Breaking News

ರಾಜ್ಯ

ಸೋಂಕಿತ ಗರ್ಭಿಣಿ ಕರೆದೊಯ್ಯಲು ಬಂದ ಕೊರೊನಾ ವಾರಿಯರ್ಸ್ ಮೇಲೆ ಕುಟುಂಬಸ್ಥರಿಂದ ಹಲ್ಲೆ

ಬೆಳಗಾವಿ: ಸೋಂಕಿತೆಯನ್ನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ವಿರೋಧ ವ್ಯಕ್ತಪಡಿಸಿ ಕೊರೊನಾ ವಾರಿಯರ್ಸ್​ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ. ಗರ್ಭಿಣಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಕೆಯನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದಿದ್ದ ಆಯಂಬುಲೆನ್ಸ್ ತಡೆದು ಕೊರೊನಾ ವಾರಿಯರ್ಸ್​ನ ಸೋಂಕಿತೆಯ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಬೆಳಗಾವಿಗೆ ಸೋಂಕಿತೆಯನ್ನ ಕರೆದುಕೊಂಡು ಹೋಗದಂತೆ ವಿರೋಧಿಸಿ ಆಯಂಬುಲೆನ್ಸ್ ಡ್ರೈವರ್ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಅರ್ಧ ದಾರಿಗೆ ಆಯಂಬುಲೆನ್ಸ್ …

Read More »

ಅಥಣಿ: ಕೇಂದ್ರದ ಹಣ ಲೂಟಿ ಹೊಡೆಯುವ ಯತ್ನ; ಆರೋಪ

ಅಥಣಿ: ‘ಕೊರೊನಾ ಸೋಂಕು ಪರೀಕ್ಷೆ ಮಾಡಿಸಿದಾಗ ಒಂದೊಂದು ಸಲ ಒಂದೊಂದು ರೀತಿಯ ಫಲಿತಾಂಶವನ್ನು ಆರೋಗ್ಯ ಇಲಾಖೆಯವರು ನೀಡುತ್ತಿದ್ದಾರೆ. ಒಮ್ಮೆ ಪಾಸಿಟಿವ್‌ ನೀಡಿದರೆ, ಮರುದಿನವೇ ನೆಗೆಟಿವ್‌ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಬರುತ್ತಿರುವ ಕೋಟ್ಯಾಂತರ ರೂಪಾಯಿ ಅನುದಾನವನ್ನು ಲೂಟಿ ಹೊಡೆಯಲು ಹೀಗೆ ಮಾಡುತ್ತಿದ್ದಾರೆ’ ಎಂದು ಇಲ್ಲಿನ ಹಿಪ್ಪರಗಿ ಗಲ್ಲಿಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ. ಪಟ್ಟಣದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇದೇ ತಿಂಗಳು 15ರಂದು ಅಥಣಿಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದೆ. ವರದಿ …

Read More »

ಶೀಘ್ರವೇ ನೀರಾವರಿ ಕಾಮಗಾರಿಗಳು ಆರಂಭ

ಗೋಕಾಕ: ನೀರಾವರಿ ಹಾಗೂ ರಸ್ತೆ ಕಾಮಗಾರಿಗೆ ಹೆಚ್ಚಿನ ಮಹತ್ವ ನೀಡಿ ಕಾರ್ಯ ಮಾಡಲಾಗುತ್ತಿದ್ದು, ಇಡೀ ಗೋಕಾಕ ಮತಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಲೋಕೋಪಯೋಗಿ ಇಲಾಖೆಯಿಂದ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗಾಗಿ 6 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ ಬಾಂದಾರ- ಕಮ್‌- ಸೇತುವೆಗಳನ್ನು ನಿರ್ಮಿಸಲು 14.80 ಕೋಟಿ ರೂ. ಕಾಮಗಾರಿಗಳು …

Read More »

