Breaking News

ರಾಜ್ಯ

ಪೊಲೀಸರಿಂದ ತಪ್ಪಿಸಿಕೊಳ್ಳಲು ಪತ್ನಿಯ ಪೆಟಿಕೋಟನ್ನೇ ಮಾಸ್ಕ್ ಮಾಡ್ಕೊಂಡ!

ಭೋಪಾಲ್: ಚೀನಿ ವೈರಸ್ ಕೋವಿಡ್ 19 ನಮ್ಮ ದೇಶಕ್ಕೂ ಒಕ್ಕರಿಸಿದ ಬಳಿಕ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಕಾಲಿಟ್ಟರೆ ದಂಡ ಕೂಡ ಬೀಳುತ್ತದೆ. ಅಂತೆಯೇ ಮಾಸ್ಕ್ ಧರಿಸದೇ ಬಂದ ವ್ಯಕ್ತಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಪತ್ನಿಯ ಪೆಟಿಕೋಟನ್ನೇ ಮಾಸ್ಕ್ ಮಾಡಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕರ್ನಾಟಕದಂತೆ ಮಧ್ಯಪ್ರದೇಶದಲ್ಲೂ ಭಾನುವಾರ ಕಟ್ಟುನಿಟ್ಟಿನ ಲಾಕ್‍ಡೌನ್ ಹೇರಲಾಗಿತ್ತು. ಕೊರೊನಾ ಚೈನ್ ಬ್ರೇಕ್ ಮಾಡಲು ಲಾಕ್‍ಡೌನ್ ಒಂದೇ …

Read More »

ಲಾಕ್‍ಡೌನ್ ಸಂಕಷ್ಟದಲ್ಲೂ ಸರ್ಕಾರಿ ನೌಕರರ ಹಿತ ಕಾದಿದೆ ಬಿಎಸ್‍ವೈ ಸರ್ಕಾರ: ಸವದಿ

ನವದೆಹಲಿ: ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲೂ ಸರ್ಕಾರಿ ಸೇರಿದಂತೆ ಸಾರಿಗೆ ನೌಕರರ ಹಿತ ಕಾಯುವ ಕೆಲಸವನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ಸರ್ಕಾರಕ್ಕೆ ಒಂದು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಸುದ್ದಿಗೋಷ್ಢಿ ನಡೆಸಿ ಮಾತನಾಡಿದ ಅವರು, ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆರಂಭದಲ್ಲಿ ಅತಿವೃಷ್ಠಿ-ಅನಾವೃಷ್ಠಿ ಕಾಡಿದ್ದು, ರಾಜ್ಯದ 20 ಜಿಲ್ಲೆಗಳು ಸಂಕಷ್ಟದಲ್ಲಿದ್ದವು. ಅದೆಲ್ಲ ಸಮಸ್ಯೆ ನಿಭಾಯಿಸುವ …

Read More »

ನ್ಯಾಯವಾದಿಗಳ ಪಿರ್ಯಾದಿ ತೆಗೆದುಕೊಳ್ಳದ ಪೋಲಿಸ್ ಅಧಿಕಾರಿ….?

    ಕೆಲವು ದಿನಗಳ ಹಿಂದೆ ಹಿಂದು ದೇವರು ಬಗ್ಗೆ ಕೋಮು ಗಲಭೆ ಉಂಟು ಮಾಡುವ ಉದ್ದೇಶದಿಂದ ಹೇಳಿಕೆ ನೀಡಿರುವ ಮಾಜಿ ಸಚಿವ ಮುರಗೇಶ ನಿರಾಣಿಯವರ ವಿರುದ್ದ ಪಿರ್ಯಾದಿ ಕೊಡಲು ಹೋದಾಗ ಸ್ಥಳಿಯ ನಗರ ಪಿಎಸ್ಐ ಯವರು ತೆಗೆದುಕೊಳ್ಳುತ್ತಿಲ್ಲವೆಂದು ಗೋಕಾಕ ನಗರದ ನ್ಯಾಯವಾದಿಗಳಾದ ಬಸವರಾಜ ಕಾಪಸಿ ಇವರು ಪತ್ರಿಕಗೊಷ್ಟಿಯಲ್ಲಿ ಪೋಲಿಸ ಇಲಾಖೆಯ ವಿರುದ್ದ ತಮ್ಮ ಅಸಹಾಕತೆ ತೋರಿದ್ದಾರೆ. ಗೋಕಾಕನಲ್ಲಿ ಪಿ,ಎಸ್,ಐ, ಅಮ್ಮಿನಬಾವಿ ಇವರು ಮೂರ್ನಾಲ್ಕು ದಿನಗಳಿಂದ ನ್ಯಾವಾದಿಗಳು ಮುರಗೇಶ ನಿರಾಣಿ …

Read More »

