Breaking News
Home / new delhi / ವಿದ್ಯಾರ್ಥಿನಿಯ ಕತ್ತು ಕೊಯ್ದು ಕೊಂದ ಬಗ್ನ ಪ್ರೇಮಿ

ವಿದ್ಯಾರ್ಥಿನಿಯ ಕತ್ತು ಕೊಯ್ದು ಕೊಂದ ಬಗ್ನ ಪ್ರೇಮಿ

Spread the love

ಅಮರಾವತಿ, ಡಿ .6- ಬಗ್ನ ಪ್ರೇಮಿಯೊಬ್ಬ ದಂತ ವೈದ್ಯಕೀಯ ವಿದ್ಯಾರ್ಥಿನಿಯ ಕತ್ತು ಕೂಯ್ದು ಕೊಲೆ ಮಾಡಿರುವ ಘಟನೆ ಗುಂಟೂರು ಜಿಲ್ಲೆಯ ತಕ್ಕೆಲ್ಲಪ್ಡು ನಗರದಲ್ಲಿ ಕಳೆದ ರಾತ್ರಿ ನಡೆದಿದೆ.

ವಿಜಯವಾಡದಲ್ಲಿ ಕಾಲೇಜಿನಲ್ಲಿ ಬಿಡಿಎಸ್ ಮೂರನೇ ವರ್ಷದ ವಿದ್ಯಾರ್ಥಿನಿ ತಪಸ್ವಿ (20) ಕೊಲೆಯಾದ ಯುವತಿ.

 

ಬಗ್ನ ಪ್ರೇಮಿನ್ನು ಸಾಫ್ಟ್‍ವೇರ್ ಇಂಜಿನಿಯರ್ ಜ್ಞಾನೇಶ್ವರ್ ಎಂದು ಪೊಲೀಸರು ತಿಳಿಸಿದಾರೆ.

 

ಕಳೆದ 2 ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಜ್ಞಾನೇಶ್ವರ್ ಮತ್ತು ತಪಸ್ವಿ ಸಂಪರ್ಕಕ್ಕೆ ಬಂದಿದ್ದರು ನಂತರ ಸ್ನೇಹ ಬೆಳೆದು ಪ್ರೀತಿ ಮೂಡಿತ್ತು ಆದರೆ, ಕಳೆದ ಕೆಲವು ತಿಂಗಳುಗಳಿಂದ ಅವರ ನಡುವೆ ಭಿನ್ನಾಭಿಪ್ರಾಯಗಳು ಬೆಳೆದಿತ್ತು ಇತ್ತೀಚೆಗೆ ಮತ್ತೆ ಮನವೊಲಿಕೆಗೆ ಜ್ಞಾನೇಶ್ವರ್ ಮುಂದಾಗಿದ್ದ ಆದರೆ ಆಕೆ ನಿರಾಕರಿಸಿದ್ದಳು ಆದರೂ ಆತ ಒಪ್ಪದೆ ಕಿರುಕುಳ ನೀಡಲು ಮುಂದಾದ ಕಳೆದ 2 ತಿಂಗಳ ಹಿಂದೆ ಆತನ ವಿರುದ್ಧ ವಿಜಯವಾಡದಲ್ಲಿ ಪೊಲೀಸರಿಗೆ ದೂರು ನೀಡಿದ್ದಳು.

 

ನಂತರ ಪೊಲೀಸರು ಜ್ಞಾನೇಶ್ವರ್ ಕರೆಸಿ ಬುದ್ದಿವಾದ ಹೇಳಿ ಆಕೆಯ ತಂಟೆಗೆ ಹೋಗದಂತೆ ಆತನಿಗೆ ಎಚ್ಚರಿಕೆ ನೀಡಿದ್ದರು 1ತಿಂಗಳ ಹಿಂದೆ ವಿದ್ಯಾರ್ಥಿನಿಯು ತನ್ನ ಸ್ನೇಹಿತೆಯೊಂದಿಗೆ ಗುಂಟೂರು ಸಮೀಪದ ತಕ್ಕೆಲ್ಲಪ್ಡುಗೆ ತೆರಳಿ ಅಲ್ಲಿ ವಾಸವಿದ್ದಳು.

 

ಬುದ್ದಿ ಕಲಿಯದ ಜ್ಞಾನೇಶ್ವರ್ ಆಕೆ ಇರುವ ಸ್ಥಳವನ್ನು ತಿಳಿದ ಕಳೆದ ರಾತ್ರಿ ತಕ್ಕೆಲ್ಲಪಾಡುವಿಗೆ ತೆರಳಿ ಆಕೆಯೊಂದಿಗೆ ಮಾತನಾಡಲು ಯತ್ನಿಸಿದ್ದಾರೆ ಈ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

 

ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಜ್ಞಾನೇಶ್ವರ್ ವೈದ್ಯರು ಬಲಸುವ ಸರ್ಜಿಕಲ್ ಚಾಕುವಿನಿಂದ ತಪಸ್ವಿ ಅವರ ಕತ್ತು ಸೀಳಿದ್ದಾನೆ ಇದನ್ನು ಕಂಡ ಸ್ನೇಹಿತೆ ಭಯಗೊಂಡ ನೆರೆಹೊರೆಯವರ ಸಹಾಯಕ್ಕೆ ಕೂಗಿಕೊಂಡರು

ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಬಾಗಿಲು ಒಡೆದು ಒಳನುಗ್ಗಿ ಆತನನ್ನು ಹಿಡಿದು ಕೋಣೆ ಎಳೆದೊಯ್ದು ಬೀಗ ಹಾಕಿದ್ದರು. ಅಲ್ಲಿ ಆತ ಕೈ ಕೊಯ್ದುಕೊಂಡಿದ್ದಾನೆ.

 

ಇದೇ ವೇಳೆ ರಕ್ತಸ್ರಾವದಿಂದ ನರಳುತ್ತಿದ್ದ ಯುವತಿಯನ್ನು ಗುಂಟೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಪೆದಕಕಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