ಐಪಿಎಲ್ ಅನೌನ್ಸ್ ಆಗಿದ್ದೇ ತಡ: ರೋಹಿತ್ ಶರ್ಮಾ ರೆಡಿ ಫಾರ್ ಬ್ಯಾಟಿಂಗ್

ಮುಂಬೈ: ಟೀಂ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಐಪಿಎಲ್ ಘೋಷಣೆಯಾಗುತ್ತಿದ್ದಂತೆ ಇನ್ ಸ್ಟಾಗ್ರಾಂ ಪುಟದಲ್ಲಿ ಬ್ಯಾಟಿಂಗ್ ಅಭ್ಯಾಸಕ್ಕೆ ಸಜ್ಜಾಗಿರುವ ಫೋಟೋ ಪ್ರಕಟಿಸಿಕೊಂಡಿದ್ದು, ‘ಕೊನೆಯವರೆಗೂ ನನ್ನ ಆಯ್ಕೆಯ ಅಸ್ತ್ರ’ ಎಂದು ಬರೆದುಕೊಂಡಿದ್ದಾರೆ. ಐಪಿಎಲ್ ಅನೌನ್ಸ್ ಆಗಿದ್ದೇ ತಡ, ಕ್ರಿಕೆಟಿಗರಲ್ಲಿ, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಮತ್ತೆ ಕ್ರಿಕೆಟ್ ಆರಂಭವಾಗುವ ಖುಷಿಯಲ್ಲಿ ಕ್ರಿಕೆಟಿಗರು ಇದ್ದಾರೆ. ಈ ನಡುವೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ತಮ್ಮ ಇದನ್ನು ನೋಡಿ ಅಭಿಮಾನಿಗಳು ಭಾರೀ ಮೆಚ್ಚುಗೆ …

Read More »

ಕಾರ್ಗಿಲ್ ಹುತಾತ್ಮ ಯೋಧರ ಕುಟುಂಬದೊಂದಿಗೆ ನಾವಿದ್ದೇವೆ: ಸಿಎಂ

ಬೆಂಗಳೂರು: ಇಂದು 21ನೇ ಕಾರ್ಗಿಲ್ ವಿಜಯ್ ದಿವಸ್ ಆದ ಹಿನ್ನೆಲೆ, ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ ಬಿಎಎಸ್​ ಯಡಿಯೂರಪ್ಪ ನಮನ‌ ಸಲ್ಲಿಸಿದ್ರು. ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಿಎಸ್​ವೈ ಭಾಗಿಯಾದ್ರು. ಇದೇ ವೇಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ಉಪಸ್ಥಿತರಿದ್ರು. ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಆಯೋಜಿಸಿರುವ ಕಾರ್ಗಿಲ್ ವಿಜಯ್ ದಿವಸ್​ನಲ್ಲಿ ಹೆಮ್ಮೆಯಿಂದ ಪಾಲ್ಗೊಂಡಿದ್ದೇನೆ. ಭಾರತ …

Read More »

ಗಣಿನಾಡು ಬಳ್ಳಾರಿಯಲ್ಲಿ ಮತ್ತೆ ಮಚ್ಚು ಲಾಂಗ್ ಗಳ ಸದ್ದು

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಮತ್ತೆ ಮಚ್ಚು ಲಾಂಗ್ ಗಳ ಸದ್ದು ಮಾಡಿದ್ದು ಹಾಡಹಗಲೇ ರೌಡಿಶೀಟರ್ ಸಿಡಿ ರಮೇಶ್ (30)ನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬಳಿಯ ಟಿಬಿ ಸ್ಯಾನಿಟೆರಿಯಂ ಬಳಿ ಕೊಚ್ವಿ ಕೊಲೆ ಮಾಡಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಹಿಂಭಾಗದಲ್ಲಿ ಸಿಡಿ ರಮೇಶ್ ಇರುವುದನ್ನು ಗಮನಿಸಿದ ದುಷ್ಕರ್ಮಿಗಳ ತಂಡ ಆಟೋದಲ್ಲಿ ಬಂದ …

Read More »

ವೃದ್ಧ ಬ್ರಾಹ್ಮಣರೊಬ್ಬರು ಮೃತರಾದಾಗ ಅವರ ಅಂತಿಮ ಸಂಸ್ಕಾರವನ್ನು ಮುಸ್ಲಿಂ ಯುವಕನೊಬ್ಬ ನಡೆಸಿದ್ದಾರೆ.

