ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಗವಾಡ ತಾಲೂಕಿನಿಂದ 15 ಕಿ.ಮೀ ದೂರದಲ್ಲಿರುವ ಮಹಾರಾಷ್ಟ್ರದ ಮಿರಜ್‌ನ ಗಾಂಧಿ ಚೌಕ್ ಠಾಣೆ ಪೊಲೀಸರು ದಾಳಿ ನಡೆಸಿ, ನಕಲಿ ನೋಟು ತಯಾರಿಕೆಯಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಮಹಾರಾಷ್ಟ್ರದ ಸಂಚಾರಿ ಪೊಲೀಸ್ ಠಾಣೆಯೊಂದರ ವಾಹನ ಚಾಲಕ ಎನ್ನುವುದು ವಿಶೇಷ. ಬಂಧಿತರಿಂದ ಒಂದು …
Read More »ವಾರದಲ್ಲಿ 6 ದಿನ ಮೌನ ವ್ರತ: ಭಕ್ತರ ಅಚ್ಚರಿಗೆ ಕಾರಣವಾಯ್ತು ಗವಿಸಿದ್ದೇಶ್ವರ ಸ್ವಾಮೀಜಿ ನಡೆ
ಕೊಪ್ಪಳ, ಅಕ್ಟೋಬರ್ 14: ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು (Abhinava Gavisiddeshwara Swamiji) ನಡೆದಾಡುವ ದೇವರು ಎಂದೇ ಪ್ರಸಿದ್ದ. ಅವರ ದರ್ಶನಕ್ಕಾಗಿ ಪ್ರತಿನಿತ್ಯ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೀಗಿರುವಾಗ ಸ್ವಾಮೀಜಿಯ ಅದೊಂದು ನಡೆ ಮಾತ್ರ ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ. ವಾರದಲ್ಲಿ ಒಂದು ದಿನ ಮಾತ್ರ ಮೌನ ಅನುಷ್ಠಾನ ಆಚರಿಸುತ್ತಿದ್ದ ಅವರು, ಇದೀಗ ವಾರದಲ್ಲಿ ಆರು ದಿನ ಮೌನ ಅನುಷ್ಠಾನದ ಮೊರೆಹೋಗುತ್ತಿದ್ದಾರೆ. ಆ ಮೂಲಕ ಕಾರ್ಖಾನೆಯೊಂದರ ವಿಚಾರವಾಗಿ ಪರೋಕ್ಷವಾಗಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. …
Read More »ಧಾರವಾಡ ಕೃಷಿ ವಿವಿಯಲ್ಲಿ 2018ರಿಂದ ಇಲ್ಲಿಯವರೆಗೆ ಲೆಕ್ಕಪರಿಶೋಧನೆ ನಡೆಸಲು ಸಿಎಜಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅನರ್ಹ ವ್ಯಕ್ತಿಯೊಬ್ಬರು ಕಳೆದ 2018ರಿಂದ ಕಂಟ್ರೋಲರ್ ಹುದ್ದೆ ನಿರ್ವಹಿಸಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಕಳೆದ 2018ರಿಂದ 2025ರವರೆಗೂ ವಿವಿಯ ಎಲ್ಲ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನೆ ನಡೆಸುವಂತೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್-ಕರ್ನಾಟಕ (ಸಿಎಜಿ)ಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಲೆಕ್ಕಪರಿಶೋಧನೆ ಸಮಯದಲ್ಲಿ ಯಾವುದೇ ಅಕ್ರಮ ಮತ್ತು ಹಣಕಾಸಿನ ದುರುಪಯೋಗ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ …
Read More »ಕಾಗವಾಡದ ಶಿರುಗುಪ್ಪಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಗಂಗಾಮಕ್ಕೆ ಚಾಲನೆ.
