Breaking News

ರಾಜ್ಯ

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಪಾಟ್ನಾ: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ , ಕೊಲೆಗೈದಿದ್ದ ಆರೋಪಿಗೆ ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯವೊಂದು ಮರಣ ದಂಡನೆ ಶಿಕ್ಷೆಯನ್ನು ಶನಿವಾರ ಪ್ರಕಟಿಸಿದೆ. ಕೇಸ್ ದಾಖಲಾದ ಆರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಿ ನ್ಯಾಯಾಲಯ ಈ ಮಹತ್ವದ ಶಿಕ್ಷೆ ಪ್ರಕಟಿಸಿದೆ. ಪಾಟ್ನಾದಿಂದ 140 ಕಿ.ಮೀ. ದೂರದಲ್ಲಿರುವ ಬಾಕ್ರೌರು ಹಳ್ಳಿಯಲ್ಲಿನ ಪ್ರಮುಖ ಶಂಕಿತನ ಮನೆಯಿಂದ ಬ್ಯಾಂಗ್ ವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೃತದೇಹವನ್ನು ಆಗಸ್ಟ್ 25 ರಂದು ಗೋಪಾಲ್ ಗಂಜ್ …

Read More »

ಬಜೆಟ್ ಪೂರ್ವಭಾವಿ ಸಭೆಗಳು ಮುಕ್ತಾಯ: ಸಿಎಂ ಯಡಿಯೂರಪ್ಪ

ಬೆಂಗಳೂರು, ಫೆ. 19: ಬರುವ ಮಾರ್ಚ್ 8ರಂದು ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಬಜೆಟ್ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಗಳು ಮುಗಿದಿವೆ ಎಂದು ಅವರು ಹೇಳಿದ್ದಾರೆ. ಗೃಹ ಇಲಾಖೆ ಸೇರಿದಂತೆ ಇನ್ನೆರಡು ಇಲಾಖೆಗಳು ಬಾಕಿ ಇವೆ. ಇನ್ನು ಅರ್ಧ ದಿನ ಸಭೆ ಮಾಡಿದರೆ ಬಜೆಟ್ ಪೂರ್ವ ತಯಾರಿ ಮುಗಿಯುತ್ತದೆ. ಇದಾದ ನಂತರ ಬಜೆಟ್ …

Read More »

ದಂಡ ಕಟ್ಟಿಸಿಕೊಳ್ಳುವ ಬದಲು ಯುವತಿಗೆ ಕಿಸ್ ಕೊಟ್ಟ ಪೊಲೀಸ್ ಅಧಿಕಾರಿ.!

ಪೆರು:ವಿಲಕ್ಷಣ ಘಟನೆಯೊಂದರಲ್ಲಿ,ಪೆರುವಿನಲ್ಲಿ ದಂಡ ವಿಧಿಸುವ ಬದಲು ಪೊಲೀಸ್ ಅಧಿಕಾರಿ ಮಹಿಳೆಯೊಬ್ಬಳನ್ನು ಚುಂಬಿಸಿದ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ. ಈಗ ವೈರಲ್ ಆಗಿರುವ ಸಿಸಿಟಿವಿ ವಿಡಿಯೋ ತುಣುಕಿನಲ್ಲಿ, ಲಿಮಾದಲ್ಲಿ ಕೋವಿಡ್ ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ಅಧಿಕಾರಿ ಮಹಿಳೆಗೆ ದಂಡ ವಿಧಿಸುವುದಕ್ಕೆ ನಿಲ್ಲಿಸಿರುವುದನ್ನು ಕಾಣಬಹುದು. ದಂಡ ಕೊಡದೆ ಚುಂಬನ ಕೊಡುವಂತೆ ಅಧಿಕಾರಿ ಆಕೆಯ ಮನವೊಲಿಸಿದ್ದು ವೀಡಿಯೋದಲ್ಲಿ ಕಾಣುತ್ತದೆ. ದಂಡದ ಶುಲ್ಕ ವಿಧಿಸಲು ಪ್ರಾರಂಭಿಸಿದಾಗ ಮಹಿಳೆ ಅಧಿಕಾರಿಗೆ ಹತ್ತಿರವಾಗುವುದನ್ನು ಕಾಣಬಹುದು, ಆದರೆ ಕೆಲವು ಸೆಕೆಂಡುಗಳ ಹಿಂಜರಿಕೆಯ ನಂತರ, ಅಧಿಕಾರಿ …

Read More »

ಎಂಬಿಬಿಎಸ್​ ವಿದ್ಯಾರ್ಥಿನಿ ಸಾವಿನ ಮನೆಯ ಕದ ತಟ್ಟಿದ್ದೇಕೆ?

