನಲ್ಲಿ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದೇವೆ ಎಂದರು. ನಿಲೇಶ, ಮಾರುತಿ ಕೋಳಿ, ಆನಂದ ನವಲೆ, ಆನಂದ ಶೆಟ್ಟಿ, ಸುರೇಂದ್ರ ಭಂಡಾರಿ, ಪ್ರಕಾಶ ಲಾಡವ್, ಸೂರಜ್, ಮುಕುಂದ ಅರುಣಕುಮಾರ, ಜಯಶಂಕರ ವಣ್ಣೂರ, ರಾಜು ಬಾದಾಮಿ, ಚಿದಂಬರ ಕನಕಗಿರಿ ಹಾಗೂ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದ್ದರು.

Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