Breaking News

Uncategorized

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗಣತಿ ಪ್ರಗತಿ ಪರಿಶೀಲನಾ ಸಭೆ

ಗಣತಿ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ವಿವಿಧ ಸ್ತರದ ಅಧಿಕಾರಿ ಮತ್ತು ಸಿಬ್ಬಂದಿ ನಿಗದಿತ ಅವಧಿ ಒಳಗೆ ಕಾರ್ಯವನ್ನು ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷೃ ಮಾಡಬೇಡಿ ಎಂದು ಆಯುಕ್ತ ಕಾರ್ತಿಕ್.ಎಂ. ತಿಳಿಸಿದರು. ನಗರದ ಪಾಲಿಕೆ ಸಭಾಂಗಣದಲ್ಲಿ  ಜರುಗಿದ ಗಣತಿ ಕಾರ್ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ಗಣತಿದಾರರ ಕಾರ್ಯ ವೇಗ ಪಡೆಯಲು ವಿವಿಧ ಸ್ತರದ ಮೇಲಾಧಿಕಾರಿ ಹಾಗೂ ಸಿಬ್ಬಂದಿ ನಿರಂತರ ಸಂಪರ್ಕ ಮತ್ತು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ತಾಂತ್ರಿಕ ಸಮಸ್ಯೆ ನೆಪವೊಡ್ಡಿ …

Read More »

ಎಲ್ ಆ್ಯಂಡ್ ಟಿ ವಿರುದ್ಧ ಪಾಲಿಕೆ ಸದಸ್ಯರು ಆಕ್ರೋಶ

ಬೆಳಗಾವಿ ಮಹಾನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಮಾಡಲು ಗುತ್ತಿಗೆ ಪಡೆದಿರುವ  ಎಲ್ ಆ್ಯಂಡ್ ಟಿ ( ಲಾರ್ಸೆನ್ ಅಂಡ್ ಸೂರ್ಬೋ) ಯಾವುದೇ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಕುಡಿಯುವ ನೀರಿನ ಮಾರ್ಗಕ್ಕೆ ಅಳವಡಿಸಿರುವ ಪೈಪ್‌ಲೈನ್ ಗುಣಮಟ್ಟ ಪರಿಶೀಲಿಸಬೇಕು ಎಂದು ಪಾಲಿಕೆ ಸದಸ್ಯರು ಆಗ್ರಹಿಸಿದರು. ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸದಸ್ಯರು, ನಗರದಲ್ಲಿ ಕುಡಿಯುವ ನೀರಿನ ಪೈಪಲೈನ್ ಕಾಮಗಾರಿ ಹೆಸರಿನಲ್ಲಿ …

Read More »

SSLC ಫಲಿತಾಂಶದಲ್ಲಿ ಮತ್ತೊಂದು ಎಡವಟ್ಟು: ಕೇವಲ 12 ಅಂಕ ನಮೂದು; ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಕೊಪ್ಪಳ: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್​​​ಎಸ್​ಎಲ್​​ಸಿ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ತೇರ್ಗಡೆಯಲ್ಲಿ ದಾಖಲೆಯ ರಿಸಲ್ಟ್​ ಬಂದಿದೆ. ಆದರೆ ಮೌಲ್ಯಮಾಪಕರಿಂದ ಉಂಟಾಗಿರುವಂತಹ ಕೆಲ ಎಡವಟ್ಟುಗಳು ದಿನೇದಿನೆ ಬೆಳಕಿಗೆ ಬರುತ್ತಿವೆ. ಇದೀಗ ಜಿಲ್ಲೆಯಲ್ಲೂ ಶಿಕ್ಷಣ ಇಲಾಖೆಯ ಎಡವಟ್ಟು ಒಂದು ಬೆಳಕಿಗೆ ಬಂದಿದ್ದು, ಅದರಿಂದ ಆಘಾತಗೊಂಡ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಕೊಪ್ಪಳ ತಾಲೂಕಿನ ಕಾತರಕಿ ಗುಡ್ಲಾನೂರ ಗ್ರಾಮದ ನಿವಾಸಿ ಸಂಜನಾ ಮಡಿವಾಳರ ಎಸ್​​​ಎಸ್​ಎಲ್​​ಸಿ ಪರೀಕ್ಷೆ …

Read More »

ಶ್ರೀಗಳನ್ನು ಎಳೆದು ಹೊರಗೆ ಹಾಕ್ತಾರಂತೆ, ತಾಕತ್‌ ಇದ್ರೆ ಮುಟ್ಟಿ – ಟ್ರಸ್ಟಿಗಳಿಗೆ ಹೆಚ್.ಎಸ್ ಶಿವಶಂಕರ್ ಎಚ್ಚರಿಕೆ