ಬಾಗಲಕೋಟೆ: ನಗರದ ಮೆಡಿಕಲ್​ ಕಾಲೇಜಿನಲ್ಲಿ ಓದುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಸಿ.ಎಸ್.ಸಿಂಧುರೇಖಾ(25) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಬಾಗಲಕೋಟೆಯ ನವನಗರದ ಕುಮಾರೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದಳು. ಕಾಲೇಜು ಆವರಣದಲ್ಲಿ ಬಾಡಿಗೆ ಮನೆಯಲ್ಲಿ ಪೋಷಕರೊಂದಿಗೆ ನೆಲೆಸಿದ್ದ ಸಿಂಧುರೇಖಾ, ತಡರಾತ್ರಿ ಸಾವಿನ ಮನೆಯ ಕದ ತಟ್ಟಿದ್ದಾಳೆ. ಸಿಂಧುರೇಖಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ತನಿಖೆ ಬಳಿಕ ನಿಖರ ಕಾರಣ ತಿಳಿಯಲಿದೆ. ಈಕೆಯ …

Read More »

ವೈರಲ್ ಆಯ್ತು ಕೆ. ಎಲ್. ರಾಹುಲ್ ಹಾಗೂ ನಟಿ ಆಶಿಕಾ ರಂಗನಾಥ್ ಫೋಟೋ

ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ ಕೆ.ಎಲ್. ರಾಹುಲ್ ಹಾಗೂ ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ನಟಿ ಆಶಿಕಾ ರಂಗನಾಥ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆಶಿಕಾ ರಂಗನಾಥ್ ಫ್ಯಾನ್ಸ್ ಪೇಜ್ ಗಳಲ್ಲಿ ಈ ಫೋಟೋ ಶೇರ್ ಆಗಿದೆ. ಕೆ.ಎಲ್. ರಾಹುಲ್ ಅವರನ್ನು ಭೇಟಿ ಮಾಡಿದಾಗ ಆಶಿಕಾ ರಂಗನಾಥ್ ಈ ಫೋಟೋ ತೆಗೆಸಿಕೊಂಡಿದ್ದಾರೆ. ಕೆ.ಎಲ್. ರಾಹುಲ್ ಟೀಮ್ ಇಂಡಿಯಾದ ಅತ್ಯುತ್ತಮ ಆಟಗಾರರಾದರೆ, ನಟಿ ಆಶಿಕಾ ರಂಗನಾಥ್ ಸ್ಯಾಂಡಲ್ ವುಡ್ ನ …

Read More »

ಅಮಿತ್‌ ಶಾ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ ದೀದಿ ಸೋದರಳಿಯ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ. ಪ್ರಕರಣದ ಆಲಿಕೆಗೆ ಅಮಿತ್‌ ಶಾ ಖುದ್ದಾಗಿ ಅಥವಾ ವಕೀಲರ ಮೂಲಕ ಫೆಬ್ರವರಿ 22ರಂದು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಇಲ್ಲಿನ ಬಿಧಾನನಗರದ ಸಂಸದ/ಶಾಸಕರ ಕೋರ್ಟ್‌ನ ವಿಶೇಷ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಭಾರತೀಯ ದಂಡ ಸಂಹಿತೆಯ 500ನೇ ವಿಧಿ ಅಡಿ ಮಾನಹಾನಿ ಪ್ರಕರಣ ದಾಖಲಿಸಲಾಗಿದ್ದು, ಅಮಿತ್‌ …

Read More »

ಪೆಟ್ರೋಲ್​ ದರ ಏರಿಕೆ ಕುರಿತು ʼಅಮುಲ್​ ಗರ್ಲ್ʼ​ಗೂ ಶುರುವಾಯ್ತು ಚಿಂತೆ.!

ದೇಶದಲ್ಲಿ ಸದ್ಯ ಪೆಟ್ರೋಲ್​ ದರ ಏರಿಕೆಯದ್ದೇ ಸದ್ದು. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆಯಿಂದಾಗಿ ಶ್ರೀ ಸಾಮಾನ್ಯ ಕಂಗಾಲಾಗಿದ್ದಾನೆ. ಇತ್ತ ಪ್ರತಿಷ್ಟಿತ ಡೈರಿ ಬ್ರ್ಯಾಂಡ್​ ಅಮುಲ್​ ಕೂಡ ಪೆಟ್ರೋಲ್​ ಹಾಗೂ ಡೀಸೆಲ್​ ದರ ಏರಿಕೆ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣ್ತಿದೆ. ಅಮುಲ್​ ಗರ್ಲ್​ನ್ನು ಬಳಸಿ ಮಾಡಲಾದ ಡೂಡಲ್​​ನಲ್ಲಿ ಪೆಟ್ರೋಲ್​ ದರ ಏರಿಕೆಯನ್ನ ವಿಮರ್ಶಿಸಲಾಗಿದೆ. ಇದರಲ್ಲಿ ಚೀಸ್​ನ್ನ ತಿನ್ನುತ್ತಾ ಕಾರಿಗೆ ಪೆಟ್ರೋಲ್​ ತುಂಬಿಸಿಕೊಳ್ತಿರುವ ಅಮುಲ್​ ಗರ್ಲ್​ ದುಃಖದಿಂದ ಮೀಟರ್​ …

