Breaking News

new delhi

ಬೆಳಗಿನಿಂದ ಮಧ್ಯಾಹ್ನದವರೆಗೆ ಕೊರೋನಾಗೆ 7 ರಾಜ್ಯಗಳಲ್ಲಿ 7 ಸಾವು..!

ನವದೆಹಲಿ/ಮುಂಬೈ, ಏ.2-ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಸಾವಿನ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇಂದು ಬೆಳಗಿನಿಂದ ಮಧಾಹ್ಯದವರೆಗೆ ಒಟ್ಟು ಏಳು ರಾಜ್ಯಗಳಲ್ಲಿ ಏಳು ಸಾವು ಸಂಭವಿಸಿದ್ದು, ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ಗುಜರಾತ್, ಅರುಣಾಚಲ ಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ತಾನ ರಾಜ್ಯಗಳಲ್ಲಿ ಈ ಸಾವುಗಳು ವರದಿಯಾಗಿವೆ. ಹರಿಯಾಣದಲ್ಲಿ ಪ್ರಥಮ ಕೋವಿಡ್-19 ಸಾವು ಸಂಭವಿಸಿದೆ. ಸಂಬಾಲ ಪ್ರದೇಶದ 67 ವರ್ಷದ ವೃದ್ದರೊಬ್ಬರನ್ನು ಹೆಮ್ಮಾರಿ ಬಲಿ ಪಡೆದಿದೆ. ಹರಿಯಾಣಗೆ ಹೊಂದಿಕೊಂಡಿರುವ …

Read More »

ಮೋದಿ ಎರಡನೇ ಬಾರಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಸರೆನ್ಸ್ ಲಾಕ್‍ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿ

ನವದೆಹಲಿ: ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಪ್ರಧಾನಿ ಮೋದಿ ಎರಡನೇ ಬಾರಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಸರೆನ್ಸ್ ಮಾಡಿ ಮಾತನಾಡಿದ್ದು ಲಾಕ್‍ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿ ಎಂದು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಏಪ್ರಿಲ್ 14ರ ನಂತರ ಲಾಕ್‍ಡೌನ್ ಇರುತ್ತಾ ಇಲ್ಲವೋ ಎನ್ನುವುದರ ಬಗ್ಗೆ ಸ್ಪಷ್ಟವಾಗಿ ಏನು ತಿಳಿಸಿಲ್ಲ. ಈ ವೇಳೆ ಮುಂದಿನ ವಾರವೂ ಕೊರೊನಾ ಪರೀಕ್ಷೆ, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಬೇಕು. ಮೆಡಿಕಲ್ ಉತ್ಪನ್ನಗಳು ಯಾವುದೇ …

Read More »

ಮಂಗ್ಳೂರು-ಕಾಸರಗೋಡು ಗಡಿ ದಿಗ್ಬಂಧನ ತೆರವುಗೊಳಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

ತಿರುವನಂತಪುರಂ: ಕೇರಳದ ರೋಗಿಗಳಿಗೆ ಕರ್ನಾಟಕದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ವಿಧಿಸಿರುವ ಗಡಿ ದಿಗ್ಬಂಧನವನ್ನು ತೆಗೆದುಹಾಕುವಂತೆ ಕೇರಳ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಮಧ್ಯಂತರ ಆದೇಶ ಪ್ರಕಟಿಸಿದೆ. ಕೇರಳ ಹೈಕೋರ್ಟ್ ಅಸೋಸಿಯೇಷನ್ ನವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು. ಮಂಗಳೂರು ಮತ್ತು ಕೇರಳದ ಕಾಸರಗೋಡು ನಡುವೆ ಸಂಪರ್ಕಿಸುವ ರಸ್ತೆಯು ರಾಷ್ಟ್ರೀಯ ಹೆದ್ದಾರಿಗಳ ಭಾಗವಾಗಿದೆ. ಆದ್ದರಿಂದ ಈ ರಸ್ತೆಗಳನ್ನು …

Read More »

ಕೊರೊನಾ ಸೋಂಕು- ಪದ್ಮಶ್ರೀ ಪುರಸ್ಕೃತ ನಿರ್ಮಲ್ ಸಿಂಗ್ ಸಾವು

ಚಂಡೀಗಢ: ಕೊರೊನಾ ಸೋಂಕಿಗೆ ಒಳಗಾಗಿದ್ದ ಪದ್ಮಶ್ರೀ ಪುರಸ್ಕೃತ ನಿರ್ಮಲ್ ಸಿಂಗ್ ಅವರು ಇಂದು ವಿಧಿವಶರಾಗಿದ್ದಾರೆ. ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ 62 ವರ್ಷದ ನಿರ್ಮಲ್ ಸಿಂಗ್ ಪಂಜಾಬ್‍ನ ಅಮೃತಸರ್ ನಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೊನಾ ಸೋಂಕು ತಗುಲಿರುವುದು ಬೆಳಕಿಗೆ ಬಂದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಸಿಂಗ್ ಅವರು ಇತ್ತೀಚೆಗೆ ವಿದೇಶದಿಂದ ಮರಳಿದ್ದರು, ಮಾರ್ಚ್ 30ರಂದು ಉಸಿರಾಟದ ತೊಂದರೆ, ತಲೆ ತಿರುಗುವುದರಿಂದಾಗಿ ಗುರು …