ದಾವಣಗೆರೆ: ಪಂಚಮಸಾಲಿ ಪೀಠದ  ಟ್ರಸ್ಟಿಗಳು ನಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸ್ವಾಮೀಜಿಗಳನ್ನು ಏಳೆದು ಹೊರ ಹಾಕುತ್ತೇವೆ ಎಂದು ಹೇಳಿದ್ದಾರೆ. ತಾಕತ್ ಇದ್ದರೆ ಬಂದು ಸ್ವಾಮೀಜಿಗಳನ್ನು  ಮುಟ್ಟಿ ನೋಡೋಣಾ‌ ಎಂದು ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಟ್ರಸ್ಟಿಗಳಿಗೆ ಎಚ್ಚರಿಕೆ ನೀಡಿದರು. ಟ್ರಸ್ಟಿಗಳಿಂದ ಲೆಕ್ಕ ಕೊಡುವ ಕಾರ್ಯಕ್ರಮದ ಹಿನ್ನೆಲೆ, ಪಂಚಮಸಾಲಿ ಪೀಠದಲ್ಲಿ ಸ್ವಾಮೀಜಿ ಬೆಂಬಲಿಗರಿಂದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಅವರು ಮಾತನಾಡಿ, ಟ್ರಸ್ಟ್‌ನವರು ಪೊಲೀಸರ ರಕ್ಷಣೆಯಲ್ಲಿ ಬಂದು ಸ್ವಾಮೀಜಿಗಳನ್ನು ಉಚ್ಚಾಟನೆ ಮಾಡಿದ್ದಾರೆ …

Read More »

ಯುವತಿ ಅನುಮಾನಾಸ್ಪದ ಸಾವು – ಬೆತ್ತಲೆ, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಬೆಂಗಳೂರು: ಬಾಡಿಗೆ ಮನೆಯಲ್ಲಿ ಬೆತ್ತಲೆ ಹಾಗೂ ಕೊಳೆತ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದೆ. ಪೂಜಾ ದತ್ತಾ ಎಂಬ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಪೂಜಾ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇತ್ತೀಚಿಗೆ ಕೆಲಸ ಕಳೆದುಕೊಂಡಿದ್ದಳು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಮನೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಆಡುಗೋಡಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೂಜಾ ದತ್ತಾ ಜಾರ್ಖಂಡ್ ಮೂಲದವಳು. ಕಳೆದ ಎರಡೂವರೆ ವರ್ಷದಿಂದ ಆಡುಗೋಡಿಯಲ್ಲಿ ವಾಸವಿದ್ದಳು. ಈ ಹಿಂದೆ ಖಾಸಗಿ …

Read More »

ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ ಆದೇಶಕ್ಕೆ 6 ತಿಂಗಳ ಬ್ರೇಕ್ ಹಾಕಿದ `ಮಹಾ’ ಸರ್ಕಾರ

ಮುಂಬೈ: ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ ಎಂಬ ಆದೇಶಕ್ಕೆ ಮಹಾರಾಷ್ಟ್ರ ಸರ್ಕಾರ  6 ತಿಂಗಳ ಬ್ರೇಕ್ ಹಾಕಿದೆ. ಇತ್ತೀಚಿಗಷ್ಟೇ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್  ಅವರು ಮೇ.1ರಿಂದ ಮಹಾರಾಷ್ಟ್ರದಲ್ಲಿ ಎಲ್ಲಾ ಪರವಾನಗಿ ಪಡೆದ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಮಾತನಾಡುವುದು ಕಡ್ಡಾಯವಾಗಿ ಜಾರಿಗೊಳಿಸುವುದಾಗಿ ಘೋಷಿಸಿದ್ದರು. ಈ ಸಂಬಂಧ ಶಿವಸೇನಾ ನಾಯಕ ಸಂಜಯ್ ನಿರುಪಮ್  ಅವರು ಪ್ರತಾಪ್ ಸರ್ನಾಯಕ್ ಅವರಿಗೆ ಪತ್ರ ಬರೆದಿದ್ದು, ಆರು ತಿಂಗಳಿಂದ ಒಂದು ವರ್ಷದವರೆಗೆ ಮುಂದೂಡುವಂತೆ …

Read More »

ಬೆಂಗಳೂರು ಹೊಡೆತಕ್ಕೆ ಮಕಾಡೆ ಮಲಗಿದ ಡೆಲ್ಲಿ – ಆರ್‌ಸಿಬಿಗೆ 9 ವಿಕೆಟ್‌ಗಳ ಭರ್ಜರಿ ಜಯ

ನವದೆಹಲಿ: ಹೇಜಲ್‌ವುಡ್‌, ಭುವನೇಶ್ವರ್ ಬೌಲಿಂಗ್‌ ಅಬ್ಬರ, ಸಂಘಟಿತ ಫೀಲ್ಡಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌  ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು  ತಂಡ 9 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.‌ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 16.3 ಓವರ್‌ನಲ್ಲಿ 75 ರನ್‌ಗಳಿಸಿ ಆಲೌಟ್‌ ಆಯಿತು. 76 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 6.3 ಓವರ್‌ನಲ್ಲಿಯೇ 77 ರನ್‌ಗಳಿಸುವ ಮೂಲಕ ಗೆಲುವು ಸಾಧಿಸಿದೆ. ಚೇಸಿಂಗ್‌ ಆರಂಭಿಸಿದ ಆರ್‌ಸಿಬಿ ಗೆಲುವಿನ ಭರವಸೆಯೊಂದಿಗೆ ಆಟ ಶುರು …