ಕಾಫಿನಾಡ ಕಾಡಲ್ಲಿ ಬಂಗಾರದ ಕಾಡೆಮ್ಮೆ ಪತ್ತೆ…………

ಚಿಕ್ಕಮಗಳೂರು: 1980-90 ದಶಕದಲ್ಲಿ ಕಣ್ಮರೆಯಾಗಿದ್ದ ಅಪರೂಪದ ಕಾಟಿ ತಳಿಯ ಕಾಡೆಮ್ಮೆ ಸಂತತಿ ಮತ್ತೆ ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಮುತ್ತೋಡಿ ವಲಯದಲ್ಲಿ ಪತ್ತೆಯಾಗಿದೆ. ಕಾಡೆಮ್ಮೆಗಳು ಬಹುತೇಕ ಕಪ್ಪು ಬಣ್ಣದಿಂದ ಕೂಡಿರುತ್ತವೆ. ಆದರೆ ಕಾಟಿ ತಳಿಯ ಈ ಕಾಡೆಮ್ಮೆ ಬಂಗಾರದ ಬಣ್ಣದಿಂದ ಕಂಗೊಳಿಸುತ್ತಿದೆ. ಈ ಅಪರೂಪದ ಕಾಡೆಮ್ಮೆ ಬಣ್ಣ ಹಾಗೂ ಮೈಕಟ್ಟು ನೋಡುಗರಲ್ಲಿ ಅಚ್ಚರಿ ಮೂಡಿಸಿದರೂ 80-90ರ ದಶಕದಲ್ಲಿ ಈ ತಳಿಯ ಕಾಡೆಮ್ಮೆಗಳು ಕಾಫಿನಾಡ ಅರಣ್ಯದಲ್ಲಿ ಇತ್ತು. ಆಗ ಇಂದರ್ಫಿಸ್ಟ್ …

Read More »

ಲೆಕ್ಕದ ವಿಚಾರದಲ್ಲಿ ಕಿತ್ತಾಟಕ್ಕಿಳಿದ ಕಾಂಗ್ರೆಸ್‌ ಮತ್ತು ಬಿಜೆಪಿಗೆ H.D.K.ಪಂಚ ಪ್ರಶ್ನೆ

ಬೆಂಗಳೂರು,-ಕೋವಿಡ್‌ ಹಗರಣದ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಐದು ಪ್ರಶ್ನೆಗಳನ್ನು ಕೇಳಿದ್ದಾರೆ. ಕೊರೊನಾ ವೈರಸ್‌ನಿಂದ ಜನ ಮತ್ತು ಅವರ ಜೀವನ ಸಂಕಷ್ಟದಲ್ಲಿದೆ. ಇಂಥ ಸಂದಿಗ್ಧ ಸನ್ನಿವೇಶದಲ್ಲೂ ಕೋವಿಡ್‌ ಭ್ರಷ್ಟಾಚಾರದಂಥ ಗಂಭೀರ ಆರೋಪ ಕೇಳಿ ಬಂದಿರುವುದು ರಾಜ್ಯದ ದುರ್ದೈವ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಡಳಿತ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿರುವ ಕಾಂಗ್ರೆಸ್‌, ಹಗರಣದ ಬಗ್ಗೆ ಈ ವರೆಗೆ ಯಾವುದೇ ತನಿಖಾ ಸಂಸ್ಥೆಗೆ ದೂರು ನೀಡದೇ …

Read More »

ಹೆಗಲ ಮೇಲೆ ಆಕ್ಸಿಜನ್ ಸಿಲಿಂಡರ್, ಟ್ರೇಯಲ್ಲಿ ಕಂದಮ್ಮ- ಬದುಕುಳಿಯಲಿಲ್ಲ ಮಗು

ಪಾಟ್ನಾ: ಬಿಹಾರದ ಆರೋಗ್ಯ ವ್ಯವಸ್ಥೆಯನ್ನು ತೋರಿಸುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ತಂದೆ ಹೆಗಲ ಮೇಲೆ ಆಕ್ಸಿಜನ್ ಸಿಲಿಂಡರ್ ಹೊತ್ತುಕೊಂಡಿದ್ರೆ, ತಾಯಿ ಟ್ರೇಯಲ್ಲಿ ನವಜಾತ ಶಿಶುವನ್ನು ಹಿಡಿದುಕೊಂಡಿದ್ದಾರೆ. ಕೇಂದ್ರ ರಾಜ್ಯ ಆರೋಗ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಕ್ಷೇತ್ರದಲ್ಲಿಯೇ ಘಟನೆ ನಡೆದಿದೆ. ಜುಲೈ 23ರಂದು ಈ ಘಟನೆ ನಡೆದಿದೆ. ರಾಜಪುರದ ಸುಖೌನಾ ಗ್ರಾಮದ ನಿವಾಸಿ ಸುಮನ್ ಕುಮಾರ್ ಗರ್ಭಿಣಿ ಪತ್ನಿಯನ್ನು ಬಕ್ಸರ್ ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ …

Read More »

