Breaking News

Uncategorized

CWC ಸದಸ್ಯರಾಗಿ ಸಿದ್ದರಾಮಯ್ಯ ನೇಮಕ

ನವದೆಹಲಿ: ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ  ಸದಸ್ಯರಾಗಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ನೇಮಕ ಮಾಡಿದೆ. CWC ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ಸಮಿತಿ. ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಿತಿ ಇದಾಗಿದೆ. ದೇಶದ್ಯಾಂತ ಇರುವ ಪ್ರಮುಖ ನಾಯಕರನ್ನು ಈ ಸಮಿತಿಯಲ್ಲಿ ಸದಸ್ಯರಾಗಿಸಿದೆ. ಈ ಸಮಿತಿಯಲ್ಲಿ ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡುವ ಮೂಲಕ ಕಾಂಗ್ರೆಸ್‌ ಪ್ರಮೋಷನ್ ನೀಡಿದೆ.

Read More »

ಮೊದಲ ಪಟ್ಟಿಯಲ್ಲಿ ಮಿಸ್ಸಾದ ಮಹದೇವಪ್ಪ – ಲಕ್ಷ್ಮಿ ಹೆಬ್ಬಾಳ್ಕರ್, ಜಮೀರ್, ಖಂಡ್ರೆಗೂ ನಿರಾಸೆ

ಬೆಂಗಳೂರು: ಮೊದಲ ಲಿಸ್ಟ್‌ನಲ್ಲಿ ಘಟಾನುಘಟಿ ನಾಯಕರ ಹೆಸರು ಮಿಸ್ ಆಗಿದೆ. ಜೂನ್ 20ರಂದು 2ನೇ ಹಂತದ ಕ್ಯಾಬಿನೆಟ್ ಫೈನಲ್ ಆಗಲಿದ್ದು, ಬಂಡಾಯ, ಹೊಸತನ, ಹಿರಿತನ, ಪಕ್ಷಸಂಘಟನೆ, ಚುನಾವಣೆ, ಜಾತಿ ಲೆಕ್ಕಾಚಾರದಲ್ಲಿ ಭರ್ತಿ ಮಾಡುವ ಸಾಧ್ಯತೆ ಇದೆ. ಮೊದಲ ಪಟ್ಟಿಯಲ್ಲಿ ಮಿಸ್ ಆದ ಪ್ರಮುಖರು? ಮಹದೇವಪ್ಪ, ದಲಿತ ಹೆಚ್.ಕೆ. ಪಾಟೀಲ್, ರೆಡ್ಡಿ ಲಿಂಗಾಯತ ಲಕ್ಷ್ಮೀ ಹೆಬ್ಬಾಳ್ಕರ್, ಲಿಂಗಾಯತ ಈಶ್ವರ ಖಂಡ್ರೆ, ಲಿಂಗಾಯತ ಎಸ್.ಎಸ್.ಮಲ್ಲಿಕಾರ್ಜುನ, ಲಿಂಗಾಯತ ಎಂ.ಸಿ.ಸುಧಾಕರ್, ಒಕ್ಕಲಿಗ ಜಮೀರ್ ಅಹ್ಮದ್, ಮುಸ್ಲಿಂ …

Read More »

ಜಾರಕಿಹೊಳಿಗೆ ಫಿಕ್ಸ್ ಆಯ್ತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ? – ಹೆಚ್‌ಕೆ ಪಾಟೀಲ್ or ದಿನೇಶ್‌ಗೆ ಸ್ಪೀಕರ್ ಸ್ಥಾನನಾ?

ಬೆಂಗಳೂರು: ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಇರುತ್ತಾ, ಇಲ್ವಾ ಎಂಬ ಅನುಮಾನ ಮೂಡಿದೆ. ಡಿಸಿಎಂ ಹುದ್ದೆ ಸೃಷ್ಟಿ ಬೇಕಾ, ಬೇಡ್ವಾ ಎಂಬ ತೀರ್ಮಾನ ಸಂಪೂರ್ಣವಾಗಿ ರಾಹುಲ್ ಗಾಂಧಿ ಹೆಗಲಿಗೆ ಹಾಕಲಾಗಿದೆ. ಡಿಸಿಎಂ ಹುದ್ದೆ ರಾಜ್ಯ ನಾಯಕರ ಬೇಡಿಕೆ ಮೇಲೆ ತೀರ್ಮಾನ ಇಲ್ಲವೆಂದು ಕೆಸಿ ವೇಣುಗೋಪಾಲ್, ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಸ್ಪಷ್ಟಪಡಿಸಿದ್ದಾರಂತೆ. ಡಿಕೆಶಿ ಹಾಗೂ ಸಿದ್ದರಾಮಯ್ಯರಿಂದ ಮಾಹಿತಿ ಪಡೆದ ರಾಹುಲ್ ಗಾಂಧಿ ಅಂತಿಮ ತೀರ್ಮಾನ ಮಾಡಲಿದ್ದಾರೆ. ರಾಹುಲ್ ಬೇಡವೆಂದರೆ ಬೇಡ ಅಂತ …