Read More »

ಸಿದ್ದರಾಮಯ್ಯ ನಂತರ ಸಿಎಂ ರೇಸ್‌ನಲ್ಲಿರೋದು ಡಿಕೆಶಿ ಮಾತ್ರ‌: ಹೆಚ್.ಸಿ.ಬಾಲಕೃಷ್ಣ

ರಾಮನಗರ: ಸಿದ್ದರಾಮಯ್ಯ  ನಂತರ ಸಿಎಂ ರೇಸ್‌ನಲ್ಲಿರೋದು ಡಿಕೆಶಿ ಮಾತ್ರ‌. ಬೇರೆಯವರೂ ರೇಸ್‌ನಲ್ಲಿದ್ದಾರೆ, ಆದರೆ ಅದು ಕಾಲಕ್ಕೆ ತಕ್ಕಂತೆ ತೀರ್ಮಾನ ಆಗುತ್ತೆ. ಸದ್ಯಕ್ಕೆ ಸಿದ್ದರಾಮಯ್ಯನವರು ಬೇಡ ಅಂದಾಗ ಆ ಸ್ಥಾನದ ರೇಸ್‌ನಲ್ಲಿರೋದು ಡಿಕೆಶಿ. ಈ ಅವಧಿಯಲ್ಲೇ ಡಿಕೆಶಿಗೆ ಅವಕಾಶ ಸಿಗುತ್ತೆ. ನಮ್ಮ ಹೈಕಮಾಂಡ್ ಈ ಬಗ್ಗೆ ಸೂಕ್ತ ತೀರ್ಮಾನ ಮಾಡುತ್ತೆ ಎಂದು ರಾಮನಗರದಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ. ಡಿ.ಸುಧಾಕರ್ ಅನಾರೋಗ್ಯ ವಿಚಾರದ ಬಗ್ಗೆ ಹೆಚ್ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ …

Read More »

ಭಾವಪೂರ್ವ ಶ್ರದ್ಧಾಂಜಲಿ

ಗೋಕಾಕದ ಖ್ಯಾತ ಶಂಕರ್ ಬೇಲ್ ಪುರಿ ವ್ಯಾಪಾರಸ್ಥರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದನಿಯ ಎನಿಸುತ್ತಿದೆ. ಇವರ ಆತ್ಮಕ್ಕೆ ದೇವರು ಶಾಂತಿ ಮತ್ತು ಅವರ ಕುಟುಂಬಕ್ಕೆ ಆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ .

Read More »

ಈಗ ಏನ್ ಮಾಡ್ತಿದ್ದಾರೆ ಖ್ಯಾತ ಪತ್ರಕರ್ತ ಲಕ್ಷ್ಮಣ‌ ಹೂಗಾರ್…?

ತುಂಬಾ ಜನರಲ್ಲಿ ಈ‌ ಪ್ರಶ್ನೆ ಇದೆ. ಕಳೆದ ಹತ್ತು ವರ್ಷಗಳ ಹಿಂದೆ ಕನ್ನಡ ಸುದ್ದಿ ವಾಹಿನಿಗಳಲ್ಲಿ ಕುಳಿತು ರಾಜಕೀಯ ನಾಯಕರನ್ನು ಖಡಕ್ ಪ್ರಶ್ನೆಗಳ ಮೂಲಕ ಕಟ್ಟಿ ಹಾಕುತ್ತಿದ್ದ ಈ‌ ಗಟ್ಟಿ ಪತ್ರಕರ್ತ ಈಗ ಎಲ್ಲಿ ಅಂತ. ಸಧ್ಯ ಲಕ್ಷ್ಮಣ ಹೂಗಾರ್ ಅವರು‌ ಕೃಷಿ ‌ಕಾಯದಲ್ಲಿ ತೊಡಗಿರುವ ಒಂದು‌ ಫೋಟೋ ಸಾಮಾಜಿಕ‌ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.‌ ಆದರೆ ಲಕ್ಷ್ಮಣ ಹೂಗಾರ್ ಯಾಕೆ ಪತ್ರಿಕೋದ್ಯಮದಿಂದ‌ ದೂರ ಉಳಿದರು ಎಂಬ ಪ್ರಶ್ನೆಗೆ ಈವರೆಗೂ …

Read More »