Breaking News

ಮನೆ ಕಳ್ಳನನ್ನು ಬಂಧಿಸಿದ ಹುಕ್ಕೇರಿ ಪೊಲೀಸರು

Spread the love

ಹುಕ್ಕೇರಿ – ಐದು ದಿನಗಳ ಹಿಂದೆ ಹುಕ್ಕೇರಿ ಪಟ್ಟಣದ ವಿವಿಧ ಗಲ್ಲಿಗಳಲ್ಲಿ 6 ಮನೆಗಳ ಸರಣಿ ಕಳ್ಳತನ ಆಗಿ ಸುಮಾರು 48,000/-ರೂ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣ ಹಾಗೂ 5000/- ರೂ ನಗದು ಕಳ್ಳತನ ಆಗಿತ್ತು.

ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ (ಅಪರಾಧ ಸಂಖ್ಯೆ: 116/2022, ಕಲಂ 454, 457, 380, 51 ಐ.ಪಿ.ಸಿ) ಪ್ರಕರಣ ದಾಖಲಾಗಿತ್ತು.

ಹುಕ್ಕೇರಿ ತಾಲೂಕಿನ ಸಂಕೇಶ್ವರ, ಯಮಕನಮರಡಿ ಮತ್ತು ಹುಕ್ಕೇರಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ ಎಂದು ಪೊಲೀಸರ ವಿರುದ್ಧ ದೂರು ಕೇಳಿ ಬಂದಿತ್ತು. ಮನೆ ಸರಣಿ ಕಳ್ಳತನವನ್ನು ಗಂಭೀರವಾಗಿ ಪರಿಗಣಿಸಿದ ಹುಕ್ಕೇರಿ ಪೊಲೀಸರು ಅಪರಾಧ ನಡೆದ ನಾಲ್ವೇ ದಿನಗಳಲ್ಲಿ ಕಳ್ಳನನ್ನು ಬಂಧಿಸಿದ್ದಾರೆ.

ಆತನಿಂದ:

1) ಬಂಗಾರದ ಬೋರಮಾಳ ಒಂದು

2) ಬಂಗಾರದ ಮಂಗಳಸೂತ್ರ, ಒಂದು

3) ಬಂಗಾರದ ಕಿವಿಯೊಲೆ ಒಂದು ಜೊತೆ

4) ಬೆಳ್ಳಿಯ ಕಾಲಚೈನು ಒಂದು ಜೊತೆ

5) ನಗದು 5000/-ರೂ

ಒಟ್ಟು 57000/-ರೂ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಎಮ್. ಎಮ್ ತಹಶಿಲ್ದಾರ, ಪಿ.ಐ ಹುಕ್ಕೇರಿ, ಎಸ್.ಪಿ ಉನ್ನದ ಪಿ.ಎಸ್.ಐ ಮತ್ತು ಎಲ್. ಎಲ್. ಪತ್ತೆನ್ನವರ ಪಿ.ಎಸ್.ಐ, ಎ.ಎಸ್.ಸನದಿ ಎ.ಎಸ್.ಐ ಹಾಗೂ ಸಿಬ್ಬಂದಿಗಳಾದ ಸಿ, ಡಿ ಪಾಟೀಲ, ಆರ್. ಎಸ್. ಡಂಗ, ಮಂಜುನಾಥ ಎಸ್.ಕಲ್ಲೂರ , ಯು. ವಾಯ್ ಅರಭಾಂವಿ , ಎ. ಎಲ್ ನಾಯಕ, ಎಮ್ ಕೆ ಅತ್ತಾರ್ ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