Breaking News

ರಾಜ್ಯ

“ಬೆಳಗಾವಿ ಲೋಕಸಭಾ ಉಪಚುನಾವಣೆಗೆ ತಮ್ಮ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧಿಸುವುದಿಲ್ಲ

ಕಿತ್ತೂರು: “ಬೆಳಗಾವಿ ಲೋಕಸಭಾ ಉಪಚುನಾವಣೆಗೆ ತಮ್ಮ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧಿಸುವುದಿಲ್ಲ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಸಮೀಪದ ಅಂಬಡಗಟ್ಟಿ ಗ್ರಾಮದಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ಮಗಳಿಗೆ ಇನ್ನೂ ರಾಜಕೀಯ ಅನುಭವದ ಕೊರತೆ ಇದೆ. ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಾರೆಂಬುದು ಊಹಾಪೋಹ. ಈಗಲೇ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ” ಎಂದು ಸತೀಶ ಸ್ಪಷ್ಟಪಡಿಸಿದರು. “ಈಗಾಗಲೇ ತಿಳಿಸಿರುವಂತೆ ಉಪಚುನಾವಣೆಗೆ ಪಕ್ಷದಿಂದ ಮೂವರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಲಾಗಿದೆ. …

Read More »

ತಮಿಳುನಾಡಿನ ಬಳಿಕ ಕೇರಳದಾದ್ಯಂತ ʼಪೋ ಮೋನೆ ಮೋದಿʼ ಟ್ರೆಂಡಿಂಗ್

ಕೊಚ್ಚಿ:  ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದು, ಕಳೆದೆರಡು ದಿನಗಳಿಂದ ಗೋ ಬ್ಯಾಕ್ ಮೋದಿ ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್ ನಾದ್ಯಂತ ಟ್ರೆಂಡಿಂಗ್ ಆಗಿತ್ತು. ರೈತರ ಪ್ರತಿಭಟನೆಗೆ ಯಾವುದೇ ಸ್ಪಂದನೆ ನೀಡದ ಪ್ರಧಾನಿಯನ್ನು ನಾವು ನಂಬುವುದಿಲ್ಲ ಎಂದು ಹಲವು ಬಳಕೆದಾರರು ಟ್ವೀಟ್ ಮಾಡಿದ್ದರು. ಇದೀಗ ಅದರ ಬೆನ್ನಲ್ಲೇ ‘ಪೋ ಮೋನೆ ಮೋದಿ’ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ತಮಿಳುನಾಡಿನಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ ಮೋದಿ ಕೊಚ್ಚಿ …

Read More »

ಸಿಂಘು ಗಡಿಯಲ್ಲಿ 72 ವರ್ಷದ ರೈತ ಹೃದಯಾಘಾತದಿಂದ ಸಾವು

ಹೊಸದಿಲ್ಲಿ, : ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪಂಜಾಬ್‌ನ 72 ವರ್ಷದ ರೈತರೋರ್ವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತಪಟ್ಟಿರುನ ರೈತ ಮೊಗ ಜಿಲ್ಲೆಯ ನಿವಾಸಿ ಹಂಸ ಸಿಂಗ್ ಎಂದು ಹರ್ಯಾಣದ ಸೋನಿಪತ್‌ನ ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿರುವ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹಂಸ ಸಿಂಗ್ ಗುರುವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಮರಣೋತ್ತರ ಪರೀಕ್ಷೆ ಶುಕ್ರವಾರ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

Read More »

ರೈತರು, ಮನೆ ನಿರ್ಮಿಸುವವರಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್

ಶಿವಮೊಗ್ಗ: ಈ ಹಣಕಾಸು ಸಾಲಿನಲ್ಲಿ ಅನುಮೋದನೆಗೊಂಡಿರುವ ಎಲ್ಲಾ ಕಾಮಗಾರಿಗಳು ಮಾರ್ಚ್ ಒಳಗಾಗಿ ಪೂರ್ಣಗೊಳಿಸಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡದೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದ್ದಾರೆ. ಶಿಕಾರಿಪುರದಲ್ಲಿ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತೋಟಗಾರಿಕಾ ಬೆಳೆಗಳನ್ನು ಹೆಚ್ಚು ಬೆಳೆಯಲು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಪ್ರತಿ ವರ್ಷ ತೋಟಗಾರಿಕಾ ಬೆಳೆಗಳ ಕ್ಷೇತ್ರ ಹೆಚ್ಚಳವಾಗಬೇಕು. ರೈತರು ಮಿಶ್ರ ಬೆಳೆ ಬೆಳೆಯುವುದರಿಂದ ಹೆಚ್ಚಿನ ಆರ್ಥಿಕ ಲಾಭ ಪಡೆಯಲು ಸಾಧ್ಯವಿದೆ …