ವಾಯವ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದಿಂದ ಎಸಿ ಬಸ್ ಸಂಚಾರ ಆರಂಭ

ಹುಬ್ಬಳ್ಳಿ: ಲಾಕ್‍ಡೌನ್ ಪರಿಣಾಮ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದ ಎಸಿ ಬಸ್‍ಗಳ ಸಂಚಾರವನ್ನು ಸರ್ಕಾರದ ಅನುಮತಿ ಮೇರೆಗೆ ಸೋಮವಾರದಿಂದ ಪುನರಾರಂಭಿಸಲಾಗುತ್ತಿದೆ. ಮೊದಲ ಹಂತದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಮೈಸೂರಿನ ನಡುವೆ ಎಸಿ ಸ್ಲೀಪರ್ ಮತ್ತು ವೋಲ್ವೋ ಬಸ್‍ಗಳ ಸಂಚಾರ ಆರಂಭಿಸಲಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ. ಬಸ್ ಹೊರಡುವ ಸಮಯದ ವಿವರ: ಹುಬ್ಬಳ್ಳಿಯಿಂದ ಬೆಂಗಳೂರಿಗೆ ವೋಲ್ವೊ ಬಸ್ ಮಧ್ಯಾಹ್ನ 3 ಗಂಟೆಗೆ ಮತ್ತು ರಾತ್ರಿ 10.30ಕ್ಕೆ ಹೊರಡುತ್ತದೆ. ಎಸಿ …

Read More »

ನನ್ನ ಸಾವಿಗೆ ನಟ ರಾಜಕಾರಣಿ ನಟ, ರಾಜಕಾರಣಿ ಸೀಮನ್ ಅವರೇ ಕಾರಣ.: ನಾಗಮಂಡಲ ಸಿನಿಮಾ ಖ್ಯಾತಿಯ ನಟಿ ವಿಜಯಲಕ್ಷ್ಮಿ

ಚೆನ್ನೈ: ನಟಿ ವಿಜಯಲಕ್ಷ್ಮಿ ಆಘಾತಕಾರಿ ಪೋಸ್ಟ್ ಮಾಡಿದ್ದು, ನನ್ನ ಸಾವಿಗೆ ನಟ ರಾಜಕಾರಣಿ ನಟ, ರಾಜಕಾರಣಿ ಸೀಮನ್ ಅವರೇ ಕಾರಣ. ನಾನು ಈಗಾಗಲೇ ಬಿಪಿ ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ ಎಂದು ಫೇಸ್ಬುಕ್‍ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ನಾಗಮಂಡಲ ಸಿನಿಮಾ ಖ್ಯಾತಿಯ ನಟಿ ವಿಜಯಲಕ್ಷ್ಮಿ ಫೇಸ್ಬುಕ್ ವಿಡಿಯೋ ಅಪ್‍ಲೋಡ್ ಮಾಡಿ, ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ್ದಾರೆ. ನನ್ನ ಸಾವಿಗೆ ನಟ, ನಿರ್ದೇಶಕ, ರಾಜಕಾರಣಿ ಸೀಮನ್ ಅವರೇ ಕಾರಣ ಎಂದು ವಿಜಯಲಕ್ಷ್ಮಿ ನೇರ ಆರೋಪ ಮಾಡಿದ್ದು, …

Read More »

ಬಳ್ಳಾರಿಯಲ್ಲಿ ಕೊರೋನಾ ಮಹಾಸ್ಪೋಟ : ಇಂದು 579 ಜನರಿಗೆ ಕೊರೋನಾ ದೃಢ, ಮೂವರು ಸಾವು

ಬಳ್ಳಾರಿ : ಜಿಲ್ಲೆಯಲ್ಲಿ ಕೊರೋನಾ ಮಹಾಸ್ಪೋಟವೇ ಉಂಟಾಗಿದೆ. ಇಂದು 579 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಡುವ ಮೂಲಕ, ಸೋಂಕಿತರ ಸಂಖ್ಯೆ 4,046ಕ್ಕೆ ಏರಿಕೆಯಾಗಿದೆ. ಜಿಲ್ಲಾಡಳಿತ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಇಂದು 579 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,046ಕ್ಕೆ ಏರಿಕೆಯಾಗಿದೆ. ಇದುವರೆಗೆ ಕೊರೋನಾ ಸೋಂಕಿತರಾದಂತ 1,622 ಜನರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ …

Read More »

ಏರುತ್ತಲೇ ಇದೆ ಡೀಸೆಲ್ ಬೆಲೆ..

ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಬೆಲೆ ಸ್ಥಿರವಾಗಿದೆ. ಆದರೆ, ಡೀಸೆಲ್‌ ಬೆಲೆ ಏರಿಕೆಯಾಗುತ್ತಲೇ ಇದೆ. ಹೋದ ವಾರದ ಯಾವುದೇ ದಿನಗಳಲ್ಲೂ ಪೆಟ್ರೋಲ್‌ ಬೆಲೆ ಏರಿಕೆಯಾಗಿಲ್ಲ; ಇಳಿಕೆಯೂ ಆಗಿಲ್ಲ. ಲೀಟರ್ ಡೀಸೆಲ್‌ ಬೆಲೆ ಸರಾಸರಿ 40 ಪೈಸೆ ಜಾಸ್ತಿಯಾಗಿದೆ. *ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ …

Read More »