Breaking News

Uncategorized

ಇಂದು ಮತ್ತೊಂದು ಸಾವು, 31ಕ್ಕೆ ಏರಿದ ಸಾವಿನ ಸಂಖ್ಯೆ

ಬೆಳಗಾವಿ: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳ ಸಾವಿನ ಸರಣಿ ಮುಂದುವರಿದಿದೆ. ಇಂದು(ಸೋಮವಾರ) ಬೆಳಗಿನ ಜಾವ ಮತ್ತೊಂದು ಮೃತಪಟ್ಟಿದ್ದು, ಈ ಮೂಲಕ ಕೃಷ್ಣಮೃಗಗಳ ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿರುವ ಕಿರು ಮೃಗಾಲಯದಲ್ಲಿ ಕಳೆದ ಐದು ದಿನಗಳ ಅಂತರದಲ್ಲಿ ಒಟ್ಟು 31 ಕೃಷ್ಣ ಮೃಗಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ನ.13ರಂದು 8, ನ.15ರಂದು 20, ನಿನ್ನೆ 16ರಂದು ಬೆಳಗ್ಗೆ 1 ಮತ್ತು ಸಂಜೆ …

Read More »

ಅಂಜುಮನ್ ಕಾಲೇಜಿನಿಂದ ಯುವಶಕ್ತಿ ಮತದಾನ ಜಾಗೃತಿ ಅಭಿಯಾನ ಯುವಶಕ್ತಿಯಿಂದ ಮತದಾನ ಜಾಗೃತಿ ಅಭಿಯಾನ

ಅಂಜುಮನ್ ಕಾಲೇಜಿನಿಂದ ಯುವಶಕ್ತಿ ಮತದಾನ ಜಾಗೃತಿ ಅಭಿಯಾನ ಯುವಶಕ್ತಿಯಿಂದ ಮತದಾನ ಜಾಗೃತಿ ಅಭಿಯಾನ ಅಂಜುಮನ್ ಪಿ ಯು ಸಿ ಮತ್ತು ಐಟಿಐ ವಿದ್ಯಾರ್ಥಿಗಳಿಂದ ಜಾಗೃತಿ ನಾಗರಿಕರ ಹಕ್ಕು ಮತ್ತು ಮತದ ಮೌಲ್ಯವನ್ನು ಜನರಿಗೆ ತಿಳಿಸುವ ಗುರಿ ಸಮರ್ಥ ಸರ್ಕಾರ ರಚನೆಯಾದರೆ ದೇಶದ ಭವಿಷ್ಯ ಉಜ್ವಲ; ಡಾ. ಹೆಚ್ ಐ ತಿಮ್ಮಾಪೂರ ಬೆಳಗಾವಿ: ದೇಶದ ಭವಿಷ್ಯವನ್ನು ಉತ್ತಮಗೊಳಿಸುವ ಸದುದ್ದೇಶದಿಂದ, ಅಂಜುಮನ್ ಪಿಯು ಮಹಾವಿದ್ಯಾಲಯ ಹಾಗೂ ಅಂಜುಮಾನ್ ಐಟಿಐ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು …

Read More »