Read More »

2021ʼರ ಸ್ವಚ್ಛ ಭಾರತ ಅಭಿಯಾನದಡಿ ʼಶೌಚಾಲಯಕ್ಕೆ ಆನ್ಲೈನ್ʼನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?

ಭಾರತ ಸರ್ಕಾರವು ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಹಳ್ಳಿಗಳು ಮತ್ತು ನಗರಗಳಲ್ಲಿ ಶೌಚಾಲಯಗಳನ್ನ ನಿರ್ಮಿಸುತ್ತಿದೆ. ಈ ಯೋಜನೆಯಡಿ ಹೆಚ್ಚಿನ ಮನೆಗಳಲ್ಲಿ ಶೌಚಾಲಯಗಳನ್ನ ನಿರ್ಮಿಸಲಾಗಿದೆ. ಆದ್ರೆ, ನಿಮ್ಮ ಮನೆ ತಪ್ಪಿದಲ್ಲಿ ನೀವು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಶೌಚಾಲಯಗಳನ್ನ ನಿರ್ಮಿಸಲು ಸಾಧ್ಯವಾಗದ ಅನೇಕ ಬಡ ಕುಟುಂಬಗಳು ದೇಶದಲ್ಲಿದ್ದು, ಸರ್ಕಾರವು ಆ ಕುಟುಂಬಗಳಿಗೆ 12000 ರೂ. ಮೊತ್ತವನ್ನ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಯಾರು ಈ ಯೋಜನೆಯ ಫಲಾನುಭವ ಪಡೆಯಬೋದು..! * ಅರ್ಜಿದಾರನು ಭಾರತದ …

Read More »

ಡಿಜಿಟಲ್‌ ರೂಪದಲ್ಲಿ ವಿಮಾ ದಾಖಲೆ: ಐಆರ್‌ಡಿಎಐ

ನವದೆಹಲಿ: ವಿಮಾ ಪಾಲಿಸಿ ಹೊಂದಿರುವವರಿಗೆ ಪಾಲಿಸಿಯ ದಾಖಲೆಗಳನ್ನು ಡಿಜಿಟಲ್ ಸ್ವರೂಪದಲ್ಲಿ ನೀಡಬೇಕು ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಕಂಪನಿಗಳಿಗೆ ಸೂಚನೆ ನೀಡಿದೆ. ಈ ದಾಖಲೆ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಪಾಲಿಸಿದಾರರಿಗೆ ತಿಳಿಸಿಕೊಡಬೇಕು ಎಂದು ಕೂಡ ಅದು ಸೂಚಿಸಿದೆ. ಈ ಕ್ರಮಗಳನ್ನು ಕೈಗೊಳ್ಳುವುದರಿಂದ ವಿಮಾ ಕ್ಲೇಮ್‌ ಪ್ರಕ್ರಿಯೆಗೆ ವೇಗ ಸಿಗುತ್ತದೆ ಎಂದು ಪ್ರಾಧಿಕಾರ ಹೇಳಿದೆ. ಪಾಲಿಸಿ ದಾಖಲೆಗಳನ್ನು ಡಿಜಿಟಲ್ ಸ್ವರೂಪದಲ್ಲಿ ನೀಡುವುದರಿಂದ ವೆಚ್ಚ ಕಡಿಮೆ ಆಗುತ್ತದೆ, ದಾಖಲೆಗಳು …

Read More »

ಒಂದು ವರ್ಷದೊಳಗೆ ರಾಜ್ಯದ ಎಲ್ಲಾ ಬಂಜಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಲಾಗುವುದು: BSY