ಉಡುಪಿ: ವೃದ್ಧ ಬ್ರಾಹ್ಮಣರೊಬ್ಬರು ಮೃತರಾದಾಗ ಅವರ ಅಂತಿಮ ಸಂಸ್ಕಾರವನ್ನು ಮುಸ್ಲಿಂ ಯುವಕನೊಬ್ಬ ನಡೆಸಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ. ಎರಡು ವರ್ಷಗಳ ಹಿಂದೆ ದೇವಸ್ಥಾನವೊಂದರ ಆವರಣದಲ್ಲಿ ಸಿಕ್ಕ ವೇಣುಗೋಪಾಲ್ ರಾವ್ ಅವರನ್ನು ಆಸಿಫ್ ತನ್ನ ಆಶ್ರಮದಲ್ಲಿ ಸಾಕಿ ಸಲಹಿದರು. ವೃದ್ಧರ ಮನೆಯವರನ್ನು ಸಂಪರ್ಕಿಸಿದಾಗ ಇವರನ್ನು ನೋಡಿಕೊಳ್ಳಲು ಯಾರೂ ಆಸಕ್ತಿ ತೋರಿರಲಿಲ್ಲ. ಹಾಗಾಗಿ ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿಯಲ್ಲಿರುವ ತನ್ನ ಆಪದ್ಬಾಂಧವ ಆಶ್ರಮದಲ್ಲಿ ಇವರನ್ನು ಆಸಿಫ್ ನೋಡಿಕೊಳ್ಳುತ್ತಿದ್ದರು. ಎರಡು ವರ್ಷಗಳ ನಂತರ …

Read More »

ಬೆಳಗಾವಿ | 30ರಿಂದ ಸಿಇಟಿ ಪರೀಕ್ಷೆ: ಸಿದ್ಧತೆಗೆ ಸೂಚನೆ

ಬೆಳಗಾವಿ: ‘ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜುಲೈ 30ರಿಂದ ಮೂರು ದಿನಗಳವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು. ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಕೋವಿಡ್-19 ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಒಳಗಡೆ ಹಾಗೂ ಸುತ್ತಲೂ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ವಿದ್ಯಾರ್ಥಿಗಳು ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು. …

Read More »

ಬೆಳಗಾವಿ| ಬ್ರಾಹ್ಮಣರಿಗೆ ಮೀಸಲಾತಿ: ವೆಬಿನಾರ್‌ ನಾಳೆ.

ಬೆಳಗಾವಿ: ‘ರಾಜ್ಯ ಸರ್ಕಾರ ಇತ್ತೀಚೆಗೆ ಬ್ರಾಹ್ಮಣರಿಗೆ ಶೇ 10ರಷ್ಟು ಮೀಸಲಾತಿ ಜಾರಿ ಮಾಡಿ ಆದೇಶಿಸಿದೆ. ಇದರಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಆಗುವ ಪರಿಣಾಮಗಳ ಕುರಿತು ಜುಲೈ 26ರಂದು ಸಂಜೆ 4ಕ್ಕೆ ವೆಬಿನಾರ್‌ ಮೂಲಕ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿದ್ಯಾರ್ಥಿ ಬಂಧುತ್ವ ವೇದಿಕೆ ಮತ್ತು ಮಾನವ ಬಂಧುತ್ವ ವೇದಿಕೆ ತಿಳಿಸಿವೆ. ‘ಕಲಬುರ್ಗಿಯ ಕನಕ ಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಚಾಲನೆ ನೀಡುವರು. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ …

Read More »

ಬೆಳಗಾವಿ | 116 ಮಂದಿಗೆ ಕೋವಿಡ್ ದೃಢ…

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 116 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಒಬ್ಬರು ಮೃತರಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಚಿಕಿತ್ಸೆಗಾಗಿ ಅವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಿ ಸಂಖ್ಯೆ 48,135 ಆದ 47 ವರ್ಷದ ವ್ಯಕ್ತಿ ಜುಲೈ 14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು 20ರಂದು ಸಾವಿಗೀಡಾಗಿದ್ದಾರೆ. ಅವರಿಗೆ ತೀವ್ರ ಉಸಿರಾಟದ ತೊಂದರೆ ಇತ್ತು. ಅವರು ಬೆಳಗಾವಿ ತಾಲ್ಲೂಕಿನವರು ಎಂದು ಮಾಹಿತಿ ನೀಡಿದೆ.   ಸವದತ್ತಿ ವರದಿ: ತಾಲ್ಲೂಕಿನಲ್ಲಿ 19 ಮಂದಿಗೆ ಕೋವಿಡ್ …

Read More »