ಡಾ.ಹೆಬ್ಬಾಳಕರ್ಸ್ ಕ್ಲಿನಿಕ್ ಆರಂಭ

ಡಾ.ಹೆಬ್ಬಾಳಕರ್ಸ್ ಕ್ಲಿನಿಕ್ ಆರಂಭ ಉದ್ಘಾಟಿಸಿ ಶುಭ ಹಾರೈಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿ: ಡಾ. ಹಿತಾ ಮೃಣಾಲ್ ಹೆಬ್ಬಾಳಕರ್ ಅವರು ಆರಂಭಿಸಿರುವ ಸ್ಕಿನ್ ಆ‌್ಯಂಡ್ ಹೇರ್ ಕೇರ್ ಕ್ಲಿನಿಕ್ ನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಸಂಜೆ ಉದ್ಘಾಟಿಸಿದರು. ಕಾಲೇಜು ರಸ್ತೆಯ ಹೋಟೆಲ್ ಸನ್ಮಾನ್ ಹಿಂಭಾಗದಲ್ಲಿರುವ ದಾಸಪ್ಪ ಶಾನಭಾಗ್ ಎಂಪೈರ್ ನಲ್ಲಿ ಕ್ಲಿನಿಕ್ ಆರಂಭವಾಗಿದೆ. ಹಿತಾ ಅವರು ಬಹಳಷ್ಟು ಅಧ್ಯಯನ ಮಾಡಿದ್ದು, ಅತ್ಯಾಧುನಿಕ ಯಂತ್ರೋಪಕರಣಗಳನ್ನು …

Read More »

ಸಹಕಾರಿ ತತ್ವ, ಆದರ್ಶದಡಿ ಕೆಲಸ : ವಿಧಾನ ಪರಿಷತ್‌ ಸದಸ್ಯ ಚನ್ನರಾಜ್‌ ಹಟ್ಟಿಹೊಳಿ

ವೈಯಕ್ತಿಕ ದ್ವೇಷ ಬದಿಗಿಟ್ಟರಷ್ಟೇ ಸಹಕಾರಿ ಕ್ಷೇತ್ರದಲ್ಲಿ ಯಶಸ್ಸು* 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ *ಬೆಳಗಾವಿ:* ಚುನಾವಣೆ ವೇಳೆ ಬರುವ ಮನಸ್ತಾಪ, ವೈಯಕ್ತಿಕ ದ್ವೇಷಗಳನ್ನು ಬದಿಗಿಟ್ಟು, ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸಹಕಾರಿ ತತ್ವ, ಆದರ್ಶದಡಿ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯರಾದ ಚನ್ನರಾಜ್‌ ಹಟ್ಟಿಹೊಳಿ ಹೇಳಿದ್ದಾರೆ. ಹಿರೇಬಾಗೇವಾಡಿಯ ಶ್ರೀ ಜಾಲಿಕರೆಮ್ಮ ದೇವಿ ಮಂಗಲ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ ಬೆಂಗಳೂರು ಹಾಗೂ …

Read More »

ರಾಜೇಂದ್ರ ಬಡೇಸಗೋಳ ರವರಿಗೆ ಕವಿವಿ ಪಿಎಚ್‌ಡಿ ಪದವಿ ಪ್ರದಾನ

ರಾಜೇಂದ್ರ ಬಡೇಸಗೋಳ ರವರಿಗೆ ಕವಿವಿ ಪಿಎಚ್‌ಡಿ ಪದವಿ ಪ್ರದಾನ ಬೆಳಗಾವಿ: ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಶೋಧನಾ ವಿದ್ಯಾರ್ಥಿ ರಾಜೇಂದ್ರ ಉದಯ ಬಡೇಸಗೋಳ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ‘ಕರ್ನಾಟಕ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಒಂದು ಅಧ್ಯಯನ’ ಎಂಬ ಸಂಶೋಧನಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ರಾಜೇಂದ್ರ ಬಡೇಸಗೋಳ ಅವರಿಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಿದೆ. ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ …

Read More »

