Breaking News
Home / ಜಿಲ್ಲೆ / ‘ನೀವು ಬೀದಿಗೆ ಬಂದರೆ ನಾನು ನಿಮ್ಮ ಜೊತೆ ಬರುತ್ತೇನೆ’ : ಕೊರೋನಾ ಜಾಗೃತಿಗೆ ಪೊಲೀಸರ ವಿಭಿನ್ನ ಪ್ರಯತ್ನ

‘ನೀವು ಬೀದಿಗೆ ಬಂದರೆ ನಾನು ನಿಮ್ಮ ಜೊತೆ ಬರುತ್ತೇನೆ’ : ಕೊರೋನಾ ಜಾಗೃತಿಗೆ ಪೊಲೀಸರ ವಿಭಿನ್ನ ಪ್ರಯತ್ನ

Spread the love

ತುಮಕೂರು : ಭಾರತ ಲಾಕ್ಡೌನ್ ಆಗಿ ಇಂದಿಗೆ ಹೇಳು ದಿನ ಕಳೆಯುತ್ತಿದ್ದ ಆದರೆ ಜನರು ಮಾತ್ರ ಸರ್ಕಾರಗಳ ಆದೇಶವನ್ನು ಧಿಕ್ಕರಿಸಿ ಬೈಕುಗಳಲ್ಲಿ ಕಾರುಗಳಲ್ಲಿ ಮನಸೋಇಚ್ಛೆ ಓಡುತ್ತಿರುವುದು ಎಷ್ಟೇ ಮನವಿ ಮಾಡಿದರೂ ಜನರು ಮಾತ್ರ ಓಡಾಡುತ್ತಿರುವುದನ್ನು ಬಿಡುತ್ತಿಲ್ಲ ಇದರಿಂದ ಬೇಸತ್ತ ಅಧಿಕಾರಿಗಳು ಜನರಿಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಹಾಗೂ ಸರ್ಕಲ್ಗಳಲ್ಲಿ ಕೊರೊನಾ ವೈರಸ್ ಬಗ್ಗೆ ಪೋಲಿಸ್ ಅದಿಕಾರಿಗಳು ಸಿಬ್ಬಂದಿಗಳು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಬರೆಹಗಳನ್ನು ಬರೆಸುವ ಮೂಲಕ ಜನರ ಗಮನ ಸೆಳೆದರು .

ತುಮಕೂರು ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಕ್ಯಾಸಂದ್ರ ಕಳ್ಳಂಬೆಳ್ಳ ಶಿರಾ ಸೇರಿದಂತೆ ಹಲವು ಕಡೆ ರಸ್ತೆಗಳಲ್ಲಿ ಹಾಗೂ ಸರ್ಕಲ್ ಗಳಲ್ಲಿ ಕೊರೊನಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡರೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ವಿನೂತನವಾಗಿ ಚೇಳೂರಿನ ಸರ್ಕಲ್ನಲ್ಲಿ ಜನರೇ ನೀವು ಬೀದಿಗೆ ಬರಬೇಡಿ ನೀವು ಬಂದರೆ ನಾನು ನಿಮ್ಮ ಜೊತೆಗೆ ಮನೆಗೆ ಬರುತ್ತೇನೆ ಎಚ್ಚರಿಕೆ ಎಚ್ಚರಿಕೆ ದಯವಿಟ್ಟು ನೀವ್ಯಾರು ಮನೆಬಿಟ್ಟು ಬೀದಿಗೆ ಬರಬೇಡಿಬಂದರೆ ನಿಮಗೆ ಅಪಾಯ ಕಟ್ಟಿಟ್ಟಬುತ್ತಿ.