Read More »

ನನಗೆ ಸಮಾಜವೇ ತಂದೆ-ತಾಯಿ, ಸಮಾಜವೇ ಗುರು: ಪಂಚಮಸಾಲಿ ಸಮಾವೇಶದಲ್ಲಿ ಬಸವ ಜಯಮೃತ್ಯುಂಜಯಶ್ರೀ

ಬೆಂಗಳೂರು: ಪಾದಯಾತ್ರೆ ಆರಂಭಿಸುವಾಗ ಭಕ್ತರ ಜತೆ ಒಬ್ಬನೇ ಇದ್ದೆ. ದಾವಣಗೆರೆ ತಲುಪಿದಾಗ ವಚನಾನಂದಶ್ರೀ ಜತೆಯಾದರು. ವಿಜಯಾನಂದ ಕಾಶಪ್ಪನವರ್ ಪಂಚಮಸಾಲಿಗರ ಬಲಗೈ ಬಂಟ. ನಮ್ಮ ಪರವಾಗಿ ಸಂಪುಟ ಸಭೆಯಲ್ಲಿ ಸಚಿವರು ದನಿ ಎತ್ತಿದ್ದಾರೆ. ಅದಕ್ಕಾಗಿ ಸಚಿವರಾದ ಸಿ.ಸಿ.ಪಾಟೀಲ್ ಹಾಗೂ ಮುರುಗೇಶ್ ನಿರಾಣಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೋರಾಟಕ್ಕೆ ಕೊಪ್ಪಳ ಪಂಚಮಸಾಲಿಗರ ಕೊಡುಗೆ ಹೆಚ್ಚಿದೆ. ಪಾದಯಾತ್ರೆಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಬಸವ ಜಯಮೃತ್ಯುಂಜಯಶ್ರೀ ಸ್ವಾಮೀಜಿ ಮಾತನಾಡಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ …

Read More »

ಹೆಣ್ಣು ಸಿಗಲಿಲ್ಲಾಎಂದು ಮನನೊಂದು ಆತ್ಮಹತ್ಯೆ

ಕಬ್ಬೂರ – ತನ್ನ  ಗೆಳೆಯವರೆಲ್ಲಾ ಮದುವೆ ಮಾಡಿಕೊಂಡರೂ ತನಗೆ ಹೆಣ್ಣು ಸಿಗಲಿಲ್ಲಾ ಎಂದು ಮನನೊಂದು ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವ ಮಹೇಶ ಕೆಂಪಣ್ಣ ಮುತಾಲಿಕ(೨೪). ತನ್ನ ವಾರಿಗೆಯವರು ಮದುವೆ ಮಾಡಿಕೊಂಡರು ತನಗೆ ಮದುವೆ ಆಗಲಿಲ್ಲಾ ಎಂದು ಮನನೊಂದು ಮನೆಯಲ್ಲಿ ಯಾರಿಗೂ ಹೇಳದೆ ತಮ್ಮ ಜಮೀನಿನಲ್ಲಿ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಖರಣ ದಾಖಲಿಸಿರುತ್ತಾರೆ. ಘಟನಾ ಸ್ಥಳಕ್ಕೆ ಚಿಕ್ಕೋಡಿಯ ಪಿಎಸ್‌ಐ ಅಶೋಕ …

Read More »

ಮುಂದುವರೆದ ʼಮಹಾʼ ಸಿಎಂ ಉದ್ಧಟತನ; ಕನ್ನಡ ಪ್ರಾಬಲ್ಯವಿರುವ ಹಳ್ಳಿಗಳಲ್ಲಿ ಮರಾಠಿ ಪ್ರಚಾರಕ್ಕೆ ಆದೇಶ

ಮುಂಬೈ: ಗಡಿ ವಿಚಾರದ ಬೆನ್ನಲ್ಲೇ ಇದೀಗ ಭಾಷೆ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತೆ ಕ್ಯಾತೆ ತೆಗೆದಿದ್ದು, ಕನ್ನಡ ಪ್ರಾಬಲ್ಯವಿರುವ ಗಡಿ ಭಾಗದಲ್ಲಿನ ಗ್ರಾಮಗಳಲ್ಲಿ ಮರಾಠಿ ಪ್ರಚಾರ ನಡೆಸುವಂತೆ ಆದೇಶ ನೀಡಿದ್ದಾರೆ. ಗಡಿ ಭಾಗದಲ್ಲಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಕನ್ನಡ ಪ್ರಾಬಲ್ಯವಿರುವ ಹಳ್ಳಿಗಳಲ್ಲಿ ಮರಾಠಿ ಭಾಷೆಯ ಪ್ರಚಾರ ಮಾಡಬೇಕು. ಶೇ.50 ರಷ್ಟು ಮರಾಠಿ ಮಾತನಾಡುವಂತಾಗಬೇಕು ಎಂದು ಪತ್ರದ ಮೂಲಕ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.   ಜತ್, …

Read More »