ದಾವಣಗೆರೆ: ಮುಂದಿನ ಒಂದು ವರ್ಷದೊಳಗೆ ರಾಜ್ಯದ ಎಲ್ಲಾ ಬಂಜಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಕಂದಾಯ ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜರ 282ನೇ ಜಯಂತ್ಯೋತ್ಸವ ಉದ್ಘಾಟಿಸಿ, ಮಾತನಾಡಿದ ಅವರು, ಮುಂದಿನ ಸೇವಾಲಾಲ್ ಜಯಂತಿ ವೇಳೆಗೆ ಸರ್ವೆ ಮುಗಿಸಿ ಕಂದಾಯ ಗ್ರಾಮಗಳನ್ನಾಗಿ ಮಾಡುವ ಕಾರ್ಯ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದರು. ಸೂರಗೊಂಡನಕೊಪ್ಪಕ್ಕೆ ಮಂಜೂರಾಗಿರುವ ರೇಲ್ವೆ ಸ್ಟೇಷನ್ ಗೆ ಸಂತ …

Read More »

ಲೋಕಸಭಾ ಉಪಚುನಾವಣೆಯಲ್ಲಿ ಮತ್ತೇ ಅರಳಲಿದೆ ಕಮಲ : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದು, ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ರವಿವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಜರುಗಿದ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಅವರು, ಇದರಿಂದ ತಳಮಟ್ಟದಿಂದ ಪಕ್ಷ ಸಂಘಟಿಸಲು ಗ್ರಾಮ ಪಂಚಾಯತಿ ಚುನಾವಣೆ ಉತ್ತಮ ಅಡಿಪಾಯ ಎಂದು …

Read More »

ಗೋಕಾಕ : ಇಬ್ಬರು ಮಕ್ಕಳೊಂದಿಗೆ ಘಟಪ್ರಭಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ !

ಗೋಕಾಕ : ಮನೆಯಲ್ಲಿ ಜಗಳವಾಡಿ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದ ಮಹಿಳೆ ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಗೋಕಾಕ ತಾಲ್ಲೂಕಿನ ಅರಭಾಂವಿಯ ಸಾವಿತ್ರಿ ರಾಜು ಬನಾಜ(30), ಪೂಜಾ (4) ಲಕ್ಷ್ಮಿ (2), ಮೃತರು. ಮನೆಯಲ್ಲಿ ಜಗಳವಾಡಿ ತಮ್ಮಇಬ್ಬರು ಮಕ್ಕಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ, ಕಾಣೆಯಾಗಿದ್ದರು. ಈ ಬಗ್ಗೆ ಗಂಡನ ಮನೆಯವರು ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದರು. ಆದ್ರೆ ಭಾನುವಾರ ಬೆಳಿಗ್ಗೆ ಗೋಕಾಕ …

Read More »

ಗೋಕಾಕ: ಇಲ್ಲಿಯ ರೋಟರಿ ರಕ್ತ ಭಂಡಾರದಲ್ಲಿ ಜಿಎನ್‍ಎಸ್ ಶಾಲೆಯ 1998-99 ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರಲ್ಲಿ ಪಾಲ್ಗೊಂಡ ಹಳೆಯ ವಿದ್ಯಾರ್ಥಿಗಳು.

ಗೋಕಾಕ : ಎಲ್ಲ ದಾನಗಳಲ್ಲಿ ಶ್ರೇಷ್ಠವಾದ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವಂತೆ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಅರ್ಥಪೂರ್ಣವಾದ ಸಾಮಾಜಿಕ ಕಳಿಕಳಿಯ ಮಾರ್ಗದಲ್ಲಿ ಜೀವನ ಸಾಗಿಸೋಣವೆಂದು ಇಲ್ಲಿಯ ಜಿಎನ್‍ಎಸ್ ಶಾಲೆಯ 1998-99 ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಶೋಕ ಕೌಜಲಗಿ ಹೇಳಿದರು. ರವಿವಾರದಂದು ಇಲ್ಲಿಯ ರೋಟರಿ ರಕ್ತ ಭಂಡಾರದಲ್ಲಿ ಜಿಎನ್‍ಎಸ್ ಶಾಲೆಯ 1998-99 ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ರವಿವಾರ ದಿ. 21 ರಂದು ಇಲ್ಲಿಯ ಶುಭ …

Read More »