ನೀವು ನಿಮ್ಮ ಮನೆಯವರ ಸುರಕ್ಷತೆಗಾಗಿ ಮನೆಯಲ್ಲಿ ಇರಿ ನಿಮ್ಮ ಕುಟುಂಬದವರ ರಕ್ಷಣೆಗೆ ಒತ್ತು ಕೊಡಿ ಭಾರತದಲ್ಲಿ ಲಾಕ್ಡೌನ್ ಇದೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಸಚಿವರು ಸೇರಿದಂತೆ ಕರ್ನಾಟಕದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರು ಸೇರಿದಂತೆ ಸರ್ಕಾರ ಹಾಗೂ ಅಧಿಕಾರಿಗಳು ನಿರಂತರವಾಗಿ ಕೊರೊನಾ ವೈರಸ್ ರೋಗದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಇದರಿಂದ ಜನರನ್ನು ರಕ್ಷಿಸುವ ಸಲುವಾಗಿ ಭಾರತವನ್ನ ಲಾಕ್ ಡೌನ್ ಘೋಷಣೆ ಮಾಡಿದೆ ಜನರು ಸಹಕರಿಸಬೇಕು ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದರೆ ಮಹಾಮಾರಿ ಕೊರೊನಾ ವೈರಸ್ ರೋಗವನ್ನು ನಿಯಂತ್ರಿಸಲು ಸಾಧ್ಯ ವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೋನಾ ವಂಶಿಕೃಷ್ಣ ಅವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಉದ್ದೇಶ್ ಹಾಗೂ ಡಿ ವೈ ಎಸ್ಪಿ ಕುಮಾರಪ್ಪ ಅವರ ಸಲಹೆ ಮೇರೆಗೆ ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಚೇಳೂರು ಬಸ್ ನಿಲ್ದಾಣದಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಇಲ್ಲಿನ ಪೋಲಿಸರ ಕಾಳಜಿ ಹಾಗೂ ಜನರನ್ನು ಮೊನೆಯಿಂದ ಹೊರಗೆ ಬಾರದಿರಲು ಕೈಗೊಂಡ ಕ್ರಮ ಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತುಮಕೂರು ನಗರದಲ್ಲಿ ಇನ್ನೂರಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೋನ ವಂಶಿ ಕೃಷ್ಣ ಅವರ ಆದೇಶದ ಮೇರೆಗೆ ಭಾರತ ಲಾಕ್ ಡೌನ್ ಇದ್ದರು ಅನಗತ್ಯವಾಗಿ ಮನೆಯಿಂದ ಹೊರಗೆ ಬಂದು ಸುತ್ತಾಡುತ್ತಿದ್ದ ವರ ಬೈಕ್ ಗಳನ್ನು ತುಮಕೂರು ನಗರ ವೃತ್ತದಲ್ಲಿ ಇನ್ನೂರಕ್ಕೂ ಹೆಚ್ಚು ಬೈಕ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತುಮಕೂರು ನಗರದ ಡಿವೈಎಸ್ಪಿ ತಿಪ್ಪೇಸ್ವಾಮಿ, ವೃತ್ತನಿರೀಕ್ಷಕ ನವೀನ್ ಇವರ ಮಾರ್ಗದರ್ಶನದಲ್ಲಿ ಸಂಚಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಂಗಳಮ್ಮ, ಸಹಾಯಕ ಸಬ್ ಇನ್ಸ್ಪೆಕ್ಟರ್ ಗಳಾದ ಬಸವರಾಜು, ದೇವೇಗೌಡ, ಸತೀಶ್,ಲೋಕೇಶ್, ಸೇರಿದಂತೆ ಇತರರು ಒಟ್ಟು 14 ಕಡೆ ಇರುವ ಚೆಕ್ ಪೋಸ್ಟ್ ಗಳಲ್ಲಿ ಕಳೆದ ಎರಡು ದಿನಗಳಿಂದ ಒಟ್ಟು 210 ಕ್ಕೂ ಹೆಚ್ಚು ಬೈಕ್ ಗಳನ್ನು ಸೀಜ್ ಮಾಡಲಾಗಿದೆ ಪೋಲಿಸರು ಹಲವು ಬಾರಿ ಸಾರ್ವಜನಿಕರಿಗೆ ದಯವಿಟ್ಟು ಮನೆಯಲ್ಲಿ ಇರಿ ಮನೆಯಿಂದ ಹೂರಗೆ ಬರಬೇಡಿ ಏನು ಬೇಕು ಹೇಳಿ ನಾವೇ ತಂದು ಕೊಡುತ್ತೇವೆ ಎಂದು ಮನವರಿಕೆ ಮಾಡಿಕೊಟ್ಟರು ಅದನ್ನು ಲೆಕ್ಕಿಸದೆ ಮನೆಯಿಂದ ಹೊರಗೆ ಬಂದು ಅನಗತ್ಯವಾಗಿ ಒಡಾಡುತ್ತಿದ್ದವರ ಬೈಕ್ ಹಿಡಿದು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸಂಚಾರಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಸತೀಶ್ ಹಾಗೂ ವೃದ್ಧನ ನಡುವೆ ಘರ್ಷಣೆ
ನೆನ್ನೆ ಮಧ್ಯಾಹ್ನ ಉಪ್ಪಾರ ಹಳ್ಳಿಯ ಯುವಕನೂಬ್ಬ ಮೊಪೆಡ್ ಬೈಕ್ ನಲ್ಲಿ ಬಂದು ನಗರದ ಟೌನ್ ಹಾಲ್ ವೃತದಲ್ಲಿ ವಾಹನಗಳ ತಪಾಸಣೆ ವೇಳೆ ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ ಅಗ ಸಂಚಾರಿ ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ಸತೀಶ್ ವಾಹನವನ್ನು ಹಿಡಿದು ದಂಡ ವಿಧಿಸಿದ್ದಾರೆ.ಇದರಿಂದ ಯುವಕ ತನ್ನ ಮನೆಗೆ ಹೋಗಿ ತನ್ನ ತಂದೆಯನ್ನು ಕಳೆದುಕೊಂಡು ಬಂದಿದ್ದ ರಾಜಣ್ಣ ಹಾಗೂ ಸಂಚಾರಿ ಪೋಲಿಸ್ ನಡುವ ಜಗಳ ಮಾಡಿದ್ದು ವೃದ್ದ ರಾಜಣ್ಣ ನಾನು ಯಾರು ಗೂತ್ತೇ ನಾನು ನಿನ್ನನ್ನೂ ಇಲ್ಲಿಂದ ಎತ್ತಂಗಡಿ ಮಾಡಿಸುತ್ತೇನೆ ಎಂದು ಇಬ್ಬರ ನಡುವೆ ಮಾತಿನ ಚಕ ಮುಕಿ ತಾರಕಕ್ಕೇರಿದೆ ಈ ಸಂದರ್ಭದಲ್ಲಿ ರಾಜಣ್ಣ ಹಾಗೂ ಸತೀಶ್ ನಡುವೆ ಕೈ ಕೈ ಮಿಲಾಯಿಸುವಾಗ ರಾಜಣ್ಣ ಆವರ ಮೂಗಿಗೆ ಪೆಟ್ಟು ಬಿದ್ದು ರಕ್ತ ಬಂದಿದ್ದು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಲಾಗಿತ್ತು.ಇದರ ಸಂಬಂಧಪಟ್ಟಂತೆ ಎಸ್ಪಿಯವರು ಇಲ್ಲಿನ ವೃತ್ತ ನಿರೀಕ್ಷರಾದ ನವೀನ್ ಅವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