Read More »

ಗ್ರಾಮಕ್ಕೆ ಬಂದಿದ್ದ ಆರೋಗ್ಯ ಸಿಬ್ಬಂದಿಗೆ ಕಲ್ಲೆಸದ ಗ್ರಾಮಸ್ಥರು

ಇಂದೋರ್: ಗ್ರಾಮಸ್ಥರ ಆರೋಗ್ಯ ಪರೀಕ್ಷೆಗಾಗಿ ಬಂದಿದ್ದ ಸಿಬ್ಬಂದಿ ಮೇಲೆ ಕೆಲವರು ಹಲ್ಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಟಾಟಪಟ್ಟಿಯಲ್ಲಿ ನಡೆದಿದೆ. ಗ್ರಾಮಸ್ಥರಿಂದ ತಪ್ಪಿಸಿಕೊಂಡು ಓಡಿ ಹೋಗ್ತಿರುವ ದೃಶ್ಯಗಳ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬುಧವಾರ ಒಂದೇ ದಿನ ಮಧ್ಯಪ್ರದೇಶದಲ್ಲಿ 12 ಕೊರೊನ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರ ಟಾವೆಲ್ ಹಿಸ್ಟರಿ ಹಿಡಿದು ವೈದ್ಯಕೀಯ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರನ್ನು ಥರ್ಮಲ್ ಸ್ಕ್ರೀನಿಂಗ್ ಗೆ …

Read More »

ರೊ ಎಂಟರ್ಪ್ರೈಸಸ್ ಲಿಮಿಟೆಡ್ ಮತ್ತು ಅಜೀಮ್ ಪ್ರೇಮ್‍ಜಿ ಫೌಂಡೇಶನ್ 1,125 ಕೋಟಿ ರೂ. ನೆರವನ್ನು ನೀಡಲು ಮುಂದಾಗಿದೆ.

ಬೆಂಗಳೂರು: ವಿಶ್ವವ್ಯಾಪಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಹಲವು ದೇಶಗಳು ಒದ್ದಾಡುತ್ತಿವೆ. ಈ ಮಹಾಮಾರಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ವಿಪ್ರೊ ಲಿಮಿಟೆಡ್, ವಿಪ್ರೊ ಎಂಟರ್ಪ್ರೈಸಸ್ ಲಿಮಿಟೆಡ್ ಮತ್ತು ಅಜೀಮ್ ಪ್ರೇಮ್‍ಜಿ ಫೌಂಡೇಶನ್ ಕೈಜೋಡಿಸಿದ್ದು, ಬರೋಬ್ಬರಿ 1,125 ಕೋಟಿ ರೂ. ನೆರವನ್ನು ನೀಡಲು ಮುಂದಾಗಿದೆ. ಸಂಸ್ಥೆ ಈಗ ನೀಡುತ್ತಿರುವ ನೆರವು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಡಲು ಉಪಯೋಗವಾಗಲಿದೆ. ವೈದ್ಯಕೀಯ ಸೌಲಭ್ಯ, ಸೋಂಕಿತರ ಚಿಕಿತ್ಸೆಗೆ ಸಹಾಯವಾಗಲಿದೆ ಎಂದು ವಿಪ್ರೊ …

Read More »

ತಮಿಳುನಾಡಿನಲ್ಲಿ ಇಂದು 110 ಮಂದಿಗೆ ಕೊರೊನಾ – ಪಾಸಿಟಿವ್ ಬಂದವರೆಲ್ಲ ದೆಹಲಿ ಸಭೆಯಲ್ಲಿ ಭಾಗಿ

ದೆಹಲಿಯಲ್ಲಿ ನಡೆದ ಸಭೆಗೆ ತಮಿಳುನಾಡು ತತ್ತರ – ನಿನ್ನೆ 50 ಮಂದಿ, ಇಂದು 110 ಜನರಿಗೆ ಸೋಂಕು ದೃಢ ತಮಿಳುನಾಡಿನಲ್ಲಿ ಇಂದು 110 ಮಂದಿಗೆ ಕೊರೊನಾ – ಪಾಸಿಟಿವ್ ಬಂದವರೆಲ್ಲ ದೆಹಲಿ ಸಭೆಯಲ್ಲಿ ಭಾಗಿ ಚೆನ್ನೈ: ಇಂದು ಒಂದೇ 110 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಎಲ್ಲ 110 ಮಂದಿ ದೆಹಲಿ ಮಸೀದಿಯ ಕಾರ್ಯಕ್ರಮಕ್ಕೆ ತೆರಳಿದವರು ಎಂದು ತಮಿಳುನಾಡು ಸರ್ಕಾರ ಹೇಳಿದೆ. ಒಂದೇ ದಿನದಲ್ಲಿ 110 ಪ್ರಕರಣಗಳು ಬೆಳಕಿಗೆ ಬಂದ ಪರಿಣಾಮ …