——————————– ಕಾಗವಾಡ ತಾಲೂಕಿನ ಶಿರುಗುಪ್ಪಿ ಸಕ್ಕರೆ ಕಾರ್ಖಾನೆ 13ನೆ ಕಬ್ಬು ನುರಿಸುವ ಹಂಗಾಮಕ್ಕೆ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು, ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗ್ಗೆನವರ ಇವರ ಹಸ್ತ ಯಿಂದ ಚಾಲನೆ ನೀಡಲಾಯಿತು. ಸೋಮವಾರ ರಂದು ಬೆಳಗ್ಗೆ ಸಕ್ಕರೆ ಕಾರ್ಖಾನೆಯ 13ನೇ ಕಬ್ಬು ನೂರುಸುವ ಹಂಗಾಮದ ಬಾಯ್ಲರ್ ಪೂಜೆ ನಿಡಸೋಶಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಇವರ ಸಾನಿಧ್ಯದಲ್ಲಿ ಪೂಜೆ ನೆರವೇರಿತು. ಸ್ವಾಮೀಜಿ ಆಶೀರ್ವದಿಸುತ್ತಿರುವಾಗ ಸಿರುಗುಪ್ಪಿ ಸಕ್ಕರೆ ಕಾರ್ಖಾನೆ, ಮಾಲೀಕರು ಕಳೆದ 12 …
Read More »ಉದ್ಯಾನ ಕಾಮಗಾರಿಗೆ ಭೂಮಿ ಪೂಜೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿದ್ಯಾನಗರದ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಭಾನುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. 98.10 ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸಚಿವರು ಸೂಚನೆ ನೀಡಿದರು. ಈ ವೇಳೆ ಸುರೇಶ ರೊಟ್ಟಿ, ಮಾಳಿ, ಮುಸ್ತಾಕ್ ಮುಲ್ಲಾ, ಸಂಜೀವ ದೇಸಾಯಿ, ಸುಜಾತಾ ಸನದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Read More »ಇಂದು ಬೆಳಗಾವಿಯ ಗಾಂಧಿ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ‘ಕನ್ನಡ ದೀಕ್ಷೆ’ ಪ್ರತಿಜ್ಞಾ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಲಾಯಿತು.
ಇಂದು ಬೆಳಗಾವಿಯ ಗಾಂಧಿ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ‘ಕನ್ನಡ ದೀಕ್ಷೆ’ ಪ್ರತಿಜ್ಞಾ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಲಾಯಿತು. ಕನ್ನಡದ ಘನತೆ, ಪ್ರೀತಿ ಮತ್ತು ಅಸ್ತಿತ್ವವನ್ನು ರಕ್ಷಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಪ್ರತಿಜ್ಞೆ ಕೈಗೊಂಡೆವು. ಕನ್ನಡದ ಹಿತಾಸಕ್ತಿ, ರಾಜ್ಯದ ಗೌರವ ಮತ್ತು ನಮ್ಮ ಸಾಂಸ್ಕೃತಿಕ ಗುರುತನ್ನು ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ ಎಂಬ ಪ್ರಮುಖ ಸಂದೇಶವನ್ನು ಈ ಸಮಾರಂಭವು ಸಾರಿತು. ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ …
Read More »ಮಾಲವಿ ಜಲಾಶಯದ ಮಣ್ಣಿನ ಗೋಡೆ ಒಡೆದು ನೀರು ಪೋಲು
ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದ ಹೊರಭಾಗದಲ್ಲಿರುವ ಮಾಲವಿ ಜಲಾಶಯದ ಮಣ್ಣಿನ ಗೋಡೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದ್ದು, ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2.50 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಮಾಲವಿ ಜಲಾಶಯ, ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಭರ್ತಿಯಾಗಿದೆ. ಆದ್ರೆ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಕೃಷಿ ಚಟುವಟಿಕೆಗೆ ಬಳಕೆಯಾಗಬೇಕಿದ್ದ ಜಲಾಶಯದ ನೀರು ವ್ಯರ್ಥವಾಗಿ ಹರಿಯುತ್ತಿದೆ. ಕ್ರಸ್ಟ್ ಗೇಟ್ …