# ತುಮಕೂರು ಗ್ರಾಮಾಂತರ ವಾಹನಗಳ ಸಂಚಾರಕ್ಕೆ ಬ್ರೇಕ್
ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ,ಕೋರಾ ಪೋಲಿಸ್ ಠಾಣೆ ವ್ಯಾಪ್ತಿ,ಬೆಳ್ಳಾವಿ,ಯಲ್ಲಿ ಇಲ್ಲಿನ ವೃತ್ತ ನಿರೀಕ್ಷಕರಾದ ರಾಮಕೃಷ್ಣ, ಸಬ್ ಇನ್ಸ್ಪೆಕ್ಟರ್, ಲಕ್ಷ್ಮಯ್ಯ, ಹರೀಶ್, ಲಿಂಗೇಗೌಡ, ಇವರುಗಳು ರಾಷ್ಟ್ರೀಯ ಹೆದ್ದಾರಿ 48 ರಸ್ತೆ ಸೇರಿದಂತೆ ಹಲವು ಕಡೆ ಜನರಿಗೆ ಮೊನೆಯಿಂದ ಹೊರಗೆ ಬರ ಬೇಡಿ ಎಂದು ಹಲವು ಬಾರಿ ರೌಂಡ್ಸ್ ಹಾಕುವ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು . ಒಂದು ವೇಳೆ ಅಗತ್ಯ ವಸ್ತುಗಳ ಸಂಗ್ರಹ ಣೆ ಹೂರತು ಪಡಿಸಿ ಉಳಿದವರು ಮನೆಯಿಂದ ಹೊರಗೆ ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳು ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


Spread the love

About Laxminews 24x7

Check Also

ವನ್ಯಜೀವಿಗಳ ದಾಹ ತೀರಿಸುವ ಕೃತಕ ನೀರಿನ ತೊಟ್ಟಿಗಳು

Spread the loveಹಾನಗಲ್: ಕಡು ಬೇಸಿಗೆ ನಾಡಿನೆಲ್ಲೆಡೆ ಕುಡಿಯುವ ನೀರಿಗೆ ಅಭಾವ ಸೃಷ್ಟಿಸಿದೆ. ಕಾಡಿನಲ್ಲಿ ವನ್ಯ ಜೀವಿಗಳು ಅನುಭವಿಸುತ್ತಿರುವ ಸಂಕಷ್ಟ ಅರಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