Read More »

RSS ಎಂಬ ಭಸ್ಮಾಸುರ ಮುಗ್ಧ ಯುವಜನರ ಮಿದುಳಿಗೆ ಕೈ ಇಟ್ಟು ದೇಶವನ್ನೇ ಸುಡುತ್ತಿದೆ: ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ಕಲಬುರಗಿ: ಆರ್‌ಎಸ್‌ಎಸ್‌ ಎಂಬ ಆಧುನಿಕ ಭಸ್ಮಾಸುರ ಮುಗ್ಧ ಯುವಸಮುದಾಯದ ಮಿದುಳಿಗೆ ಕೈ ಇಟ್ಟು ಇಡೀ ದೇಶವನ್ನೇ ಸುಡುತ್ತಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್ಎಸ್ ಹಾಗೂ ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ಎಕ್ಸ್ ಖಾತೆಯಲ್ಲಿ ಪ್ರಿಯಾಂಕ್‌ ಖರ್ಗೆ ಪೋಸ್ಟ್‌ ಹಂಚಿಕೊಂಡು ಕಿಡಿಕಾರಿದ್ದಾರೆ. ಪುರಾಣದ ಭಸ್ಮಾಸುರ ತಲೆ ಮೇಲೆ ಕೈ ಇಟ್ಟು ಸಿಕ್ಕವರನ್ನು ಸುಡುತ್ತಿದ್ದನಂತೆ, RSS ಎಂಬ ಆಧುನಿಕ ಭಸ್ಮಾಸುರ ಮುಗ್ಧ ಯುವಸಮುದಾಯದ ಮಿದುಳಿಗೆ ಕೈ ಇಟ್ಟು ಇಡೀ ದೇಶವನ್ನೇ …

Read More »

ಬೆಳಗ್ಗೆ 10 ಗಂಟೆಗೆ ಸಚಿವ ಸಂಪುಟ ಪಟ್ಟಿ ರಿಲೀಸ್: ಡಿಕೆಶಿ

  ಬೆಂಗಳೂರು: ಬುಧವಾರ ಬೆಳಗ್ಗೆ 10 ಗಂಟೆಗೆ ಸಚಿವ ಸಂಪುಟ ಪಟ್ಟಿ ಬಿಡುಗಡೆ ಆಗಲಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನಾಳೆ ಬೆಳಗ್ಗೆ 10ಕ್ಕೆ ಕ್ಯಾಬಿನೆಟ್ ಫೈನಲ್ ಮಾಡ್ತಾರೆ. ಮಾಧ್ಯಮದಲ್ಲಿ ಸಂಭಾವ್ಯ ಸಚಿವರ ಹೆಸರು ಬರ್ತಿರೋದು ಅಧಿಕೃತವಲ್ಲ. ನಾಳೆ 10 ಗಂಟೆಗೆ ದೆಹಲಿಯಿಂದ ಲಿಸ್ಟ್ ಕಳಿಸ್ತಾರೆ. ಅದನ್ನ ನಾವೇ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ …

Read More »

ಇಂದು ಡಿಕೆಶಿ ಪಟ್ಟಾಭಿಷೇಕ – ರಾಜಯೋಗ ತರಲಿದೆಯೇ ‘ಮಾಲವ್ಯ ಯೋಗ’ದ ಮುಹೂರ್ತ?

ಬೆಂಗಳೂರು: ರಾಜ್ಯ ರಾಜಕಾರಣದ ಅತ್ಯಂತ ಪ್ರಮುಖ ಕ್ಷಣಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಇನ್ನು ಕೆಲವೇ ಕ್ಷಣಗಳು ಬಾಕಿ ಇವೆ. ಇಂದು ಸಂಜೆ 4:05ಕ್ಕೆ ಡಿಕೆಶಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ವಿಶೇಷವೆಂದರೆ, ಈ ಪದಗ್ರಹಣ ಸಮಾರಂಭಕ್ಕೆ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಹಿನ್ನೆಲೆಯಲ್ಲಿ ಅತ್ಯಂತ ಅಪರೂಪದ ಹಾಗೂ ಶಕ್ತಿಶಾಲಿ ಮಾಲವ್ಯ ಯೋಗದ ಮುಹೂರ್ತವನ್ನು ನಿಗದಿಪಡಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೂನ್ …

Read More »

ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ 13 ಆರೋಪಿಗಳು ಅರೆಸ್ಟ್

ಬೆಳಗಾವಿಯಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ 13 ಆರೋಪಿಗಳ ಗ್ಯಾಂಗ್‌ ನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಮಾರುತಿ ಸುತಾರ, ಸೋಮನಾಥ ಚೌಗಲೆ, ಸಂತೋಷ ನಾಯಕ, ಮಾರುತಿ ಗುಡದ್ಯಾಗೋಳ, ಬಾಳು ನಾಯಕ, ಲಕ್ಷ್ಮಣ ಗುಜನಾಳ, ಬಸವರಾಜ ಸಾಲೋಟಗಿ, ಬಸವಂತ ಯರಮಾಳಕರ, ಲಕ್ಷ್ಮಣ ಗುರವ, ಮರಿಯಪ್ಪ ನಾಯಕ, ವಿಶ್ವನಾಥ ದೇಸಾಯಿ ಬಂಧಿತರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದ್ದ ಕೊಲೆ ಕೇಸ್‌ನ ತನಿಖೆ ನಡೆಸುತ್ತಿದ್ದ ವೇಳೆ ಪೊಲೀಸರಿಗೆ ಕಂಟ್ರಿ ಪಿಸ್ತೂಲ್‌ನಿಂದ ಕೊಲೆ ಮಾಡಿರುವುದು …

Read More »

ಡಿವೈ ಎಸ್ ಪಿ ಹೆಸರು ಬರೆದಿಟ್ಟು ಬೆಳಗಾವಿಯಲ್ಲಿ ವ್ಯಕ್ತಿ ಆತ್ಮಹತ್ಯೆ

ಕುಂದಾನಗರಿ ಬೆಳಗಾವಿಯಲ್ಲಿ ವ್ಯಕ್ತಿಯೋರ್ವರು ಡಿವೈ ಎಸ್ ಪಿ, ಪಿಎಸ್​ಐ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಂಡಿಗೇರಿ ಗ್ರಾಮದ ರವೀಂದ್ರ ದಾನವ್ವಗೋಳ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದರಿಂದಕ್ಕೆ ಹಾಗೂ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಅವರೂ ಕೂಡ ನಿರ್ಲಕ್ಷ ಮಾಡಿ ಬೆದರಿಕೆ ಹಾಕಿದ್ದಕ್ಕೆ ಮನನೊಂದ ರವೀಂದ್ರ …

Read More »

ಜೂನ್ 4 ರಂದು ಬೆಳಗಾವಿಯಲ್ಲಿ ವಿದ್ಯುತ್ ವ್ಯತ್ಯಯ

ಬೆಳಗಾವಿ: ಹುವಿಸಕಂನಿ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಜೂನ್ 4 2026 ರಂದು ಬೆಳಗ್ಗೆ 9 ಘಂಟೆಯಿಂದ ಸಂಜೆ 5 ಘಂಟೆಯವರೆಗೆ 33 ಕೆ.ವಿ. ಬಾಳೇಕುಂದ್ರಿ ಉಪಕೇಂದ್ರದಿಂದ ಸರಬರಾಜು ಆಗುವ ಕ್ಯಾಂಪ್‌ಬೆಲ್, ಮಾರಿಹಾಳ, ಕರಡಿಗುದ್ದಿ, ಪಂತಬಾಳೇಕುಂದ್ರಿ, ಬಾಳೇಕುಂದ್ರಿ, ಹೊನ್ನಿಹಾಳ, ಮಾವಿನಕಟ್ಟಿ, ತಾರಿಹಾಳ, ಚಂದನ ಹೊಸೂರ, ಎಮ್.ಇ.ಎಸ್, ಸಾಂಬ್ರಾ, ಮುತಗಾ, ಸುಳೇಭಾವಿ, ಪಂತ ನಗರ, ಮೋದಗಾ, ಯದ್ಧಲಭಾವಿಹಟ್ಟಿ, ಖನಗಾಂವ, ಚಂದೂರ, ಚಂದಗಡ ಹಾಗೂ ಗಣಿಕೊಪ್ಪ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ …

Read More »

ಬೈಕ್ ಕಳ್ಳನ ಬಂಧನ: ಐದು ಬೈಕ್ ವಶಕ್ಕೆ

ಬೆಳಗಾವಿ: ಬೆಳಗಾವಿ ಹಿರೇಬಾಗೆವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ನಗರದಲ್ಲಿ ಇತ್ತಿಚಿಗೆ ಜರುಗಿದ ಮೋಟಾರ ಸೈಕಲ್ ಕಳ್ಳತನ ಪ್ರಕರಣಗಳ ಪತ್ತೆ ಮಾಡುವ ಕುರಿತು ಬೆಳಗಾವಿ ನಗರದ ಪೊಲೀಸ್ ಆಯುಕ್ತರಾದ  ಬೊರಸೆ ಭೂಷಣ ಗುಲಾಬರಾವ ಮಾರ್ಗದರ್ಶನದಲ್ಲಿ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಸಿಬ್ಬಂದಿ ಹಿರೇಬಾಗೆವಾಡಿ ಪೊಲೀಸ್‌ ಠಾಣಿ ಅಪರಾಧ ಸಂಖ್ಯೆ : 02/2026 ಕಲಂ 303(2) ಬಿಎನ್‌ಎಸ್-2023 ಪ್ರಕರಣದಲ್ಲಿ ಆರೋಪಿ ಲಕ್ಷ್ಮಣ …

Read More »