Read More »ದೇವೇಗೌಡರ ಆರೋಗ್ಯ ಚೇತರಿಕೆಗಾಗಿ 108 ತೆಂಗಿನಕಾಯಿ ಒಡೆದು ಹರಕೆ ಹೊತ್ತ ಜೆಡಿಎಸ್ ಕಾರ್ಯಕರ್ತರು
ಚಿಕ್ಕಬಳ್ಳಾಪುರ: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಚಿಕ್ಕಬಳ್ಳಾಪುರ ಜೆಡಿಎಸ್ ಕಾರ್ಯಕರ್ತರು ದೇವರಿಗೆ ಪ್ರಾರ್ಥನೆ ಮಾಡಿ, 108 ತೆಂಗಿನಕಾಯಿ ಒಡೆದು ಹರಕೆ ಹೊತ್ತರು. ದೇವೇಗೌಡರ ಹೆಸರಲ್ಲಿ ಅರ್ಚನೆ: ಚಿಕ್ಕಬಳ್ಳಾಪುರ ನಗರ ಹೊರವಲಯದ ಸೋಲಾಲಪ್ಪ ದಿನ್ನೆಯ ವೀರಾಂಜನೇಯ ದೇವಾಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ದೇವೇಗೌಡರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ಬಳಿ ಮಾಜಿ ಪ್ರಧಾನಿಗಳ ಆರೋಗ್ಯ ಚೇತರಿಕೆಗಾಗಿ 108 ತೆಂಗಿನಕಾಯಿ ಒಡೆದು ಹರಕೆ …
Read More »ಬೆಳಗಾವಿ–ಮೀರಜ್–ಬೆಳಗಾವಿ ಪ್ಯಾಸೆಂಜರ್ ವಿಶೇಷ ರೈಲುಗಳ ಖಾಯಂಗೆ ರೈಲ್ವೆ ಮಂಡಳಿ ಅನುಮೋದನೆ
ಹುಬ್ಬಳ್ಳಿ: ದೈನಂದಿನ ವಿಶೇಷ ಪ್ಯಾಸೆಂಜರ್ ರೈಲುಗಳನ್ನು ಖಾಯಂಗೊಳಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ರೈಲ್ವೆ ಮಂಡಳಿಯು ರೈಲು ಸಂಖ್ಯೆ 07301/07302 ಬೆಳಗಾವಿ–ಮೀರಜ್–ಬೆಳಗಾವಿ ಮತ್ತು 07303/07304 ಬೆಳಗಾವಿ–ಮೀರಜ್–ಬೆಳಗಾವಿ ಕಾಯ್ದಿರಿಸದ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲುಗಳನ್ನು ಖಾಯಂಗೊಳಿಸಲು ಅನುಮೋದನೆ ನೀಡಿದೆ. ಅದರಂತೆ ಈ ರೈಲುಗಳು 51461/51462 ಬೆಳಗಾವಿ–ಮೀರಜ್–ಬೆಳಗಾವಿ ಮತ್ತು 51463/51464 ಬೆಳಗಾವಿ–ಮೀರಜ್–ಬೆಳಗಾವಿ ಎಂದು ಮರು-ಸಂಖ್ಯೆ ಪಡೆಯಲಿವೆ. ರೈಲು ಸಂಖ್ಯೆ 51461 ಬೆಳಗಾವಿ-ಮೀರಜ್ ಡೈಲಿ ಪ್ಯಾಸೆಂಜರ್ ಬೆಳಗಾವಿಯಿಂದ ಬೆಳಗ್ಗೆ 05:45ಕ್ಕೆ ಹೊರಟು, ಅದೇ ದಿನ ಬೆಳಗ್ಗೆ …
Read More »ಡಿಸಿಸಿ ಬ್ಯಾಂಕ್ ಚುನಾವಣೆಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಕೆ
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಬೆಳಗಾವಿ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ನನ್ನ ನಾಮಪತ್ರವನ್ನು ಇಂದು ಸಲ್ಲಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ನನ್ನ ಮೊದಲ ಹೆಜ್ಜೆಯನ್ನು ಇಟ್ಟಿದ್ದೇನೆ. ಈ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದ ಹಿರಿಯ ನಾಯಕರು ಶ್ರೀ ಬಾಲಚಂದ್ರ ಜಾರಕಿಹೊಳಿ, ಶ್ರೀ ಅಣ್ಣಾಸಾಹೇಬ ಜೊಲ್ಲೆ, ಶ್ರೀ ಚನ್ನರಾಜ ಹಟ್ಟಿಹೊಳಿ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಸಹಕಾರದ ಸಿದ್ಧಾಂತಗಳನ್ನು ಬೆಂಬಲಿಸಿ ಜನರ ಸೇವೆಗೆ ಸಮರ್ಪಿತರಾಗಿರುವ ನನ್ನ ಪ್ರಯತ್ನಕ್ಕೆ ಎಲ್ಲರ ಆಶೀರ್ವಾದ ಹಾಗೂ …
Read More »
Laxmi News 24×7