Breaking News

ಕೊರೊನಾ ಸೋಂಕು ತಗುಲಿಲ್ಲ ಅಂತಾ ಗೆಳೆಯರ ಜತೆ ಸೇರಿ ಎಣ್ಣೆ  ಪಾರ್ಟಿ ಮಾಡಿದ್ದು, ಇದೀಗ ಆತನಿಗೆ ಕೊರೊನಾ ಸೋಂಕು 

Spread the love

ಬೆಳಗಾವಿ: ಮುಂಬೈನಿಂದ ವಾಪಸ್ ಆಗಿದ್ದ ವ್ಯಕ್ತಿ ಕ್ವಾರಂಟೈನ್ ನಿಂದ ಬಿಡುಗಡೆಯಾಗಿ ತನಗೆ ಕೊರೊನಾ ಸೋಂಕು ತಗುಲಿಲ್ಲ ಅಂತಾ ಗೆಳೆಯರ ಜತೆ ಸೇರಿ ಎಣ್ಣೆ  ಪಾರ್ಟಿ ಮಾಡಿದ್ದು, ಇದೀಗ ಆತನಿಗೆ ಕೊರೊನಾ ಸೋಂಕು  ಧೃಢಪಟ್ಟಿದೆ.

ಹುಕ್ಕೇರಿ ತಾಲೂಕಿನ ಬಿದಿರೆವಾಡಿ ಗ್ರಾಮದ 35 ವರ್ಷ ವ್ಯಕ್ತಿ ಮುಂಬೈನಿಂದ ವಾಪಸ್ ಆಗಿದ್ದ. ಆತನನ್ನ
ಆಸ್ತಿಹಾಳ್ ಹೈಸ್ಕೂಲ್​ನಲ್ಲಿ ಕ್ವಾರಂಟೀನ್​ ಮಾಡಲಾಗಿತ್ತು.  ಸರ್ಕಾರ ಇತ್ತೀಚಿಗೆ ಕ್ವಾರಂಟೈನ್ ಅವಧಿಯನ್ನು 14 ದಿನದ ಬದಲು 7 ದಿನಕ್ಕೆ ಕಡಿತ ಮಾಡಿ ಆದೇಶ ಹೊರಡಿಸಿತ್ತು.

ಈ ಹಿನ್ನೆಲೆ ವರದಿ ಬರುವ ಮುನ್ನವೇ ಈತನನ್ನು ಸೇರಿ ಹಲವರನ್ನು ಬಿಡುಗಡೆ ಮಾಡಲಾಗಿತ್ತು.  ತನಗೆ ಕೊರೊನಾ ಇಲ್ಲ ಆತ ಸಖತ್ ಖುಷಿ ಪಟ್ಟು ಸ್ನೇಹಿತರನ್ನು ಮನೆಗೆ ಕರೆಸಿ ಎಣ್ಣೆ ಪಾರ್ಟಿ ಮಾಡಿದ್ದ. ನಿನ್ನೆ ಸಂಜೆ ಬಿಡುಗಡೆಯಾದ ಕೊರೊನಾ ಪ್ರಯೋಗಾಲಯದ ವರದಿಯಲ್ಲಿ ಪಾರ್ಟಿ ನೀಡಿದ ವ್ಯಕ್ತಿಗೆ ಕೊರೊನಾ ದೃಢ ಪಟ್ಟಿದೆ, ಇದರಿಂದ ಪಾರ್ಟಿಯಲ್ಲಿ ಪಾಲ್ಗೊಂಡ ಎಲ್ಲರೂ ಶಾಕ್ ಆಗಿದ್ದಾರೆ.

ಈ ಘಟನೆಯಿಂದ ಇಡೀ ಗ್ರಾಮಕ್ಕೆ ಗ್ರಾಮವೇ ಆತಂಕ ನಿರ್ಮಾಣವಾಗಿದೆ. ಸೋಂಕಿತ  ವ್ಯಕ್ತಿಯ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸುಮಾರು 13 ರಿಂದ 14ಜನರಿಗೆ ಈಗ ಕೊರೊನಾ ಆತಂಕ ಶುರುವಾಗಿದೆ. ಸದ್ಯ ಪಾರ್ಟಿಯಲ್ಲಿ ಭಾಗಿಯಾದವರನ್ನು ಗುರ್ತಿಸಿ ಅವರೆಲ್ಲರನ್ನು ಕ್ವಾರಂಟೀನ್​ ಮಾಡಲು ಯಮಕನಮರಡಿ ಠಾಣೆ ಪೋಲಿಸರು ನಿರ್ಧರಿಸಿದ್ದಾರೆ. ಇದಕ್ಕಾಗಿ ಪಾರ್ಟಿ ಮಾಡಿದವರನ್ನು ಗುರ್ತಿಸುವ ಕೆಲಸ ಶುರು ಮಾಡಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆಯೇ ನಿನ್ನೆ ಸಂಜೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಗ್ರಾಮಕ್ಕೆ ಭೇಟಿ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲ ಪಾರ್ಟಿ ಮಾಡಿದ ಎಲ್ಲರನ್ನೂ ಕ್ವಾರಂಟೀನ್​ ಮಾಡುವುದರೊಂದಿಗೆ, ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಗುರ್ತಿಸುವಂತೆ ಸೂಚಿಸಿದ್ದಾರೆ.


Spread the love

About Laxminews 24x7

Check Also

ಭೂಗತ ಪಾತಕಿ ಬನ್ನಂಜೆ ರಾಜಾ ಸಹಚರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.

Spread the loveಅಂಕೋಲಾದಲ್ಲಿ ಉದ್ಯಮಿ ಆರ್. ಎನ್. ನಾಯಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