ಗ್ರಾಮಕ್ಕೆ ಆಗಮಿಸಿದ್ದ ಹೆಳವ ಅಲೆಮಾರಿ ಜನಾಂಗದ ಜೋಡಿಗೆ ಮದುವೆ ಮಾಡಿದ ಗ್ರಾಮಸ್ಥರು

ಹಾವೇರಿ: ಜಿಲ್ಲೆಯ ಅಗಡಿ ಗ್ರಾಮ ಶನಿವಾರ ವಿಶಿಷ್ಟ ಮದುವೆಗೆ ಸಾಕ್ಷಿಯಾಯಿತು. ಈ ಗ್ರಾಮಕ್ಕೆ ಆಗಮಿಸಿದ್ದ ಹೆಳವ ಅಲೆಮಾರಿ ಸಮುದಾಯದ ಜೋಡಿಯ ಮದುವೆಯನ್ನು ಸುತ್ತಮುತ್ತಲಿನ ಗ್ರಾಮಗಳ ರೈತರೇ ಎಲ್ಲಾ ಜವಾಬ್ದಾರಿ ವಹಿಸಿಕೊಂಡು ನೆರವೇರಿಸಿದರು. ಬೆಳಗಾವಿ ಜಿಲ್ಲೆ ಗೋಕಾಕ್​ ತಾಲೂಕಿನ ಶಿಲ್ಲತಹಳ್ಳಿ ಗ್ರಾಮದ ಹೆಳವ ಸಂಗಮೇಶ್​​ ಮತ್ತು ಗೋಕಾಕ್​ ತಾಲೂಕು ಕಂಡ್ರಕಟ್ಟಿ ಗ್ರಾಮದ ನೇತ್ರಾವತಿ ಅವರು ಗ್ರಾಮಸ್ಥರ ಮತ್ತು ರೈತರ ಸಮ್ಮುಖದಲ್ಲಿ ನೂತನ ದಾಂಪತ್ಯಕ್ಕೆ ಕಾಲಿಟ್ಟರು. ಅಗಡಿ ಗ್ರಾಮದ ಹೊರವಲಯದಲ್ಲಿ ಹೆಳವರ ತಾತ್ಕಾಲಿಕ ಶೆಡ್ …

Read More »

ಮೈಕ್ರೋ ಸಾಫ್ಟ್ ಹೆಸರಲ್ಲಿ ಅಮೆರಿಕಾ ಪ್ರಜೆಗಳಿಗೆ ಸೈಬರ್ ವಂಚನೆ: ಬೆಂಗಳೂರಲ್ಲಿ 21 ಆರೋಪಿಗಳ ಬಂಧನ

ಮೈಕ್ರೋ ಸಾಫ್ಟ್ ಹೆಸರಲ್ಲಿ ಅಮೆರಿಕಾ ಪ್ರಜೆಗಳಿಗೆ ಸೈಬರ್ ವಂಚನೆ: ಬೆಂಗಳೂರಲ್ಲಿ 21 ಆರೋಪಿಗಳ ಬಂಧನ ಬೆಂಗಳೂರು: ಸೈಬರ್‌ ವಂಚನೆಗೆ ಕಡಿವಾಣ ಹಾಕಲು ಸಿಐಡಿ ಕಚೇರಿಯಲ್ಲಿ ನೂತನವಾಗಿ ಆರಂಭಿಸಿರುವ ಸೈಬರ್‌ ಕಮಾಂಡ್‌ ಸೆಂಟರ್‌ (ಸಿಸಿಸಿ) ಭರ್ಜರಿ ಕಾರ್ಯಾಚರಣೆ ನಡೆಸಿ, ಮೈಕ್ರೋ ಸಾಫ್ಟ್ ಹೆಸರು ದುರ್ಬಳಕೆ ಮಾಡಿಕೊಂಡು, ಬೆಂಗಳೂರಿನಲ್ಲಿ ಕುಳಿತು ಅಮೆರಿಕಾ ಪ್ರಜೆಗಳು ಸೇರಿ ಇತರೆ ನಾಗರಿಕರನ್ನು ಬೆದರಿಸಿ ವಂಚಿಸುತ್ತಿದ್ದ 21 ಸೈಬರ್‌ ವಂಚಕರ ಜಾಲವನ್ನು ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ವಂದನಾ …

Read More »