Read More »

ಕೊರೊನಾ ಹೋರಾಟದಲ್ಲಿ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ 1 ಕೋಟಿ ಪರಿಹಾರ: ಕೇಜ್ರಿವಾಲ್

ನವದೆಹಲಿ: ಕೊರೊನಾ ವೈರಸ್ ರೋಗಿಗಳಿಗೆ ಸೇವೆ ಸಲ್ಲಿಸುತ್ತಿರುವವರು “ದೇಶವನ್ನು ರಕ್ಷಿಸುವ ಸೈನಿಕರಿಗಿಂತ ಕಡಿಮೆಯಿಲ್ಲ”. ಹೀಗಾಗಿ ಕೊವೀಡ್-19 ಹೋರಾಟದಲ್ಲಿ ಭಾಗಿಯಾಗಿರುವ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. “ಯುದ್ಧದ ಸಮಯದಲ್ಲಿ ಸೈನಿಕ ತನ್ನ ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ರಕ್ಷಿಸುತ್ತಾನೆ. ಆದ್ದರಿಂದ ನಮ್ಮ ಇಡೀ ರಾಷ್ಟ್ರವು ಅವರಿಗೆ ಋಣಿಯಾಗಿದೆ. ಇಂದು ಆರೋಗ್ಯ ಕಾರ್ಯಕರ್ತರು ಕೂಡ ದೇಶದ ಜನರನ್ನು ಉಳಿಸಲು …

Read More »

ಲಾಕ್‍ಡೌನ್ ಎಫೆಕ್ಟ್- ಎಲ್‍ಪಿಜಿ ಗ್ರಾಹಕರ ಹೊರೆ ಕಡಿಮೆಗೊಳಿಸಿದ ಸರ್ಕಾರ

ನವದೆಹಲಿ: ಕೊರೊನಾ ವೈರಸ್‍ನಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯ ಲಾಭವನ್ನು ಸಾಮಾನ್ಯ ಜನರು ಈಗ ಪಡೆಯುತ್ತಿದ್ದಾರೆ. ನೈಸರ್ಗಿಕ ಅನಿಲದ ಬೆನ್ನಲ್ಲೇ ಅಡಿಗೆ (ಎಲ್‍ಪಿಜಿ) ಅನಿಲದ ಬೆಲೆಯನ್ನು ಕಡಿಮೆ ಮಾಡಲಾಗಿದೆ. ದೇಶದ ಅತಿದೊಡ್ಡ ಸರ್ಕಾರಿ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ರಾಜಧಾನಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಸಿಲಿಂಡರ್‌ಗೆ 61 ರೂ. ಈ ಕಡಿತಗೊಳಿಸಿದೆ. ಮಾರ್ಚ್ ನಲ್ಲಿ ಒಂದು ಸಿಲೆಂಟರ್ ಬೆಲೆ 805.50 …

Read More »

ಡೇಂಜರ್ ಝೋನ್ ಆಗ್ತಿದೆಯಾ ರಾಷ್ಟ್ರ ರಾಜಧಾನಿ?

ನವದೆಹಲಿ: ಒಂದೇ ದಿನದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಚಿತ್ರಣ ಬದಲಾಗುವ ಸಾಧ್ಯತೆ ಕಂಡು ಬಂದಿದೆ. ಒಂದೇ ದಿನದಲ್ಲಿ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟಾಗುವ ಸಾಧ್ಯತೆ ಇದೆ. ದೆಹಲಿಯ ನಿಜ್ಜಾಮುದ್ದಿನ್ ಮರ್ಕಸ್ ನಲ್ಲಿದ್ದ 163 ಮಂದಿಯನ್ನ ಲೋಕ ನಾಯಕ ಆಸ್ಪತ್ರೆಗೆ ರವಾನಿಸಿದ್ದು, ಐಸೋಲೇಷನ್ ನಲ್ಲಿ ಇಡಲಾಗಿದೆ. ಇವರ ಎಲ್ಲರ ಸ್ಯಾಂಪಲ್ ಗಳನ್ನು ಪಡೆದು ಲ್ಯಾಬ್‍ಗಳಿಗೆ ಕಳುಹಿಸಲಾಗಿದ್ದು ಇಂದು ಸಂಜೆ ವೇಳೆಗೆ ವರದಿ ಬರುವ ಸಾಧ್ಯತೆ ಇದೆ. ವೈದ್ಯರ ಪ್ರಕಾರ ಈ …

Read More »