ಬೆಂಗಳೂರು: ರಾಜ್ಯದಲ್ಲಿ ಇಂದು 9 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದೆ.
ಇಂದು ಬೆಳಗ್ಗೆ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ಬೀದರ್ 1, ತುಮಕೂರಿನಲ್ಲಿ 2, ಚಿಕ್ಕಬಳ್ಳಾಪುರದಲ್ಲಿ 1, ವಿಜಯಪುರದಲ್ಲಿ 2, ಬೆಳಗಾವಿಯಲ್ಲಿ 1, ಬಾಗಲಕೋಟೆಯ ಜಮಖಂಡಿಯಲ್ಲಿ 1 ಹಾಗೂ ಬೆಂಗಳೂರು ನಗರದಲ್ಲಿ 1 ಪ್ರಕರಣಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಬೆಂಗಳೂರಿನಲ್ಲಿ ರೋಗಿ ನಂಬರ್ 557, 63ವರ್ಷದ ವೃದ್ಧ ಹಾಗೂ ಬೀದರ್ ನಲ್ಲಿ 83 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಕೊರೊನಾ ವೈರಸ್ ನಿಂದ 25 ಮಂದಿ ಸಾವನ್ನಪ್ಪಿದ್ದು, 255 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸೋಂಕಿತರ ವಿವರ:
1. ರೋಗಿ 590 – 82 ವರ್ಷದ ವೃದ್ಧ, ಬೀದರ್ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಸೋಂಕು ಬಂದಿದೆ.
2. ರೋಗಿ 591 – 40 ವರ್ಷದ ಪುರುಷ, ತುಮಕೂರು ನಿವಾಸಿ, ರೋಗಿ 535, 553ರ ಸಂಪರ್ಕ
3. ರೋಗಿ 592 – 29 ವರ್ಷದ ಮಹಿಳೆ, ತುಮಕೂರು ನಿವಾಸಿ, ರೋಗಿ 535, 553ರ ಸಂಪರ್ಕ
4. ರೋಗಿ 593 – 54 ವರ್ಷದ ಪುರುಷ, ಚಿಕ್ಕಬಳ್ಳಾಪುರ ನಿವಾಸಿ, ರೋಗಿ 250ರ ದ್ವಿತೀಯ ಸಂಪರ್ಕ
5. ರೋಗಿ 594 – 22 ವರ್ಷದ ಯುವಕ, ವಿಜಯಪುರ ನಿವಾಸಿ, ರೋಗಿ 221ರ ಸಂಪರ್ಕ
6. ರೋಗಿ 595 – 45 ವರ್ಷದ ಪುರುಷ, ವಿಜಯಪುರ ನಿವಾಸಿ, ರೋಗಿ 221ರ ಸಂಪರ್ಕ
7. ರೋಗಿ 596– 23 ವರ್ಷದ ಯುವಕ, ಬೆಳಗಾವಿ ನಿವಾಸಿ, ರೋಗಿ 128ರ ದ್ವಿತೀಯ ಸಂಪರ್ಕ
8. ರೋಗಿ 597– 45 ವರ್ಷದ ಮಹಿಳೆ, ಬಾಗಲಕೋಟೆಯ ಜಮಖಂಡಿ ನಿವಾಸಿ, ರೋಗಿ 381ರ ಸಂಪರ್ಕ
9. ರೋಗಿ 598 – 32 ವರ್ಷದ ಮಹಿಳೆ, ಬೆಂಗಳೂರು ನಿವಾಸಿ, ರೋಗಿ 444ರ ದ್ವಿತೀಯ ಸಂಪರ್ಕ