ರಾಯಬಾಗ ಸರ್ಕಾರಿ ಆಸ್ಪತ್ರೆಯ ವೈದ್ಯರ ಭರ್ಜರಿ ಎಣ್ಣೆ ಪಾರ್ಟಿ

ರಾಯಬಾಗ : ಲೋಕೋಪಯೋಗಿ ಸಚಿವರೇ ಇಲ್ಲಿ ಒಮ್ಮೆ ನೋಡಿ ನಿಮ್ಮದೇ ಇಲಾಖೆಯ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿದೆ ಮದ್ಯ ಸೇವನೆ ಪಾರ್ಟಿ ರಾಯಬಾಗ ಸರ್ಕಾರಿ ಆಸ್ಪತ್ರೆಯ ವೈದ್ಯರ ಭರ್ಜರಿ ಎಣ್ಣೆ ಪಾರ್ಟಿ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಸರ್ಕಾರಿ ವೈದ್ಯರ ಎಣ್ಣೆ ಪಾರ್ಟಿ ಎತ್ತ ಸಾಗುತ್ತಿದೆ ಈ ವೈದ್ಯರ ಕಾರ್ಯವೈಖರಿ ದಿನಕ್ಕೊಂದು ಸುದ್ದಿಯಲ್ಲಿರುವ ರಾಯಬಾಗ ಸರ್ಕಾರಿ ಆಸ್ಪತ್ರೆಯ ರಾಜ್ಯದ ಗಮನ ಸೆಳೆದಿತ್ತು ಮನಸ್ಸೋ ಇಚ್ಛೆ ಕೆಲಸ ಮಾಡದೇ ಸುದ್ದಿಯಾಗುತ್ತಿದ್ದ ಸರ್ಕಾರಿ ಅಸ್ಪತ್ರೆ ಇದೀಗ …

Read More »

ಬಿಹಾರ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಪಾಠ, ಸಿದ್ದರಾಮಯ್ಯನವರು ಗಟ್ಟಿಯಾಗಿದ್ದಾರೆ: ಸತೀಶ್ ಜಾರಕಿಹೊಳಿ

ಬಿಹಾರ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಪಾಠ, ಸಿದ್ದರಾಮಯ್ಯನವರು ಗಟ್ಟಿಯಾಗಿದ್ದಾರೆ: ಸತೀಶ್ ಜಾರಕಿಹೊಳಿ   ದಾವಣಗೆರೆ : ಸಿದ್ದರಾಮಯ್ಯನವರು ಗಟ್ಟಿಯಾಗಿದ್ದಾರೆ. ಸಿಎಂ ಬದಲಾವಣೆ ಮಾತೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯ ಅವರ ಪರ ಬ್ಯಾಟ್ ಬೀಸಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದ ಆವರಣದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೂ ಮುನ್ನ ಮಾತನಾಡಿದ ಅವರು, ರಾಜ್ಯದ ಎಲ್ಲಾ ಕಡೆ ಸಂಚಾರ ಮಾಡಲು ಹೆಲಿಕಾಪ್ಟರ್ …

Read More »

ಕಬ್ಬು ಬೆಳೆಗೆ ದರ ನಿಗದಿ ಮಾಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿದ್ದ ಹೋರಾಟ ಅಂತ್ಯ

ಬಾಗಲಕೋಟೆ: ಕಬ್ಬು ಬೆಳೆಗೆ ದರ ನಿಗದಿ ಸಂಬಂಧಪಟ್ಟಂತೆ ನಡೆಯುತ್ತಿರುವ ರೈತರ ಹೋರಾಟ ಇಬ್ಬರು ಸಚಿವರ ಸಂಧಾನದಿಂದಾಗಿ ಯಶಸ್ಸು ಕಂಡಿದ್ದು, ರೈತರ ಹೋರಾಟ ಸಮಾಪ್ತಿಗೊಂಡಿದೆ. ಕಳೆದ ದಿನ ಕಬ್ಬು ತುಂಬಿದ ಟ್ರ್ಯಾಕ್ಟರ್​​​ಗೆ ಬೆಂಕಿ ಹಚ್ಚಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರು ರೈತರು & ಸಕ್ಕರೆ ಕಾರ್ಖಾನೆ ಮಾಲೀಕರ ಮಧ್ಯೆ ಸಂಧಾನ ಸಭೆ ನಡೆಸಿ, …

Read More »